Covid 3rd Wave: ಬೆಂಗ್ಳೂರಲ್ಲಿ ಒಂದೇ ದಿನ 46,000 ಮಂದಿ ಗುಣಮುಖ

By Kannadaprabha NewsFirst Published Jan 30, 2022, 6:32 AM IST
Highlights

* 16586 ಮಂದಿಗೆ ಸೋಂಕು ದೃಢ, 13 ಸಾವು
*  ಶೇ.19ಕ್ಕೆ ತಲುಪಿದ ಪಾಸಿಟಿವಿಟಿ
*  ಗುಣಮುಖರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳ
 

ಬೆಂಗಳೂರು(ಜ.30):  ರಾಜಧಾನಿಯಲ್ಲಿ(Bengaluru) ಶನಿವಾರ ಕೊರೋನಾ(Coronavirus) ಸೋಂಕು ಹೊಸ ಪ್ರಕರಣಗಳು, ಸಾವು ಹಾಗೂ ಪರೀಕ್ಷೆಗಳ ಪಾಸಿಟಿವಿಟಿ ದರ ತುಸು ಹೆಚ್ಚಳವಾಗಿದೆ. ಇದೇ ವೇಳೆ ದಾಖಲೆಯ 46 ಸಾವಿರ ಮಂದಿ ಗುಣಮುಖರಾಗಿದ್ದಾರೆ.

ನಗರದಲ್ಲಿ ಶನಿವಾರ 16,586 ಮಂದಿ ಸೋಂಕಿತರಾಗಿದ್ದು, 13 ಸೋಂಕಿತರು ಸಾವಿಗೀಡಾಗಿದ್ದಾರೆ. ಬರೋಬ್ಬರಿ 46,050 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,30,701 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಶನಿವಾರ 87 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಶುಕ್ರವಾರಕ್ಕೆ ಹೋಲಿಸಿದರೆ ಮೂರು ಸಾವಿರ ಕಡಿಮೆಯಾಗಿವೆ. ಆದರೆ, ಸೋಂಕಿತರ ಸಂಖ್ಯೆ ಮಾತ್ರ 1,387ದಷ್ಟು ಏರಿಕೆಯಾಗಿವೆ (ಶುಕ್ರವಾರ 15,199). ಸೋಂಕಿತರ ಸಾವಿನ ಸಂಖ್ಯೆ ಸಹ ಐದು ಹೆಚ್ಚಳವಾಗಿದೆ. ಪಾಸಿಟಿವಿಟಿ ದರ(Positivity Rate)  ಶೇ.19ಕ್ಕೆ(ಶೇ.2 ಏರಿಕೆ) ತಲುಪಿದೆ.

Night Curfew Lifts ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು, ಜ.31ರಿಂದ ಜನತೆಗೆ ರಿಲ್ಯಾಕ್ಸ್

ಮೊದಲ ಮತ್ತು ಎರಡನೇ ಅಲೆಗಿಂತ ಅತಿ ಹೆಚ್ಚು ಸೋಂಕಿತರು ಒಂದೇ ದಿನ ಗುಣಮುಖರಾಗಿದ್ದಾರೆ. ಶುಕ್ರವಾರ 43 ಸಾವಿರ ಮಂದಿ ಗುಣಮುಖರಾಗಿದ್ದರು. ಕಳೆದ ವಾರ ಮೂರ್ನಾಲ್ಕು ದಿನದಲ್ಲಿ ಪತ್ತೆಯಾದ 25 ಸಾವಿರ ಪ್ರಕರಣಗಳ ಪೈಕಿ ಶೇ.99.5ರಷ್ಟು ಮಂದಿ ಗುಣಮುಖರಾಗಿದ್ದು, ಹೀಗಾಗಿ ಗುಣಮುಖರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ(Department of Health) ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ನಗರದಲ್ಲಿ ಸೋಂಕಿತರಾದವರ ಸಂಖ್ಯೆ 16.98 ಲಕ್ಷಕ್ಕೆ, ಗುಣಮುಖರ ಸಂಖ್ಯೆ 15.5 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 16,568ಕ್ಕೆ ಏರಿಕೆಯಾಗಿದೆ. ಸದ್ಯ ನಗರದಲ್ಲಿ ಐದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದ ಹಿನ್ನೆಲೆ 169 ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್‌(Containment Zone) ಎಂದು ಗುರುತಿಸಲಾಗಿದೆ. ಬಿಬಿಎಂಪಿ(BBMP) ಪೂರ್ವ, ಯಲಹಂಕ ವಲಯದಲ್ಲಿಯೇ ಅತಿ ಹೆಚ್ಚು ಕಂಟೈನ್ಮೆಂಟ್‌ ಝೋನ್‌ಗಳಿವೆ.

ಮೃತರು 50 ವರ್ಷ ಮೇಲ್ಪಟ್ಟವರು:

ನಗರದಲ್ಲಿ ಶನಿವಾರ ಸಾವಿಗೀಡಾದ ಸೋಂಕಿರೆಲ್ಲರೂ 50 ವರ್ಷ ಮೇಲ್ಪಟ್ಟವರಾಗಿದ್ದಾರೆ. 50 ರಿಂದ 59 ವರ್ಷದ ನಾಲ್ಕು ಮಂದಿ, 60 ರಿಂದ 69 ವರ್ಷದ ಮೂವರು, 70 ವರ್ಷ ಮೇಲ್ಪಟ್ಟಆರು ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ದುಪ್ಪಟ್ಟು, ಸಾವಿನ ಸಂಖ್ಯೆ ಏರಿದೆ ಮತ್ತಷ್ಟು

ಕರ್ನಾಟಕದಲ್ಲಿ(Karnataka) ಜನವರಿ ಆರಂಭದಿಂದ ಅಬ್ಬರಿಸಿದ್ದ ಕೊರೋನಾ ಸೋಂಕು ಈಗ ಒಂದಷ್ಟು ತಹಬದಿಗೆ ಬರುತ್ತಿದೆ. ಆದ್ರೆ, ಸಾವಿನ ಸಂಖ್ಯೆ ಆತಂಕ ಮೂಡಿಸುತ್ತಿದೆ. ಹೌದು...ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಯತ್ತ ಸಾಗುತ್ತಿರುವುದು  ಆಶಾದಾಯಕ ಬೆಳವಣಿಗಿದೆ. ಆದರೆ, ಸಾವಿನ ಸಂಖ್ಯೆ ಏರುತ್ತಿರುವುದು ನಿದ್ದೆಗೆಡಿಸಿದೆ.

Covid 3rd Wave: ಸೋಂಕಿತರ ಸಾವು ಏರಲು ವಿಳಂಬ ಚಿಕಿತ್ಸೆಯೇ ಕಾರಣ..!

ರಾಜ್ಯದಲ್ಲಿ ನಿನ್ನೆ(ಶನಿವಾರ) 33,337 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 70 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.  ಇನ್ನು ಇಂದು 69,902 ಮಂದಿ ಗುಣಮುಖರಾಗಿದ್ದಾರೆ. (ಜ.28) ರಾಜ್ಯದಲ್ಲಿ 50 ಜನರು ಸೋಂಕಿಗೆ ಬಲಿಯಾಗಿದ್ದರು. ಒಟ್ಟು ಸೋಂಕಿತರ ಸಂಖ್ಯೆ 37,57,031ಕ್ಕೆ ಏರಿಕೆಯಾಗಿದೆ. ಈ ಪೈಕಿ ಈವರೆಗೆ 34,65,995 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಸದ್ಯ 2,52,132 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?

ಬಾಗಲಕೋಟೆ 394, ಬಳ್ಳಾರಿ 602, ಬೆಳಗಾವಿ 798, ಬೆಂಗಳೂರು ಗ್ರಾಮಾಂತರ 367, ಬೆಂಗಳೂರು ನಗರ 16,586, ಬೀದರ್ 209, ಚಾಮರಾಜನಗರ 573, ಚಿಕ್ಕಬಳ್ಳಾಪುರ 307, ಚಿಕ್ಕಮಗಳೂರು 292, ಚಿತ್ರದುರ್ಗ 309, ದಕ್ಷಿಣ ಕನ್ನಡ 627, ದಾವಣಗೆರೆ 216, ಧಾರವಾಡ 1,278, ಗದಗ 171, ಹಾಸನ 1,039, ಹಾವೇರಿ 460, ಕಲಬುರಗಿ 577. ಕೊಡಗು 540, ಕೋಲಾರ 567, ಕೊಪ್ಪಳ 269, ಮಂಡ್ಯ 986, ಮೈಸೂರು 2,431, ರಾಯಚೂರು 137, ರಾಮನಗರ 237, ಶಿವಮೊಗ್ಗ 674, ತುಮಕೂರು 1,192, ಉಡುಪಿ 579, ಉತ್ತರ ಕನ್ನಡ 665, ವಿಜಯಪುರ 139, ಯಾದಗಿರಿ 116 ಹೊಸ ಪ್ರಕರಣಗಳು ಪತ್ತೆಯಾಗಿವೆ.
 

click me!