ಅಂಬೇಡ್ಕರ್‌ ಧಾರಾವಾಹಿ ಪ್ರದರ್ಶನಕ್ಕೆ ಜಿಟಿಡಿ ಮೆಚ್ಚುಗೆ..!

By Kannadaprabha NewsFirst Published Jul 28, 2020, 3:13 PM IST
Highlights

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ ಚರಿತ್ರೆಯನ್ನು ಧಾರಾವಾಹಿ ಮುಖಾಂತರ ಪ್ರದರ್ಶನ ಮಾಡುತ್ತಿರುವುದಕ್ಕೆ ಶಾಸಕ ಜಿ.ಟಿ. ದೇವೇಗೌಡ ಅಭಿನಂದಿಸಿದರು.

ಮೈಸೂರು(ಜು.28): ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ ಚರಿತ್ರೆಯನ್ನು ಧಾರಾವಾಹಿ ಮುಖಾಂತರ ಪ್ರದರ್ಶನ ಮಾಡುತ್ತಿರುವುದಕ್ಕೆ ಶಾಸಕ ಜಿ.ಟಿ. ದೇವೇಗೌಡ ಅಭಿನಂದಿಸಿದರು.

ತಾಲೂಕಿನ ಶೆಟ್ಟಿನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಮಹಾನಾಯಕ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಧಾರಾವಾಹಿ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸಮಾಧಾನ ಸ್ಫೋಟ: ಇಲ್ಲದನ್ನ ಮೈಮೇಲೆ ಎಳೆದುಕೊಂಡ ಸಿಎಂ, ಕಟೀಲ್‌ ಫಜೀತಿ

ಇಂತಹ ಕಾರ್ಯಕ್ರಮಗಳು ಪ್ರಸ್ತುತದಲ್ಲಿ ಬಹುಮುಖ್ಯವಾಗಿದೆ. ವಿಶ್ವಜ್ಞಾನಿಯಾದ ಬಿ.ಆರ್‌. ಅಂಬೇಡ್ಕರ್‌ ಅವರು ವಿಶ್ವ ಮಟ್ಟದಲ್ಲಿ ಚಾರಿತ್ರಾರ್ಹರಾಗಿ ಉಳಿದಿದ್ದಾರೆ. ಅವರು ನೀಡಿದ ಭಾರತ ಸಂವಿಧಾನದಿಂದ ನಾನು ಸಹ ಒಬ್ಬ ಶಾಸಕನಾಗಲು, ಸಚಿವನಾಗಲು ಇವತ್ತು ನಿಮ್ಮ ಮುಂದೆ ನಿಂತು ಮಾತನಾಡುವ ಅವಕಾಶವನ್ನು ನೀಡಿದೆ. ಅವರ ಶಿಕ್ಷಣ, ಸಂಘಟನೆ, ಹೋರಾಟ ತತ್ವಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದಿದ್ದಾರೆ.

ನಿಗಮ ಮಂಡಳಿ ಗಿಫ್ಟ್: ಸಿಎಂ ವಿರುದ್ಧ ಸಿಡಿದೆದ್ದ ಬಿಜೆಪಿ ಶಾಸಕ....!

ಪ್ರತಿ ಮನೆಯ ಸದಸ್ಯರು ಕುಳಿತು ನೋಡುವಂತಹ ಧಾರಾವಾಯಿಯಾಗಿ ಮಹಾನಾಯಕ ಡಾ.ಬಿ.ಆರ್‌. ಅಂಬೇಡ್ಕರ್‌ ಮೂಡಿಬರುತ್ತಿದೆ. ಇದರಿಂದ ಸಮಾಜದಲ್ಲಿ ಹೆಣ್ಣು, ಗಂಡು, ಜಾತಿ, ಧರ್ಮ ಎನ್ನದೇ ನಾವೆಲ್ಲರೂ ಒಂದೇ ಎನ್ನುವ ಸಮಾನತೆ ಭಾವ ಸೃಷ್ಟಿಯಾಗಲಿ ಎಂದು ಆಶಿಸಿದರು. ಮಾಜಿ ಮೇಯರ್‌ ಪುರುಷೋತ್ತಮ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ತಾಪಂ ಸದಸ್ಯೆ ನೇತ್ರಾವತಿ ವೆಂಕಟೇಶ್‌ ಮಾತನಾಡಿದರು. ಸಂಘದ ಅಧ್ಯಕ್ಷ ಡಾ. ಚಂದ್ರಗುಪ್ತ ಸ್ವಾಗತಿಸಿದರು. ಕಾರ್ಯದರ್ಶಿ ಎಚ್‌. ಶಿವಮೂರ್ತಿ ನಿರೂಪಿಸಿದರು.

click me!