Food Poison : ದೇಗುಲ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿ 28 ಮಂದಿ ಅಸ್ವಸ್ಥ

By Kannadaprabha NewsFirst Published Jan 2, 2022, 9:08 AM IST
Highlights
  •  ದೇಗುಲ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿ 28 ಮಂದಿ ಅಸ್ವಸ್ಥ
  •  ಶ್ರೀನಿವಾಸಪುರ ಆಸ್ಪತ್ರೆಗೆ ದಾಖಲು- ಇಬ್ಬರು ವಶಕ್ಕೆ

 ಕೋಲಾರ(ಜ.02):  ದೇವಸ್ಥಾನವೊಂದರಲ್ಲಿ (Temple)  ಪ್ರಸಾದ ಸೇವಿಸಿದ 19 ಮಕ್ಕಳೂ ಸೇರಿ 28ಕ್ಕೂ ಹೆಚ್ಚು ಭಕ್ತಾದಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ (Hospital) ದಾಖಲಾಗಿರುವ ಘಟನೆ ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರದಲ್ಲಿ ಶನಿವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ ತಯಾರಿಸಿದ ಇಬ್ಬರನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.  ಯಲ್ದೂರು ಹೋಬಳಿಯ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ಗ್ರಾಮಸ್ಥರು ರಾತ್ರಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಭಕ್ತಾದಿಗಳಿಗೆ ಚಿತ್ರಾನ್ನ ಮತ್ತು ಕೇಸರಿ ಬಾತ್‌ ಪ್ರಸಾದ (Prasada)  ವಿತರಿಸಲಾಗಿತ್ತು. ಇದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ವಾಂತಿಯಾಗಿದೆ.

ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಆ್ಯಂಬುಲೆನ್ಸ್‌ ಮತ್ತು ಇತರೆ ವಾಹನಗಳ (Vehicle ) ಮೂಲಕ ಅಸ್ವಸ್ಥರನ್ನು ರಾತ್ರಿ 10ರ ವೇಳೆಗೆ ಶ್ರೀನಿವಾಸಪುರ (Shrinivaspura)  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್‌ ತಿಳಿಸಿದ್ದಾರೆ.

ಅಸ್ವಸ್ಥಗೊಂಡವರಲ್ಲಿ ವಿವಿಧ ಶಾಲೆಗಳ 19 ಮಕ್ಕಳು ಹಾಗೂ 9 ಮಂದಿ ವಯಸ್ಕರಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ 28 ಜನರಿಗೂ ಚಿಕಿತ್ಸೆ ಮುಂದೆವರೆದಿದ್ದು ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್‌ ತಿಳಿಸಿದ್ದಾರೆ. ಅಸ್ವಸ್ಥಗೊಂಡವರು ಆಸ್ಪತ್ರೆಗೆ ಬರುತ್ತಿದ್ದಂತೆ ವಿಷಯ ತಿಳಿದ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಸಿ. ವಿಜಯ ಹಾಗೂ ಟಿಹೆಚ್‌ಒ (THO) ಜಗದೀಶ್‌ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ದೇವಾಲಯಗಳು ಪ್ರಸಾದದಿಂದಲೇ ಫೇಮಸ್  :   ಭಾರತವು (India) ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಭಿನ್ನವಾಗಿರುವಂತೆಯೇ ಆಹಾರದ ವಿಚಾರದಲ್ಲಿಯೂ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಹಾಗೆಯೇ ರುಚಿಕರವಾದ ಅಡುಗೆಯನ್ನು ತಯಾರಿಸುವಲ್ಲೂ ಭಾರತೀಯರು ಎತ್ತಿದ ಕೈ. ಇಲ್ಲಿನ ದೇವಾಲಯಗಳಲ್ಲೂ ವೈವಿಧ್ಯಮಯ ರೀತಿಯ ಪ್ರಸಾದ ಹಂಚುವುದನ್ನು ನೋಡಿರಬಹುದು. ಭಾರತದಲ್ಲಿನ ದೇವಾಲಯಗಳು ಅತ್ಯಂತ ರುಚಿಕರವಾದ ಆಹಾರವನ್ನು ನೀಡುತ್ತವೆ. ಕೆಲವು ದೇವಾಲಯಗಳು ನಿಮಗೆ ಪ್ರಸಾದವನ್ನು ನೀಡುತ್ತವೆ. ಕೆಲವು ಆರೋಗ್ಯಕರವಾದ ಭೋಜನವನ್ನು ನೀಡುತ್ತವೆ. ಹಾಗಾದರೆ ಅತ್ಯಂತ ರುಚಿಕರವಾದ, ವಿಭಿನ್ನವಾದ ಪ್ರಸಾದನ್ನು ವಿತರಿಸುವ ಭಾರತದ ದೇವಾಲಯಗಳು ಯಾವೆಲ್ಲಾ..?

ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು
400 ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಅನ್ನಪೂರ್ಣೇಶ್ವರಿಗೆ ಸಮರ್ಪಿತವಾಗಿದ್ದು, ಕರ್ನಾಟಕದಲ್ಲಿದೆ. ಅನ್ನಪೂರ್ಣೇಶ್ವರಿ, ಎಂದರೆ ಎಲ್ಲರಿಗೂ ಅನ್ನ ನೀಡುವವಳು ಎಂದರ್ಥ. ಪ್ರತಿನಿತ್ಯ ಈ ದೇವಾಲಯದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯುತ್ತದೆ. 

ಗೋಲ್ಡನ್ ಟೆಂಪಲ್, ಅಮೃತಸರ
ಇದು ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ರುಚಿಕರವಾಗಿ ನೀಡುವ ಪ್ರಸಾದ (Prasadam)ದಿಂದಲೂ ಹೆಸರುವಾಸಿಯಾಗಿದೆ. ವಿದೇಶಗಳಿಂದ ಸಹ ಜನರು ಪ್ರಸಾದವನ್ನು ಸವಿಯಲು ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ, ದಾಲ್, ರೊಟ್ಟಿ, ಅನ್ನ, ಮಿಶ್ರಿತ ಸಬ್ಜಿ ಮತ್ತು ಶೀರಾವನ್ನು ಒಳಗೊಂಡಿರುವ ಪ್ರಸಾದವನ್ನು ಇಲ್ಲಿ ತಯಾರಿಸಲಾಗುತ್ತದೆ.

ಹೆಮಿಸ್ ಮೊನಾಸ್ಟರಿ, ಹೆಮಿಸ್ 
ಹೆಮಿಸ್ ಮಠವು ಲಡಾಖ್‌ನ ಅತಿದೊಡ್ಡ ಮಠಗಳಲ್ಲಿ ಒಂದಾಗಿದೆ. ಇದು ರುಚಿಕರವಾದ ಊಟ ಮತ್ತು ಸ್ಥಳೀಯ ಬೆಣ್ಣೆ ಚಹಾವನ್ನು ಸಹ ನೀಡುತ್ತದೆ. ಪ್ರಸಾದದ ರೂಪದಲ್ಲಿ ಚಹಾವನ್ನು ನೀಡುವುದಕ್ಕೇ ಇದು ಪ್ರಸಿದ್ಧಿ ಹೊಂದಿದೆ. ಮಠದ ವಸತಿ ನಿಲಯಗಳಲ್ಲಿ ಪ್ರಯಾಣಿಕರಿಗೆ ತಂಗಲು ಅವಕಾಶವಿದೆ.

ಇಸ್ಕಾನ್ ದೇವಸ್ಥಾನ, ಮುಂಬೈ
ಸಾಕಷ್ಟು ರುಚಿಯನ್ನು ಹೊಂದಿರುವ ಸಾತ್ವಿಕ ಆಹಾರವು ನಿಮ್ಮನ್ನು ಹೆಚ್ಚು ಆಕರ್ಷಿಸುವುದಾದರೆ, ನೀವು ಮುಂಬೈ ಮತ್ತು ಇತರ ನಗರಗಳಲ್ಲಿನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿಯ ಇಸ್ಕಾನ್ ದೇವಾಲಯ (Temple)ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಊಟ ಎರಡನ್ನೂ ಪೂರೈಸುತ್ತಾರೆ. ಮಹಾ ಆರತಿ ಮುಗಿದ ನಂತರ ಭೋಜನಾಲಯವು ಭಕ್ತರಿಗೆ ತೆರೆಯುತ್ತದೆ. 

ಶಿರಡಿ ಸಾಯಿಬಾಬಾ ಮಂದಿರ ಪ್ರಸಾದಾಲಯ, ಶಿರಡಿ
ಶಿರಡಿ ಸಾಯಿಬಾಬಾ ಮಂದಿರ ಪ್ರಸಾದಾಲಯವು ಜನರಿಗೆ ಆಹಾರವನ್ನು ಒದಗಿಸಲು ಸೌರಶಕ್ತಿಯಿಂದ ನಡೆಸಲ್ಪಡುವ ಏಷ್ಯಾದ ಅತಿದೊಡ್ಡ ಅಡುಗೆಮನೆಯಾಗಿದೆ. ಇಲ್ಲಿನ ಅಡುಗೆಮನೆಯಲ್ಲಿ ಪ್ರತಿದಿನ ಸುಮಾರು 2000 ಕೆಜಿ ಬೇಳೆ ಮತ್ತು ಅಕ್ಕಿಯನ್ನು ಇತರ ತರಕಾರಿ (Vegetables)ಗಳೊಂದಿಗೆ ಬೇಯಿಸಲಾಗುತ್ತದೆ.

click me!