ಹೊಟ್ಟೆ ನೋವಿನ ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿ ಸಾವು

Published : Jul 28, 2020, 04:20 PM ISTUpdated : Jul 28, 2020, 05:02 PM IST
ಹೊಟ್ಟೆ ನೋವಿನ  ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿ ಸಾವು

ಸಾರಾಂಶ

ವಿಪರಿತ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಟಾನಿಕ್ ಎಂದು  ಸ್ಯಾನಿಟೈಸರ್​​  ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

ರಾಯಚೂರು, (ಜುಲೈ.28): ಹೊಟ್ಟೆ ನೋವಿನ  ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ರಾಯಚೂರು  ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

 ನೆಲಹಾಳ ಗ್ರಾಮದ ಖಾಸಿಂಸಾಬ್(65) ಮೃತ ವ್ಯಕ್ತಿ. ಜು.26ರಂದು ಖಾಸಿಂಸಾಬ್​ಗೆ ವಿಪರಿತ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಗ ಮನೆಯಲ್ಲಿದ್ದ ಸ್ಯಾನಿಟೈಸರ್​ ಅನ್ನು ಹೊಟ್ಟೆ ನೋವಿನ ಟಾನಿಕ್ ಎಂದು ಸೇವಿಸಿ ಅಸ್ವಸ್ಥಗೊಂಡಿದ್ದಾರೆ.

ಸ್ಯಾನಿಟೈಸರ್‌ ಬಳಕೆ ಹೇಗಿರಬೇಕು? ಬೇಕಾಬಿಟ್ಟಿ ಸ್ಯಾನಿಟೈಸರ್‌ ಬಳಸೋದು ಡೇಂಜರ್!

ಕೂಡಲೇ ಮನೆಯವರು ಖಾಸಿಂಸಾಬ್ ಅವರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಖಾಸಿಂಸಾಬ್ ಸೋಮವಾರ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. 

ಈ ಘಟನೆಗೆ ಸಂಬಂಧಿಸಿದಂತೆ ಯರಗೇರಾ ಠಾಣೆಯಲ್ಲಿ ಕಲಂ 174 ಸಿಆರ್​ಪಿಸಿ ಅಡಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಆದಾಯ ತೆರಿಗೆ ಇಲಾಖೆಯಿಂದ ವಿಟಿಯು ಪಡೆದ 700 ಕೋಟಿ ಹಣದ ಮೇಲೆ ಸರ್ಕಾರದ ಕಣ್ಣು, 250 ಕೋಟಿ ಕೊಡುವಂತೆ ಪಟ್ಟು
ಊರುಂಟು ಜನರಿಲ್ಲ, ಉತ್ತರ ಕನ್ನಡದ 40 ಗ್ರಾಮಗಳಲ್ಲಿ ಬದುಕಿನ ಕುರುಹೇ ಇಲ್ಲ!