ಹುಬ್ಬಳ್ಳಿ- ರಾಮೇಶ್ವರಂ ಸಾಪ್ತಾಹಿಕ ವಿಶೇಷ ರೈಲು ಸೇವೆ ವಿಸ್ತರಣೆ

By Kannadaprabha News  |  First Published Dec 27, 2024, 1:04 PM IST

ರೈಲು ಸಂಖ್ಯೆ 07355 ಎಸ್‌ಎಸ್‌ಎಸ್‌ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 4ರಿಂದ ಜೂನ್ 28ರ ವರೆಗೆ ತನ್ನ ಸೇವೆ ಮುಂದುವರಿಸಲಿದೆ. ಡಿ.28ರವರೆಗೆ ಓಡಿಸಲು ಸೂಚಿಸಲಾಗಿತ್ತು. ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್‌ಸ್ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 5ರಿಂದ ಜೂ. 29ರವರೆಗೆ ತನ್ನ ಸೇವೆ ಮುಂದುವರಿಸಲಿದೆ. 


ಹುಬ್ಬಳ್ಳಿ(ಡಿ.27):  ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ರಾಮೇಶ್ವರಂ ನಿಲ್ದಾಣಗಳ ಸಂಚರಿಸುವ ಮಧ್ಯ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಅವಧಿ ವಿಸ್ತರಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. 

ರೈಲು ಸಂಖ್ಯೆ 07355 ಎಸ್‌ಎಸ್‌ಎಸ್‌ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 4ರಿಂದ ಜೂನ್ 28ರ ವರೆಗೆ ತನ್ನ ಸೇವೆ ಮುಂದುವರಿಸಲಿದೆ. ಡಿ.28ರವರೆಗೆ ಓಡಿಸಲು ಸೂಚಿಸಲಾಗಿತ್ತು. ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್‌ಸ್ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 5ರಿಂದ ಜೂ. 29ರವರೆಗೆ ತನ್ನ ಸೇವೆ ಮುಂದುವರಿಸಲಿದೆ. 

Tap to resize

Latest Videos

undefined

ಇದು ರೈಲ್ವೆ ಪ್ರಯಾಣಿಕರ ಗಮನಕ್ಕೆ, ಇನ್ಮುಂದೆ IRCTC ಬಂದ್ ಮಾಡಲಿದೆ ಈ ಸರ್ವಿಸ್, ನಿಮ್ಮ ಹಣಕ್ಕೆ ನೀವೇ ಜವಾಬ್ದಾರರು!

ಈ ಮೊದಲು ಡಿ.29ರವರೆಗೆ ಓಡಿಸಲು ಸೂಚಿಸಲಾಗಿತ್ತು. ಮಧುರೈ ವಿಭಾಗದ ವ್ಯಾಪ್ತಿಯಲ್ಲಿ ಬರುವ ಶಿವಗಂಗಾ ನಿಲ್ದಾಣದಲ್ಲಿ ಈ ರೈಲುಗಳಿಗೆ ಹೆಚ್ಚುವರಿ ನಿಲುಗಡೆ ಒದಗಿಸಲಾಗಿದೆ. ಜ. 4ರಿಂದ ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ಮತ್ತು ಜ. 5ರಿಂದ ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್ಎಸ್ ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಪರಿಷ್ಕೃತ ಸಮಯ ಜಾರಿಗೆ ಬರಲಿದೆ.

ಸುಖಕರ, ಆರಾಮದಾಯಕ ಪ್ರಯಾಣಕ್ಕಾಗಿ ವೇಟಿಂಗ್‌ನಲ್ಲಿರೋ ಟಿಕೆಟ್‌ನ್ನು ಕನ್ಫರ್ಮ್ ಮಾಡ್ಕೊಳ್ಳೋ ಸೀಕ್ರೆಟ್ ಟ್ರಿಕ್

ನವದೆಹಲಿ: ಭಾರತೀಯ ರೈಲ್ವೆ ಜಗತ್ತಿನ ಅತಿದೊಡ್ಡ ನಾಲ್ಕನೇ ರೈಲು ನೆಟ್‌ವರ್ಕ್ ಆಗಿದೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹಾಗಾಗಿ ರೈಲಿನಲ್ಲಿ ರಿಸರ್ವ್ಡ ಟಿಕೆಟ್‌ಗಳು ಪಡೆಯಲು ಪ್ರಯಾಣಿಕರು ಮುಂಚೆಯೇ ಪ್ಲಾನ್ ಮಾಡಬೇಕಾಗುತ್ತದೆ.  ಕೆಲವೊಮ್ಮೆ ಪ್ರಯಾಣಕ್ಕೂ ತಿಂಗಳ ಮುಂಚೆಯೇ ಟಿಕೆಟ್ ಬುಕ್ ಮಾಡಲು ಹೋದ್ರೆ ವೇಟಿಂಗ್ ತೋರಿಸಲಾಗುತ್ತದೆ. ಇನ್ನು ತತ್ಕಾಲ್‌ ನಲ್ಲಿ ಮಿಂಚಿನ ವೇಗದಲ್ಲಿ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಆದರೂ ಜನಸಂದಣಿ ಹೆಚ್ಚಿರುವ ರೈಲುಗಳಲ್ಲಿ ಟಿಕೆಟ್ ತೆಗೆದುಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. 

ರೈಲಿನ ಒಂದು ವಿಶೇಷ ಯೋಜನೆ ಮೂಲಕ ವೇಟಿಂಗ್ ಟಿಕೆಟ್‌ನ್ನು ಕನ್ಫರ್ಮ್‌ ಮಾಡಿಕೊಳ್ಳುವ ಅವಕಾಶವನ್ನು ಭಾರತೀಯ ರೈಲ್ವೆಸ್ ನೀಡುತ್ತದೆ. ಆದ್ರೆ ಈ ವಿಶೇಷ ಯೋಜನೆ ಬಹುತೇಕರಿಗೆ ತಿಳಿಯದ ಕಾರಣ, ಪ್ರಯಾಣವನ್ನು ಮುಂದುಡೂತ್ತಾರೆ. ಏನಿದು ವಿಶೇಷ ಯೋಜನೆ ಎಂಬುದರ ಮಾಹಿತಿ ಇಲ್ಲಿದೆ. 

ವಿಕಲ್ಪ ಯೋಜನೆ

ವಿಕಲ್ಪ ಯೋಜನೆಯಲ್ಲಿ ವೇಟಿಂಗ್ ಟಿಕೆಟ್ ಪಡೆದಿರುವ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ವಿತರಿಸಲಾಗುತ್ತದೆ. ಆದ್ರೆ ಇದು ಅದೇ ಗಮ್ಯ ಸ್ಥಾನಕ್ಕೆ ತೆರಳುವ ಮತ್ತೊಂದು ರೈಲಿನದ್ದಾಗಿರುತ್ತದೆ. ಈ ಯೋಜನೆ ದೇಶದ ಎಲ್ಲಾ ನಿಲ್ದಾಣಗಳಲ್ಲಿ ಲಭ್ಯವಿದ್ದು, 2016ರಿಂದಲೇ ಜಾರಿಗೆ ತರಲಾಗಿದೆ.  ವಿಕಲ್ಪ ಯೋಜನೆಯಡಿ ಪ್ರಯಾಣಿಕರಿಗೆ ಪರ್ಯಾಯ ರೈಲುಗಳಲ್ಲಿ ಖಾತ್ರಿ ಟಿಕೆಟ್‌ ನೀಡಲಾಗುತ್ತದೆ. 2023-24ರಲ್ಲಿ ವಿಕಲ್ಪ ಯೋಜನೆಯಡಿಯಲ್ಲಿ 57,200 ಪ್ರಯಾಣಿಕರು ಪರ್ಯಾಯ ರೈಲುಗಳಲ್ಲಿ ಕನ್ಫರ್ಮ್ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. 

ಹುಬ್ಬಳ್ಳಿಯಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು

ಇದರ ಲಾಭ ಪಡೆಯೋದು ಹೇಗೆ? 

ವೇಟಿಂಗ್ ಟಿಕೆಟ್ ಪಡೆದಿರುವ ಪ್ರಯಾಣಿಕರು ತಮ್ಮ ಪ್ರಯಾಣಕ್ಕಾಗಿ ಪರ್ಯಾಯ ರೈಲುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಇವೆ. ಇದಕ್ಕಾಗಿ ಟಿಕೆಟ್ ಬುಕಿಂಗ್ ಸಮಯದಲ್ಲಿ ಕೆಲವು ಹೆಚ್ಚುವರಿ ಮಾಹಿತಿಯನ್ನು ಒದಗಿಸಬೇಕು. ಇತರ ರೈಲುಗಳಲ್ಲಿ ಸೀಟುಗಳು ಲಭ್ಯವಿದ್ದರೆ, ಪ್ರಯಾಣಿಕರು ಕನ್ಫರ್ಮ್ ಸೀಟ್ ಅನ್ನು ಪಡೆಯುತ್ತಾರೆ. ಈ ರೀತಿಯಾಗಿ ಪ್ರಯಾಣಿಕರು ಸುಖಕರ, ಆರಾಮದಾಯಕವಾಗಿ ಪ್ರಯಾಣಿಸಬಹುದು. 

ಕನ್ಫರ್ಮ್ ಟಿಕೆಟ್ ಸಿಗೋದು ಬಹುತೇಕ ಖಚಿತ

ರೈಲ್ವೆಯ ವಿಕಲ್ಪ್ ಯೋಜನೆ ದೂರ ಪ್ರಯಾಣದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸಂತೋಷದಿಂದ ಆನಂದಿಸಬಹುದು. ಈ ಯೋಜನೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿರುತ್ತದೆ. ಈ ಮೂಲಕ ಕನ್ಫರ್ಮ್ ಸೀಟ್ ಸಿಗೋದು ಬಹುತೇಕ ಖಚಿತವಾಗಿರುತ್ತದೆ. ಈ ಯೋಜನೆಯಿಂದ ರೈಲ್ವೆಗೂ ಲಾಭವಿದೆ. ಏಕೆಂದರೆ ಇದು ಖಾಲಿ ಇರುವ ಸೀಟುಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸುತ್ತದೆ ಮತ್ತು ರೈಲ್ವೆಯ ಆದಾಯವನ್ನು ಹೆಚ್ಚಿಸುತ್ತದೆ.

click me!