Abandoned Parents : ಒಂಭತ್ತು ಮಕ್ಕಳಿದ್ದರೂ ಒಂಟಿಯಾದ 85 ವರ್ಷದ ವೃದ್ಧೆ!

By Kannadaprabha NewsFirst Published Dec 6, 2021, 3:09 PM IST
Highlights
  • ತಾನು ಸಾಕಿ ಸಲಹಿದ ಒಂಭತ್ತು ಮಕ್ಕಳಿಗೂ ಇದೀಗ 85ರ ಹರೆಯದ ವೃದ್ಧ ತಾಯಿ ಹೊರೆ
  • ಮಕ್ಕಳ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವಂತೆ ತಾಯಿ  ಮೊರೆ

ಉಳ್ಳಾಲ (ಡಿ.06): ತಾನು ಸಾಕಿ ಸಲಹಿದ ಒಂಭತ್ತು ಮಕ್ಕಳಿಗೂ ಇದೀಗ 85ರ ಹರೆಯದ ವೃದ್ಧ ತಾಯಿ (Old Mother) ಹೊರೆಯಾಗುವ ಮೂಲಕ ಒಂಟಿಯಾಗಿದ್ದಾರೆ. ಮಕ್ಕಳ (Children) ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವಂತೆ ತಾಯಿ ಪಾಂಡೇಶ್ವರ ಠಾಣೆಯ (Police Station) ಹಿರಿಯ ನಾಗರಿಕರ ಸಹಾಯವಾಣಿಯ ಕದ ತಟ್ಟಿದ್ದಾರೆ.  ಸುಬ್ಬಲಕ್ಷ್ಮೀ (85) ಎಂಬವರು ಮಕ್ಕಳೊಂದಿಗೆ ವಾಸಿಸಲು ಹೋರಾಡುತ್ತಿರುವ ವೃದ್ಧೆ. ಐವರು ಪುತ್ರಿಯರು, ಐವರು ಪುತ್ರರ ಪೈಕಿ ಓರ್ವ ಪುತ್ರ ತೀರಿಕೊಂಡಿದ್ದಾರೆ. ಉಳಿದ ನಾಲ್ವರು ಪುತ್ರರ (Sons) ಮನೆಯಲ್ಲಿ ಒಂದು ತಿಂಗಳಿನಂತೆ ಉಳಿಯಬೇಕು ಅನ್ನುವ ಆಸೆಯಿದ್ದರೂ ಈವರೆಗೆ ಈಡೇರಿಲ್ಲ. 

ತೊಕ್ಕೊಟ್ಟು ಕಾಪಿಕಾಡು ನಿವಾಸಿ ಪುತ್ರನ ಮನೆಯಲ್ಲಿದ್ದ ಸುಬ್ಬಲಕ್ಷ್ಮೀ ಅವರನ್ನು ಮೂರು ತಿಂಗಳ ಹಿಂದೆ ಪುತ್ರ ಹಾಗೂ ಸೊಸೆ ಸೇರಿಕೊಂಡು ರಿಕ್ಷಾ ಮೂಲಕ ದೂರದ ಸಂಬಂಧಿ (Relatives) ಮನೆಗೆ ಕಳುಹಿಸಿದ್ದರು. ಅಲ್ಲಿಂದ ಉಳಿದ ಪುತ್ರರು ಕರೆದುಕೊಂಡು ಹೋಗುತ್ತಾರೆಂದು ಹಂಬಲದಲ್ಲಿದ್ದ   ಅವರಿಗೆ ಮೂರು ತಿಂಗಳಾದರೂ ನಿರಾಸೆಯಾಗಿತ್ತು. ವಿವಾಹಿತ ಪುತ್ರಿಯರ  ಮನೆಯಲ್ಲಿ ಆಸರೆ ನಿಲ್ಲಲು ಮನಮಾಡದ ಪುತ್ರರಿಗೆ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಇದರಿಂದ ನೊಂದು ನ್ಯಾಯ (Justice) ದೊರಕಿಸಿ ಕೊಡುವಂತೆ ಹಿರಿಯ ನಾಗರಿಕರ ಸಹಾಯವಾಣಿಯನ್ನು ಎರಡು ವಾರಗಳ ಹಿಂದೆ ಸಂಪರ್ಕಿಸಿದ್ದಾರೆ.

ಸುಬ್ಬಲಕ್ಷ್ಮೀ ಅವರ ದೂರಿಗೆ ಸ್ಪಂದಿಸಿದ ಠಾಣಾ (Police Station) ನಿರೀಕ್ಷಕಿ ರೇವತಿ ಅವರು ಸಹಾಯವಾಣಿಯ (Help Line) ಸಂಯೋಜಕರ ತಂಡದ ಮೂಲಕ ಪುತ್ರರನ್ನು ಸಂಪರ್ಕಿಸಿ ಎರಡು ವಾರಗಳ ಸಮಯಾವಕಾಶ ನೀಡಿದ್ದಾರೆ. ಆದರೆ ಯಾರೊಬ್ಬರೂ ಸುಬ್ಬಲಕ್ಷ್ಮೀ ಅವರನ್ನು ಕೊಂಡೊಯ್ಯುವ ಮನಸ್ಸು ಮಾಡದ ಹಿನ್ನೆಲೆಯಲ್ಲಿ ಶನಿವಾರ ಸಹಾಯವಾಣಿ ಸಂಯೋಜಕ ಎಸ್‌. ರೇವತಿ, ಕೌನ್ಸಿಲರ್‌ಗಳಾದ ಮಹಿಮಾ, ರಂಜಿನಿ, ಉಷಾ, ಆಶಿತಾ ಅವರು ಪೊಲೀಸರ ಸಹಕಾರದೊಂದಿಗೆ ಸುಬ್ಬಲಕ್ಷ್ಮೀ  ಅವರನ್ನು ತೊಕ್ಕೊಟ್ಟು ಕಾಪಿಕಾಡು ಬಳಿಯಿರುವ ಪುತ್ರನ ಮನೆಗೆ ಕರೆತಂದರೂ, ಮನೆಗೆ ಬೀಗ ಹಾಕಲಾಗಿತ್ತು. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಸೊಸೆ, ಪೊಲೀಸರು ಹಾಗೂ ಸಹಾಯವಾಣಿಯ ಸಿಬ್ಬಂದಿಗೆ ಕೆಟ್ಟಶಬ್ದಗಳಿಂದ ನಿಂದಿಸಿದ್ದರು. ಮತ್ತೆ ವೃದ್ಧೆ ಸುಬ್ಬಲಕ್ಷ್ಮೀ  ಅವರನ್ನು ವಾಪಸ್ಸು ಕರೆತರಲಾಗಿದೆ. ನಾಲ್ವರು ಪುತ್ರರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸುವ ತೀರ್ಮಾನಕ್ಕೆ ಮುಂದಾಗಲಾಗಿದೆ. ಅಲ್ಲಿಯೂ ಕೇಳದೇ ಇದ್ದಲ್ಲಿ 2006ರ ಕಾಯ್ದೆಯಡಿ ದೂರು ದಾಖಲಿಸಿ, ಸಹಾಯಕ ಆಯುಕ್ತರ ನೇತೃತ್ವದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.

ಆಸ್ತಿ ವಾಪಸ್ ಪಡೆವ ಹಕ್ಕು ವೃದ್ಧರಿಗೆ :  ವಯಸ್ಸಾದ ತಂದೆ, ತಾಯಿ ಮತ್ತು ಅತ್ತೆ, ಮಾವಂದಿರ (Parents) ಯೋಗ ಕ್ಷೇಮ ನೋಡದ ಮಕ್ಕಳಿಗೆ (children) ಬರೆದುಕೊಟ್ಟ ಆಸ್ತಿಯನ್ನು (property) ವಾಪಸ್‌ ಪಡೆದುಕೊಳ್ಳುವ ಹಕ್ಕು ಆ ವೃದ್ಧರಿಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ (judge Sujatha madivalappa sambrani ) ಹೇಳಿದರು. ಪಟ್ಟಣದ ಸಮೀಪದ ಅಂಕನಹಳ್ಳಿ ತಿಳಿಸಿದ್ದಾರೆ.

ಯಾವುದೇ ಒಬ್ಬ ವ್ಯಕ್ತಿ ತಂದೆ (Father), ತಾಯಿಗೆ (Mother) ವಯಸ್ಸಾದ ಮೇಲೆ ಅವರ ಪೋಷಣೆ ಮಾಡುವುದು ಪ್ರತಿ ಒಬ್ಬ ಮಕ್ಕಳ ಕರ್ತವ್ಯ. ಆದರೆ ಕೆಲವು ಮಕ್ಕಳು  ಅವರ ಆಸ್ತಿ ಹಣ ಎಲ್ಲವನ್ನು ಬಳಸಿಕೊಂಡು ಅವರ ಕ್ಷೇಮತೆಯನ್ನು ನೋಡದೆ ಬೇರೆ ಕಳುಹಿಸಿ ಒಪ್ಪತ್ತಿನ ಉಟಕ್ಕೂ (Food) ಗತಿ ಇಲ್ಲದಂತೆ ಮಾಡಿರುವ ಘಟನೆಗಳಿವೆ. ಅದು ಬದಲಾವಣೆ ಆಗಬೇಕು ಏಕೆಂದರೆ ಅವರು ಕೊಟ್ಟಿರುವ ಆಸ್ತಿಯನ್ನು ಮತ್ತೆ ಅವರೇ ಪಡೆದುಕೊಳ್ಳುವ ಅವಕಾಶ ಉಚಿತ ಕಾನೂನಿನಡಿ ಇದೆ ಎಂದು ತಿಳಿಸಿದರು.

ಅದೇ ರೀತಿ ಶಿಕ್ಷಣದಿಂದ (Education) ಯಾವುದೇ ಮಗು ವಂಚಿತರಾಗಬಾರದು ಇತ್ತೀಚೆಗೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ (Girl Child education) ಕುಂಠಿತವಾಗುತ್ತಿದೆ. ಮುಂದೆ ಮೊಬೈಲ್ನಲ್ಲಿ (Mobile) ಶಿಕ್ಷಣ ಪಡೆಯುವುದು ಬೇಡ ಹೆಚ್ಚಾಗಿ ಚಿಕ್ಕಮಕ್ಕಳಿಗೆ ಮತ್ತು ಯುವ ಸಮುದಾಯಕ್ಕೆ ಮೊಬೈಲ್ ಬಳಕೆ ಮಾರಕವಾಗಲಿದ್ದು, ಮಕ್ಕಳಲ್ಲಿ ಬರವಣಿಗೆ ಮತ್ತು ಪಠ್ಯತರ ಚಟುವಟಿಕೆಗಳು ಹಾಗೂ ಗುರುವಿನ ಪೋಷಕರ ಬಾಂಧವ್ಯ ಕಡಿಮೆಯಾಗುತ್ತಿದೆ. ಇದರಿಂದ ಮುಂದೆ ಮಕ್ಕಳಿಗೆ ವಿದ್ಯಾಭ್ಯಾಸ  ಮತ್ತು ಉದೋಗ (Job) ಕೈ ತಪ್ಪಲಿದೆ. ಹಾಗಾಗಿ ಶಿಕ್ಷಣ ಇಲಾಖೆ ಮತ್ತು ಪೋಷಕರು ಎಚ್ಚರವಹಿಸಿ ಎಂದು ತಿಳಿಸಿದರು.

click me!