KSRTC Bus : 10 ರು. ಕೋಳಿ ಮರಿಗೆ ಬಸ್ಸಲ್ಲಿ 52 ರು. ಟಿಕೆಟ್‌!

Suvarna News   | Asianet News
Published : Jan 02, 2022, 11:35 AM IST
KSRTC Bus : 10 ರು.  ಕೋಳಿ ಮರಿಗೆ ಬಸ್ಸಲ್ಲಿ  52 ರು. ಟಿಕೆಟ್‌!

ಸಾರಾಂಶ

10 ರು.ಗೆ ಖರೀದಿ ಮಾಡಿದ ಕೋಳಿ ಮರಿಗೆ 52 ರು. ಕೊಟ್ಟು ಅರ್ಧ ಟಿಕೆಟ್‌    ಹೊಸನಗರದಿಂದ ಶಿರೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಘಟನೆ

 ಶಿವಮೊಗ್ಗ(ಜ.02):  10 ರು.ಗೆ ಖರೀದಿ ಮಾಡಿದ ಕೋಳಿ ಮರಿಗೆ 52 ರು. ಕೊಟ್ಟು ಅರ್ಧ ಟಿಕೆಟ್‌ (Ticket)  ಪಡೆದ ಘಟನೆ ಹೊಸನಗರದಿಂದ (Hosanagar)  ಶಿರೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸಿನಲ್ಲಿ ನಡೆದಿದೆ. ಶನಿವಾರ ಅಲೆಮಾರಿ ಕುಟುಂಬವೊಂದು ಹೊಸನಗರದಿಂದ ಶಿರೂರಿಗೆ ಪ್ರಯಾಣ ಬೆಳೆಸಿತ್ತು. ಈ ಕುಟುಂಬ ಶಿರಸಿಯಲ್ಲಿ 10 ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿದೆ. 

ನಂತರ ಖಾಸಗಿ ಬಸ್‌ನಲ್ಲಿ (Bus) ಹೊಸನಗರಕ್ಕೆ ಬಂದು ಅಲ್ಲಿಂದ ಶಿರೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದೆ. ಈ ಸಂದರ್ಭದಲ್ಲಿ ಕಂಡಕ್ಟರ್‌ ಸರ್ಕಾರಿ ಬಸ್ಸಿನ (Bus) ನಿಯಮದ ಪ್ರಕಾರ ಕೋಳಿಮರಿಗೂ ಟಿಕೆಟ್‌ ಮಾಡಿಸಬೇಕು ಎಂದಿದ್ದಾರೆ. ಕಂಗಾಲಾದ ಕುಟುಂಬ ಬೇರೆ ದಾರಿ ಕಾಣದೆ ಕೋಳಿ ಮರಿಗೂ ಅರ್ಧ ಟಿಕೆಟ್‌ ಪಡೆದು ಪ್ರಯಾಣಿಸಿದೆ.

ಬಸ್  ದರ ಇಳಿಕೆ :  ನಗರದಲ್ಲಿ ಮರುಚಾಲನೆ ದೊರೆತ ಬಿಎಂಟಿಸಿ(BMTC) ಹವಾ ನಿಯಂತ್ರಿತ(AC) ಬಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಹಿಂದೆ ನಿಗದಿಯಾಗಿದ್ದ ಪ್ರಯಾಣ ದರದಲ್ಲಿ ಶೇ.34ರಷ್ಟು ಕಡಿತ ಮಾಡಿದ ಬಳಿಕ ಎಸಿ ಬಸ್‌ಗಳಿಗೆ ಹೆಚ್ಚಿನ ಸಂಖ್ಯೆಯ ಜನ ಸಂಚರಿಸಲು ಮುಂದಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ನಗರದ ವಿವಿಧ ಮಾರ್ಗಗಳಲ್ಲಿ ವೋಲ್ವೋ ಬಸ್‌(Volvo Bus) ಸಂಚರಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನ ಈ ವಾಹನಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಅಲ್ಲದೆ, ನಗರದ ವಿವಿಧ ಮಾರ್ಗಗಳಲ್ಲಿ ವೋಲ್ವೋ ಬಸ್‌ ಕಾರ್ಯಾಚರಣೆಯನ್ನು ಹೆಚ್ಚಳ ಮಾಡುವಂತೆ ಬೇಡಿಕೆಯೂ ಬರುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ 96 ಬಸ್‌ಗಳನ್ನು ಮಾತ್ರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ದಿನ ಕಳೆದಂತೆ ಹೆಚ್ಚು ಜನ ಆಗಮಿಸುತ್ತಿದ್ದಾರೆ. ಮಾಸಿಕ ಪಾಸ್‌ಗಳನ್ನು ಬಿಡುಗಡೆ ಮಾಡುವಂತೆ ಕೋರುತ್ತಿದ್ದಾರೆ. ಜ.1ರಿಂದ ಎಸಿ ಬಸ್‌ಗಳ ಮಾಸಿಕ ಪಾಸ್‌ ಬಿಡುಗಡೆಯಾಗಲಿದ್ದು, ಮತ್ತಷ್ಟು ಪ್ರಯಾಣಿಕರಿಗೆ(Passengers) ನೆರವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ನಷ್ಟ ಇಲ್ಲ:  ಕಳೆದ ಒಂದು ವಾರದಿಂದ ನಗರದಲ್ಲಿ 96 ಎಸಿ ಬಸ್‌ಗಳು(AC Bus) ಸಂಚರಿಸುತ್ತಿದ್ದು, ಈವರೆಗೂ ನಷ್ಟ ಉಂಟಾಗಿಲ್ಲ. ಇದೇ ರೀತಿಯಲ್ಲಿ ಮುಂದುವರೆದಲ್ಲಿ ಬಿಎಂಟಿಸಿ ಬಳಿಯಿರುವ 700ಕ್ಕೂ ಹೆಚ್ಚು ಎಸಿ ಬಸ್‌ಗಳನ್ನು ಹಂತ ಹಂತವಾಗಿ ರಸ್ತೆಗಿಳಿಸಲಾಗುವುದು ಎಂದು ಬಿಎಂಟಿಸಿಯ ಉಪಾಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಮಾಹಿತಿ ನೀಡಿದ್ದಾರೆ.

ಧೂಳು ತಿನ್ನುತ್ತಿದ್ದ ಎಸಿ ಬಸ್‌ಗಳು :  ಕೊರೋನಾ(Coronavirus) ಲಾಕ್‌ಡೌನ್‌(Lockdown) ಬಳಿಕ ಬಿಎಂಟಿಸಿ ವೋಲ್ವೋ ಬಸ್‌ಗಳು ಕಾರ್ಯಾಚರಣೆಯಿಲ್ಲದೆ ಮೂಲೆ ಗುಂಪಾಗಿದ್ದವು. ಸಂಚಾರ ನಡೆಸದಿದ್ದರೂ ಅವುಗಳನ್ನು ನಿರ್ವಹಣೆಗೆ ಮಾಸಿಕ ಲಕ್ಷಾಂತರ ರು.ಗಳನ್ನು ವೆಚ್ಚ ಮಾಡಬೇಕಾಗಿತ್ತು. ಇದರಿಂದ ಬಿಎಂಟಿಸಿಗೆ ಆಗುತ್ತಿದ್ದ ನಷ್ಟದ ಪ್ರಮಾಣ ಹೆಚ್ಚಾಗುತ್ತಿತ್ತು. ಇದರಿಂದ ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ ಪ್ರಯಾಣ ದರದಲ್ಲಿ ಶೇ.34ರಷ್ಟು ಕಡಿಮೆ ಮಾಡಿ ಡಿ.17ರಿಂದ ವೋಲ್ವೋ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗಿತ್ತು.

500 ರು. ಸುಲಿಗೆ  :  ಟಿಕೆಟ್ ಇಲ್ಲದೇ ರೈಲಿನಲ್ಲಿ (Indian Railways)ಪ್ರಯಾಣಿಸಲು ಯತ್ನಿಸಿದ ಅಪ್ರಾಪ್ತನಿಂದ (Boy) 500 ರೂಪಾಯಿ ಸುಲಿಗೆ ಮಾಡಿದ ಕಿರಾತಕರನ್ನು (Arrest) ಬಂಧಿಸಲಾಗಿದೆ. ರೈಲ್ವೆ (Indian Railways) ಪೊಲೀಸರು ಎನ್‌ಜಿಒ ಒಂದಕ್ಕೆ ಸೇರಿದ  ಇಬ್ಬರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ನಜಮ್ ಸಿದ್ದಿಕಿ (40), ನರೇಶ್ ಉಂಬಾರೆ (27) ಮತ್ತು ಹರೀಶ್ ಸಿಂಗ್ (48) ಎಂದು ಗುರುತಿಸಲಾಗಿದೆ. ಸಿದ್ದಿಕಿ ಟೈಲರಿಂಗ್ ವ್ಯವಹಾರವನ್ನು ಹೊಂದಿದ್ದರೆ, ಉಂಬಾರೆ ಮತ್ತು ಸಿಂಗ್ ಮಕ್ಕಳ ರಕ್ಷಣೆಯಲ್ಲಿ ತೊಡಗಿರುವ ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಟಿಕೆಟ್ ಇಲ್ಲದೆ ಪ್ರಯಾಣ ಮಾಡಲು ಯತ್ನಿಸಿದ ಬಾಲಕ ಬಿಹಾರದ ಚಂಪಾರಣ್ ಜಿಲ್ಲೆಯವನು. ಡಿಸೆಂಬರ್ 13 ರಂದು ಬಿಹಾರದಿಂದ ಉಲ್ಲಾಸ್‌ನಗರಕ್ಕೆ ಬರುವನಿದ್ದ.   ಅಲ್ಲಿನ ಕಾರ್ಖಾನೆಯೊಂದರಲ್ಲಿ  ಕೆಲಸಕ್ಕೆ ಸೇರಿಕೊಂಡಿದ್ದ.

ಊರಿಗೆ ವಾಪಸ್ ಬರಬೇಕು ಎಂದು ತೀರ್ಮಾನಿಸಿದ ಬಾಲಕ ತಾನು ಕೆಲಸ ಮಾಡುತ್ತಿದ್ದ ಜಾಗದ ಈಗ ಬಂಧನಕ್ಕೆ ಒಳಗಾಗಿರುವ ಸಿದ್ದಿಕಿ ಬಳಿ ಇಷ್ಟು ದಿನ ಕೆಲಸ ಮಾಡಿಕೊಂಡಿದ್ದ ಹಣ ಕೇಳಿದ್ದಾನೆ.   ತಾನು ಕೆಲಸ ಮಾಡಿದ್ದ 7500  ರೂ. ನೀಡುವಂತೆ ಕೇಳಿದ್ದಾನೆ. ಹಣ ನೀಡದ ಸಿದ್ದಕಿ 100  ರೂ. ಕೊಟ್ಟು ಊರಿಗೆ ಹೊರಡು ಎಂದಿದ್ದಾನೆ.  ಅಲ್ಲಿಂದ ಹೊರಟ ಬಾಲಕಮ ಕಲ್ಯಾಣ್ ರೈಲ್ವೆ ಸ್ಟೇಶನ್ ಗೆ ಬಂದಿದ್ದಾನೆ. ಈ ವೇಳೆ ಇಬ್ಬರು ಆತನ ಬಳಿ ಟಿಕೆಟ್ ಕೇಳಿದ್ದಾರೆ.

ನನ್ನ ಬಳಿ ಟಿಕೆಟ್ ಇಲ್ಲ ಎಂಬ ಬಾಲಕನನ್ನು ಬೆದರಿಸಿದ್ದಾರೆ. ನಿನ್ನನ್ನು ಪೊಲೀಸರಿಗೆ (Police) ಹಿಡಿದು ಕೊಡುತ್ತೇವೆ ಎಂದಿದ್ದಾರೆ. ಬಾಲಕನಿಂದ 500  ರೂ ಸುಲಿಗೆ ಮಾಡಿದ್ದು ಅಲ್ಲದೆ ರೈಲ್ವೆ ಪೊಲೀಸರ ಬಳಿ  ಬಾಲಕನ ಕರೆದುಕೊಂಡು ಹೋಗಿದ್ದಾರೆ.  ಈತ ನಮಗೆ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಎಂದಿದ್ದಾರೆ.

ಆದರೆ ಬಾಲಕ ನಡೆದ ಎಲ್ಲ ವಿವರ ತಿಳಿಸಿದ್ದು ಪೊಲೀಸರು ನಿಜವಾದ ಕಿರಾತಕರನ್ನು ಬಂಧಿಸಿದ್ದಾರೆ.  ಬಾಲಕನನ್ನು ಕೆಲಸಕ್ಕೆ ಸೇರಿಸಿದ ವ್ಯಕ್ತಿಯ ಹುಟುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.  ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಠಿಣ ಕಾನೂನು  ಜಾರಿ ಮಾಡಿದ್ದರೂ ಬಡತನದ ಪರಿಣಾಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗು ಪ್ರಕರಣಗಳು ದಾಖಲಾಗುತ್ತಲೇ ಇವೆ. 

PREV
Read more Articles on
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ