council Election Karnataka : JDS ಸಹಕಾರ ಕೋರಿದ BJP : ಇವರಲ್ಲೇ ತಳಮಳ, ಗೊಂದಲ!

By Kannadaprabha News  |  First Published Dec 6, 2021, 2:05 PM IST
  • ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ತು ಚುನಾವಣೆ
  • ವಿಧಾನ ಪರಿಷತ್ತು ಚುನಾವಣೆ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಾರಕ್ಕೇರಿದೆ

 ಚಿಕ್ಕಬಳ್ಳಾಪುರ (ಡಿ.06):  ರಾಜ್ಯ ರಾಜಕೀಯ (Politics) ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ತು ಚುನಾವಣೆ (MLC Election) ಅವಿಭಜಿತ ಕೋಲಾರ (Kolar) ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗಳಲ್ಲಿ ತಾರಕ್ಕೇರಿದೆ. ಆದರೆ ಚುನಾವಣೆಗೆ ಬರೀ 4 ದಿನ ಬಾಕಿ ಇರುವಾಗಲೇ ಪಕ್ಷಗಳಲ್ಲಿ ಎದ್ದಿರುವ ಮೈತ್ರಿ ಉಹಾಪೋಹ ಪಕ್ಷದ ಕಾರ್ಯಕರ್ತರಲ್ಲಿ ತಳಮಳ, ಗೊಂದಲಕ್ಕೆ ಕಾರಣವಾಗಿದೆ. ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಳಗೊಂಡ ಕೋಲಾರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತುನ 1 ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್‌ (Congress), ಜೆಡಿಎಸ್‌ (JDS) ಹಾಗೂ ಬಿಜೆಪಿ (BJP) ಪಕ್ಷಗಳ ನಡುವೆ ತೀವ್ರ ಪೈಪೋಟಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಒಳಗೊಳಗೆ ರಾಜಕೀಯ ಪಕ್ಷಗಳ ನಡುವೆ ಮೈತ್ರಿ ಹೊಂದಾಣಿಕೆ ನಡೆದಿದೆಯೆಂಬ ವದಂತಿ ಈಗ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿ, ಜೆಡಿಎಸ್‌ ವಲಯದಲ್ಲಿ ತಳಮಳ ಸೃಷ್ಟಿಸಿದೆ.

ಜೆಡಿಎಸ್‌ ಬೆಂಬಲ ನಿರೀಕ್ಷೆ:  ಜೆಡಿಎಸ್‌ ಪಕ್ಷದವರು ನಮಗೆ ಬೆಂಬಲ ಕೊಡುತ್ತಿದ್ದಾರೆಂಬ ಬಿಜೆಪಿ (BJP) ಮುಖಂಡರು, ಕಾರ್ಯಕರ್ತರು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಅತ್ತ ಜೆಡಿಎಸ್‌ ಮುಖಂಡರು, ಬಿಜೆಪಿ ಮುಖಂಡರು, ಕಾರ್ಯಕರ್ತರು ನಮಗೆ ಬೆಂಬಲ ಕೊಡುತ್ತಿದ್ದಾರೆಂದು ಹೇಳಿಕೊಂಡು ತಿರುಗಾಡುತ್ತಿದ್ದು ವಿಧಾನ ಪರಿಷತ್ತು ಚುನಾವಣೆಯಲ್ಲಿ (Election) ಯಾವ ಪಕ್ಷದ ನಡುವೆ ಹೊಂದಾಣಿಕೆ ಮೈತ್ರಿ ನಡೆದಿದೆ? ನಿಜವಾಗಿಯು ಮೈತ್ರಿ ಆಗಿದೆಯೆ? ಅಥವ ಇಲ್ಲವೇ ಎನ್ನುವುದು ಸ್ಪಷ್ಟವಾಗದೇ ಬಿಜೆಪಿ, ಜೆಡಿಎಸ್‌ ಎರಡು ಪಕ್ಷಗಳಲ್ಲಿನ ಮತದಾತರರು ಪ್ರಮುಖವಾಗಿ ಪಕ್ಷದ ಕಾರ್ಯಕರ್ತರು ತೀವ್ರ ಗೊಂದಲ ಏರ್ಪಟ್ಟಿದೆ.

Latest Videos

undefined

ವಿಧಾನ ಪರಿಷತ್ತು ಚುನಾವಣೆಯಲ್ಲಿ ಬರೋಬ್ಬರಿ 5,800 ಕ್ಕೂ ಹೆಚ್ಚು ಮತದಾರರು ಎರಡ ಜಿಲ್ಲೆಗಳಲ್ಲಿದ್ದಾರೆ. ಸದ್ಯದ ರಾಜಕೀಯ ಪಕ್ಷಗಳ (Political Parties) ಬಲಾಬಲ ಸ್ಥಳೀಯವಾಗಿ ನೋಡುವುದಾದರೆ ಕಾಂಗ್ರೆಸ್‌ ಪಕ್ಷ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಸದಸ್ಯರನ್ನು ಹೊಂದಿ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಜೆಡಿಎಸ್‌ ಪಕ್ಷ ಇದೆ. ಮೂರನೇ ಸ್ಥಾನದಲ್ಲಿ ಬಿಜೆಪಿ ಪಕ್ಷ ಇದೆ. ಇದನ್ನು ಬಿಜೆಪಿ ನಾಯಕರು ಕೂಡ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಇದರ ಮಧ್ಯೆಯು ಬಿಜೆಪಿ ನಾಯಕರು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ನಾಯಕರು, ಕೆಲ ಮಾಜಿ ಶಾಸಕರು ನಮಗೆ ಬೆಂಬಲ ನೀಡಿದ್ದಾರೆ.

ಜೆಡಿಎಸ್‌ ಭರವಸೆ ನೀಡಿಲ್ಲ: ಮತದಾರರರು ನಮ್ಮ ಪರವಾಗಿ ಇದ್ದಾರೆಂದು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಜೊತೆಗೆ ಜೆಡಿಎಸ್‌ ಪಕ್ಷ ನಮಗೆ ಬೆಂಬಲ ಕೊಡುತ್ತಿದೆಯೆಂದು ಕೆಲವು ಕಡೆ ಹೇಳಿಕೊಳ್ಳುತ್ತಿದ್ದಾರೆ. ಮತ್ತೊಂದಡೆ ಜೆಡಿಎಸ್‌ ಕೂಡ ಬಿಜೆಪಿ (BJP) ಪಕ್ಷಕ್ಕೆ ಗೆಲುವಿನ ಸಂಖ್ಯೆ ಇಲ್ಲ. ಆಗಾಗಿ ನಮಗೆ ಬೆಂಬಲ ಕೊಡುತ್ತಿದ್ದಾರೆಂದು ಕೆಲವು ಕಡೆ ನಾಯಕರು ಹೇಳಿಕೊಳ್ಳುತ್ತಿರುವುದರಿಂದ ರಾಜಕೀಯ ಹೊಂದಾಣಿಕೆ ಆಗಿರುವ ಬಗ್ಗೆ ಯಾರಿಗೂ ಸ್ಪಷ್ಟತೆ ಸಿಕ್ಕಿಲ್ಲ. ಜೊತೆಗೆ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕರು ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲ ನೀಡುವಂತೆ ಜೆಡಿಎಸ್‌ ನಾಯಕರನ್ನು ಸಂಪರ್ಕಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದರೂ ಜೆಡಿಎಸ್‌ ಕಡೆಯಿಂದ ಇದುವರೆಗೂ ಯಾವುದೇ ಮೈತ್ರಿ ಭರವಸೆ ಸಿಕ್ಕಿಲ್ಲ.

ಆದರೆ ಸ್ಥಳೀಯವಾಗಿ ಎರಡು ಪಕ್ಷಗಳಲ್ಲಿನ ಮುಖಂಡರು, ಕಾರ್ಯಕರ್ತರು ಮಾತ್ರ ಜೆಡಿಎಸ್‌ ಬೆಂಬಲ ನಮಗೆ, ಬಿಜೆಪಿ ಬೆಂಬಲ ನಮಗೆ ಎಂದು ಹೇಳಿಕೊಂಡು ತಿರುಗಾಡುತ್ತಿರುವುದ ಅಂತೂ ಸತ್ಯವಾಗಿದ್ದು ಮೈತ್ರಿ ಅಥವ ಹೊಂದಾಣಿಕೆ ವಿಚಾರ ಸದ್ಯಕ್ಕೆ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ತಳಮಳ, ಗೊಂದಲ ಸೃಷ್ಠಿಯಾಗುತ್ತಿದ್ದು ಮತದಾನಕ್ಕೆ ಕೇವಲ ಗಂಟೆಗಳು ಬಾಕಿ ಇರುವಾಗ ಬಿಜೆಪಿ, ಬಿಜೆಪಿ ನಾಯಕರು ಯಾವ ರೀತಿ ಮೈತ್ರಿ ಮಾಡಿಕೊಳ್ಳುತ್ತಾರೆ, ಯಾವ ಪಕ್ಷದ ಬಲ ಯಾರಿಗೆ ಸಿಗಲಿದೆ. ಇಲ್ಲ. ಮೂರು ಪಕ್ಷಗಳು ಗೆಲುವುಗೆ ಗುದ್ದಾಟ ನಡೆಸುತ್ತೇವೆಯೆ ಎಂಬುದನ್ನು ಕಾದು ನೋಡಬೇಕಿದೆ.

ವಿಧಾನ ಪರಿಷತ್ತು ಚುನಾವಣೆಯಲ್ಲಿ (Election) ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಇಲ್ಲ. ಒಂದು ವೇಳೆ ಆ ರೀತಿ ಹೊಂದಾಣಿಕೆ ಇದ್ದಿದ್ದರೆ, ಅಭ್ಯರ್ಥಿಯನ್ನು ಬಿಜೆಪಿಯಿಂದ ಕಣಕ್ಕಿಳಿಸುತ್ತಿರಲಿಲ್ಲ. ಅಭ್ಯರ್ಥಿ ಕಣದಲ್ಲಿದ್ದಾರೆ, ಅವರ ಗೆಲುವಿಗೆ ನಾವು ಶ್ರಮಿಸುತ್ತಿದ್ದೇವೆ. ಎರಡು ಜಿಲ್ಲೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣ ಇದೆ. ಹಾಗಾಗಿ ಸಹಕಾರ ನೀಡುವಂತೆ ನಾವು ಜೆಡಿಎಸ್‌ ನಾಯಕರನ್ನು ಕೇಳಿದ್ದೇವೆ.

-ಡಾ.ಕೆ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ, ಚಿಕ್ಕಬಳ್ಳಾಪುರ,

click me!