'ಆಳಂದದಲ್ಲಿ ತೊಗರಿ ಒಣಗಿ 440 ಕೋಟಿ ರು. ನಷ್ಟ'

By Kannadaprabha News  |  First Published Dec 18, 2022, 2:38 PM IST

ಪರಿಹಾರಕ್ಕಾಗಿ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯ: ಶಾಸಕ ಸುಭಾಷ ಗುತ್ತೇದಾರ 


ಆಳಂದ(ಡಿ.18):  ಕಳೆದ ಅಕ್ಟೊಬರ್‌ ತಿಂಗಳಲ್ಲಿ ಮಳೆ ಇಲ್ಲದಕ್ಕೆ ಮಳೆ ಅವಲಂಬಿತ ಸುಮಾರು 78181 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ತೊಗರಿ ಹಠಾಗಿ ಒಣಗಿ 58635 ಟನ್‌ ತೊಗರಿ ಉತ್ಪಾದನೆ ಆಗದೆ ಸುಮಾರು 440 ಕೋಟಿ ರುಪಾಯಿಗೂ ಅಧಿಕ ನಷ್ಟವಾಗಿದೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಪರಿಹಾರ ನೀಡುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಸ್ಪಷ್ಟಪಡಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. 2022ನೇ ಸಾಲಿನ ಮುಂಗಾರು ಹಂಗಾಮಿಗೆ ತಾಲೂಕಿನ ಸುಮಾರು 58534 ರೈತರ ಫಸಲ್‌ ಭಿಮಾ ಯೋಜನೆಯಲ್ಲಿ ನೋಂದಣಿ ಮಾಡಿದ್ದಾರೆ. ವಿಮೆ ಪರಿಹಾರ ಬಿಡುಗಡೆ ಮಾಡುವಂತೆ ನಿರ್ದೇಶನ ಮಾಡುವಂತೆಯೂ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

Latest Videos

undefined

PSI RECRUITMENT SCAM: ಬೇಲ್‌ ಪಡೆದು ಬಂದ ಕಾಂಗ್ರೆಸ್‌ ಮುಖಂಡನಿಗೆ ಭರ್ಜರಿ ಸ್ವಾಗತ!

ಅಫಜಲಪೂರ ತಾಲೂಕಿನ ಭೀಮಾನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ತರುವ ಯೋಜನೆಯಲ್ಲಿ ಮಧ್ಯದಲ್ಲಿ ಬರುವ ಹಳ್ಳಿಗಳ ಏಳು ಕೆರೆಗೂ ನೀರು ತುಂಬಿಸುವ ಯೋಜನೆಯ ಜಾರಿಯಲ್ಲಿದೆ. ಕೋತನಹಿಪ್ಪರಗಾ, ವಳವಂಡವಾಡಿ, ಕವಲಗಾ ಮತ್ತು ಜಿಡಗಾ, ಕಡಗಂಚಿ ಕೆರೆ ಮಂಜರಾಗಿದದ್ದು. ಈಗಾಗಲೇ ಕಡಗಂಚಿ ಕೆರೆ ಕಾಮಗಾರಿ ಶುರುವಾಗಿದೆ.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಜೀವನ ಮಿಷನ್‌ ಯೋಜನೆ ಅಡಿಯಲ್ಲ ಮನೆ, ಮನೆಗೆ ನಳದ ಸಂರ್ಪಕ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕುವರೆ ಅರ್ಷದ ಅವಧಿಯಲ್ಲಿ 2 ವರ್ಷ ಕೋವಿಡ್‌ನಲ್ಲಿ ಕಳೆದರೆ ಉಳಿದ ಅವಧಿಯಲ್ಲಿ ಸಾಕಷ್ಟುಕೆಲಸಗಳಾಗಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಮಗಾರಿಗಳಿಗೆ 50 ಕೋಟಿ ರು., 2 ಕೋಟಿ ದೇವಸ್ಥಾನಗಳಿಗೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಿಂದ 26 ಕೋಟಿ ಮೈಕ್ರೋ ಸ್ಕಿಂನಲ್ಲಿ 48 ಕೋಟಿ ಅನುದಾನ ದೊರೆತು ಶಾಲಾ ಕೋಣೆ, ಕೆರೆ ಮತ್ತಿತರ ಕಾಮಗಾರಿ ನಡೆದಿವೆ ಎಂದರು.

ಆಳಂದ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಮೀಸಲಿಟ್ಟ 11 ಕೋಟಿ ರೂಪಾಯಿ, ರಸ್ತೆ ಬದಿಯ ಆಸ್ತಿ ಮಾಲೀಕರು ಪರಿಹಾರ ನೀಡಿ ಅಗಲೀಕರಣ ಮಾಡುವಂತೆ ಹೇಳಿದ್ದರಿಂದ ಸದ್ಯಕ್ಕೆ ಈ ಕಾರ್ಯಕೈಬಿಟ್ಟು ಇದರ ಅನುದಾನದ 8 ಕೋಟಿ ರೂಪಾಯಿ ರಾಜ್ಯ ಕಾಲುವೆ ರಸ್ತೆ ಕಾಮಗಾರಿಗೆ ಮೀಸಲಿಟ್ಟಿಇನ್ನೂಳಿದ 3 ಕೋಟಿ ರಸ್ತೆ, ಸಮುದಾಯ ಭವನಗಳಿಗೆ ವ್ಯಯಮಾಡಲಾಗಿದೆ. ನಗರಾಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ 81 ಕೋಟಿ ವೆಚ್ಚದಲ್ಲಿ ನಿತ್ಯ ನಳದ ನೀರು ಪೂರೈಕೆಯ ಕಾಮಗಾರಿ ಟೆಂಡರ್‌ ಹಂತದಲ್ಲಿದೆ. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುದು ಎಂದರು.
 

click me!