* ಸರ್ಕಾರಿ ನೌಕರರು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಮಾಡಬೇಕು
* ಪ್ರತಿಯೊಬ್ಬ ಮನುಷ್ಯನಲ್ಲಿ ಕೃತಜ್ಞತಾ ಭಾವ ಇರಬೇಕು
* ಸಮಗ್ರ ಕರ್ನಾಟಕದಿಂದಲೇ ಅಭಿವೃದ್ಧಿ ಮಾಡೋಣ
ಮುಂಡರಗಿ(ಜ.02): ಇತ್ತೀಚಿನ ವರ್ಷಗಳಲ್ಲಿ ಆಗಾಗ ಉತ್ತರ ಕರ್ನಾಟಕ(North Karnataka) ಪ್ರತ್ಯೇಕ ರಾಜ್ಯದ ಧ್ವನಿ ಅಲ್ಲಲ್ಲಿ ಕೇಳಿ ಬರುತ್ತಿವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ(Separate State) ಧ್ವನಿ ಎತ್ತುವುದು ಸರಿಯಲ್ಲ. ನಮಗೆ ಅದು ಬೇಡ. ಸಮಗ್ರ ಕರ್ನಾಟಕ ಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಹೇಳಿದ್ದಾರೆ.
ಶನಿವಾರ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಎಸ್.ಎಂ. ಅಗಡಿ ಅವರು 35 ವರ್ಷಗಳಿಂದ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಯುಕ್ತ ಶ್ರೀಗಳಿಗೆ, ಗಣ್ಯರಿಗೆ ಆಯೋಜಿಸಿದ್ದ ಗುರುವಂದನೆ ಹಾಗೂ ಕೃತಜ್ಞತಾ ಸಮರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಸಮಗ್ರ ಕರ್ನಾಟಕದಲ್ಲಿ ಇದ್ದು, ಸಮಗ್ರ ಕರ್ನಾಟಕದಿಂದಲೇ(Karnataka) ಅಭಿವೃದ್ಧಿ ಮಾಡೋಣ ಎಂದರು.
undefined
Private School: ಬೊಮ್ಮಾಯಿ-ಹೊರಟ್ಟಿ ಮಹತ್ವದ ಸಭೆ, ಖಾಸಗಿ ಶಾಲೆ, ಶಿಕ್ಷಕರಿಗೆ ಗುಡ್ ನ್ಯೂಸ್
ಸರ್ಕಾರಿ ನೌಕರರು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಮಾಡಬೇಕು. ವೃತ್ತಿಯಲ್ಲಿನ ನಮ್ಮ ನಡೆ, ನುಡಿಯಿಂದ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಕೃತಜ್ಞತಾ ಭಾವ ಇರಬೇಕು. ಶಿಕ್ಷಕ ವೃತ್ತಿಯಲ್ಲಿ ಒಳ್ಳೆಯ ಹಾಗೂ ಪ್ರಾಮಾಣಿಕ ಶಿಕ್ಷಕರಿದ್ದಾರೆ. ಸಮಾಜ ಅಂತಹ ಶಿಕ್ಷಕರನ್ನು(Teachers) ಗೌರವದಿಂದ ಕಾಣುವ ಮೂಲಕ ಅವರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು. ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಾಗ ಪ್ರಾಮಾಣಿಕತೆಯಿಂದ ಮಾಡಬೇಕು. ಪಟ್ಟಣದ ಬಹುತೇಕ ಸರ್ಕಾರಿ ಹಾಗೂ ಇತರೆ ಕಟ್ಟಡಗಳಿಗೆ ಶ್ರೀಮಠದಿಂದ ಭೂಮಿಯನ್ನು ದಾನ ಮಾಡಿದ್ದಾರೆ. ಇಂತಹ ಶ್ರೀಗಳಿಂದ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಪಟ್ಟಣದಲ್ಲಿ ನಿರ್ಮಾಣಗೊಳ್ಳಲಿರುವ ಭಾರತೀಯ ವಿಜ್ಞಾನ ಕೇಂದ್ರಕ್ಕೆ ತಮ್ಮ ಅನುದಾನದಲ್ಲಿ 5 ಲಕ್ಷ ನೀಡುವುದಾಗಿ ಹೊರಟ್ಟಿ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಕಳೆದ 42 ವರ್ಷಗಳಿಂದ ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಕಣ್ಮಣಿಗಳಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಶಿಕ್ಷಕರಿಗೆ ಯಾವುದೇ ಸಮಸ್ಯೆ ಬಂದರೂ ಅವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ನಿವೃತ್ತ ಶಿಕ್ಷಕರ ಬದುಕಿಗೆ ಸಹಕಾರಿಯಾಗುವ ಯೋಜನೆಗಳನ್ನು ರೂಪಿಸುವ ಕೆಲಸವನ್ನು ಬಸವರಾಜ ಹೊರಟ್ಟಿ ಹಾಗೂ ಎಸ್.ವಿ. ಸಂಕನೂರ ಮಾಡಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಂ. ಬಸವಲಿಂಗಪ್ಪ, ಡಾ. ಬಿ.ಜಿ. ಜವಳಿ, ಎಸ್.ಎಂ. ಅಗಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರಿಗೆ ಸರ್ಕಾರ(Government of Karnataka) ಕರ್ನಾಟಕ ರತ್ನ(Karnataka Ratna) ಪ್ರಶಸ್ತಿ ನೀಡಬೇಕು ಎಂದು ಹಿರೇಮಲ್ಲನಕೇರಿಯ ಚನ್ನಬಸವ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಯವರು ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದರು.
Teacher Recruitment: ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸರ್ಕಾರಕ್ಕೆ ಗಡುವು ನೀಡಿದ ಸಭಾಪತಿ
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ರಾಮಸ್ವಾಮಿ ಹೆಗ್ಗಡಾಳ, ಡಾ. ಬಸವರಾಜ ಧಾರವಾಡ ಇದ್ದರು. ಶಿಕ್ಷಕರಾದ ಎಸ್.ಎಸ್. ಇನಾಮತಿ, ಎಸ್.ಆರ್. ರಿತ್ತಿ ನಿರೂಪಿಸಿ, ವಂದಿಸಿದರು.
ರಾಜೀನಾಮೆ ನೀಡಲು ಮುಂದಾಗಿದ್ದ ಸ್ಪೀಕರ್ ಹೊರಟ್ಟಿ
ಬೆಳಗಾವಿ: ಕಲಾಪ ನಿರ್ವಹಣೆ ಕುರಿತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್(SR Patil) ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್(Congress) ನಾಯಕರು ಆಡಿದ ಮಾತಿನಿಂದ ತೀವ್ರ ನೊಂದು ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಸಂಗ ಅಧಿವೇಶನದ ಕೊನೆಯ ದಿನ ಡಿ.24 ರಂದು ನಡೆದಿತ್ತು. ನಂತರ ಎಸ್.ಆರ್. ಪಾಟೀಲ್ ಮತ್ತಿತರರು ವಿಷಾದ ವ್ಯಕ್ತಪಡಿಸಿದ್ದರಿಂದ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸೇರಿದಂತೆ ಹಿರಿಯ ನಾಯಕರು ಮನವೊಲಿಸಿದ ಹಿನ್ನೆಲೆಯಲ್ಲಿ ಹೊರಟ್ಟಿ ಅವರು ರಾಜೀನಾಮೆ(Resignation) ನಿರ್ಧಾರದಿಂದ ಹಿಂದೆ ಸರಿದಿದ್ದರು.