21 ವರ್ಷದ ಬ್ಯೂಟಿಗಾಗಿ ಬಟ್ಟೆ ಬಿಚ್ಚಿದ ಅಂಕಲ್‌, ನಕಲಿ ಪೊಲೀಸ್‌ಗೆ ದುಡ್ಡು ಕಳ್ಕೊಂಡು ಪಾಪರ್‌!

Published : Dec 27, 2024, 04:02 PM IST
21 ವರ್ಷದ ಬ್ಯೂಟಿಗಾಗಿ ಬಟ್ಟೆ ಬಿಚ್ಚಿದ ಅಂಕಲ್‌, ನಕಲಿ ಪೊಲೀಸ್‌ಗೆ ದುಡ್ಡು ಕಳ್ಕೊಂಡು ಪಾಪರ್‌!

ಸಾರಾಂಶ

ಬೆಂಗಳೂರಿನಲ್ಲಿ 21 ವರ್ಷದ ಯುವತಿಯೊಬ್ಬಳು 57 ವರ್ಷದ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡು ಸಾವಿರಾರು ರೂಪಾಯಿ ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದಾಳೆ. ನಕಲಿ ಪೊಲೀಸರನ್ನು ಬಳಸಿಕೊಂಡು ಈ ಕೃತ್ಯವನ್ನು ಎಸಗಲಾಗಿದೆ.

ಬೆಂಗಳೂರು (ಡಿ.27): ಇದು 21ರ ಯವತಿ ಹಾಗೂ 57ರ ಅಂಕಲ್‌ ಲವ್‌ ಸ್ಟೋರಿ. 21 ವರ್ಷದ ಬ್ಯೂಟಿ ಸಿಕ್ಕಳು ಎಂದು ಬಟ್ಟೆ ಬಿಚ್ಚಿದ ಅಂಕಲ್‌, ಹನಿಟ್ರ್ಯಾಪ್‌ಗೆ ಒಳಗಾನಿ ಸಾವಿರಾರು ರೂಪಾಯಿ ಹಣ ಹಾಗೂ 5 ಲಕ್ಷದ ಚಿನ್ನದ ಸರವನ್ನು ಕಳೆದುಕೊಂಡ ಸ್ಟೋರಿ. ಯುವತಿ ಸಿಕ್ಕಳು ಎಂದು ಹಿಂದೂ ಮುಂದೂ ನೋಡದೇ ಆಳಕ್ಕೆ ಬಿದ್ದ ಸಿವಿಲ್‌ ಕಂಟ್ರ್ಯಾಕ್ಟರ್‌ಗೆ ನಕಲಿ ಪೊಲೀಸ್‌ ಮೂಲಕ ಸುಂದರಿ ವಂಚನೆ ಮಾಡಿದ್ದಾರೆ. ಪರಿಚಯವಾದ ಬಳಿಕ ಮಾಯದ ಮಾತನಾಡಿದ್ದ 21ರ ಯುವತಿ, ಬಳಿಕ ನಕಲಿ ಪೊಲೀಸರ ಟೀಮ್‌ಅನ್ನು ಕರೆದುಕೊಂಡು 57 ವರ್ಷದ ಅಂಕಲ್‌ಅನ್ನು ಸಂಪೂರ್ಣವಾಗಿ ದೋಚಿದ್ದಾಳೆ. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಹನಿಟ್ರ್ಯಾಪ್ ಗ್ಯಾಂಗ್‌ ಬಂಧನವಾಗಿದೆ.

ಬ್ಯಾಡರಹಳ್ಳಿ ಪೊಲೀಸರಿಂದ ಸುಲಿಗೆ ಗ್ಯಾಂಗ್ ನ ಸಂತೋಷ್, ಅಜಯ್, ಜಯರಾಜ್ ಎಂಬುವವರ ಬಂಧನವಾಗಿದ್ದು, ಯುವತಿಯ ಶೋಧ ಕಾರ್ಯ ಮುಂದುವರಿದಿದೆ.
ಅಷ್ಟಕ್ಕೂ ಆಗಿದ್ದೇನು? ಸಿವಿಲ್‌ ಕಂಟ್ರಾಕ್ಟರ್ ಓರ್ವನನ್ನ ಗ್ಯಾಂಗ್‌ ಟಾರ್ಗೆಟ್‌ ಮಾಡಿತ್ತು. ಸ್ನೇಹಿತನೊಬ್ಬನ ಮೂಲಕ ನಯನಾ ಎಂಬ ಯುವತಿ ಸಿವಿಲ್‌ ಕಂಟ್ರಾಕ್ಟರ್‌ಗೆ ಪರಿಚಯ ಆಗಿದ್ದಳು. ಪರಿಚಯ ಆಗ್ತಿದ್ದಂತೆಯೇ ಪ್ರತಿ ದಿನ ಕರೆ ಮಾಡಿ ಸಲುಗೆಯಿಂದ ಯುವತಿ ಮಾತನಾಡಿದ್ದಳು. ಒಂದು ದಿನ ಟೀ ಕುಡಿದುಕೊಂಡು ಹೋಗಿ ಎಂದು ನಯನಾ, ಅಂಕಲ್‌ನನ್ನು ಮನೆಗೆ ಕರೆದಿದ್ದಾಳೆ. ಆಕೆ ಕರೆದ ಖುಷಿಯಲ್ಲಿ ಅಂಕಲ್‌, ಸೀದಾ ನಯನಾ ಮನೆಯ ಒಳಗೆ ಹೋಗಿ ಕುಳಿತುಕೊಂಡಿದ್ದ. ಡಿಸೆಂಬರ್ 9ರಂದು ಬೆಳಿಗ್ಗೆ ಅಂಕಲ್‌, ನಯನಾರ ಮನೆಗೆ ಹೋಗಿದ್ದರೆ, ಅದಾದ ಕೆಲ ಹೊತ್ತಿನಲ್ಲಿ ನಕಲಿ ಪೊಲೀಸರ ಗ್ಯಾಂಗ್‌ ಎಂಟ್ರಿ ಕೊಟ್ಟಿತ್ತು.

ಪೊಲೀಸರ ವೇಷದಲ್ಲಿ ಬಂದಿದ್ದ ಬಂಧಿತ ಆರೋಪಿಗಳು, 'ಇಲ್ಲಿ‌ ವ್ಯಭಿಚಾರ ನಡೆಸ್ತದೀರಾ..? ನಿಮ್ಮನ್ನ ಅರೆಸ್ಟ್ ಮಾಡ್ತೀವಿ..' ಅಂತಾ ಬೆದರಿಕೆ ಹಾಕಿದ್ದಾರೆ. ನಂತರ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಆರೋಪಿಗಳು ಫೋಟೊ ಕೂಡ ತೆಗೆದುಕೊಂಡಿದ್ದಾರೆ. ತದನಂತರ ದುಡ್ಡಿಗಾಗಿ ಸೆಟಲ್ ಮೆಂಟ್ ಮಾಡಿಕೊಳ್ಳೋಕೆ ಬೆದರಿಕೆ ಹಾಕಲಾಗಿದೆ. ಮೇಡಂ ಇದಾರೆ ಇಲ್ಲೇ ಸೆಟಲ್ ಮಾಡ್ಕೋ ಅಂತ ಅಂಕಲ್ ಗೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅಂಕಲ್ ಬಳಿ ಇದ್ದ 29 ಸಾವಿರ ನಗದು, ಫೋನ್ ಪೇನಲ್ಲಿ 26 ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5ಲಕ್ಷದ  ಚಿನ್ನದ ಸರ,  ಉಂಗುರ ಬ್ರಾಸ್ ಲೇಟ್ ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಸರ್ಕಾರದ 21 ಕೋಟಿ ಹಣ ದೋಚಿದ ಗುತ್ತಿಗೆ ನೌಕರ, ಈ ದುಡ್ಡಲ್ಲಿ ಗರ್ಲ್‌ಫ್ರೆಂಡ್‌ಗೆ BMW ಕಾರ್‌, 4BHK ಫ್ಲ್ಯಾಟ್‌ ಗಿಫ್ಟ್‌!

ನಕಲಿ ಪೊಲೀಸರು ಹೋದ ನಂತರ ಯುವತಿ ನಯನಾಗೆ ಇಬ್ಬರೂ ಸೇರಿ ದೂರು ಕೊಡೋಣ ಎಂದು ಅಂಕಲ್‌ ಹೇಳಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳೋಕೆ ನಯನಾ ಹೊಸ ವರಸೆ ತೆಗೆದಿದ್ದಳು. ಸ್ಟೇಷನ್ ಕಂಪ್ಲೈಂಟ್ ಅಂತ ಹೋದರೆ ನಂಗೆ ಮಗು ಇದೆ.. ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರ್ತಿನಿ ಅಂತ ಮತ್ತೆ ಬ್ಲಾಕ್ ಮೇಲ್ ಮಾಡಿದ್ದಳು. ನಂತರ ತಾನೇ ಧೈರ್ಯಮಾಡಿ ಬ್ಯಾಡರಹಳ್ಳಿ ಠಾಣೆಗೆ ಅಂಕಲ್‌ ದೂರು ನೀಡಿದ್ದರು. ಸದ್ಯ ಸಂತೋಷ್, ಅಜಯ್, ಜಯರಾಜ್ ಎಂಬುವವರನ್ನ ಪೊಲೀಸ್‌ ಬಂಧಿಸಿದ್ದು. ಎಸ್ಕೇಪ್ ಆಗಿರುವ ಯುವತಿ ನಯನಾಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರದ ಹಿಂದೆ ಖುಷ್‌ ಖುಷಿಯಾಗಿ ರೀಲ್ಸ್‌ ಪೋಸ್ಟ್‌ ಮಾಡಿದ್ದ ಪ್ರಖ್ಯಾತ ಆರ್‌ಜೆ ಶವವಾಗಿ ಪತ್ತೆ!

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ