ಸುವರ್ಣ ವಿಧಾನಸೌಧ ನಿರ್ಮಿಸಿ 12 ವರ್ಷಗಳಿಗೂ ಹೆಚ್ಚು ಕಾಲವೇ ಗತಿಸಿದೆ. 400 ಕೋಟಿಗೂ ಅಧಿಕ ಖರ್ಚು ಮಾಡಿ ನಿರ್ಮಿಸಿರುವ ಸುವರ್ಣ ವಿಧಾನಸೌಧ ಬರೀ ಚಳಿಗಾಲದ ಅಧಿವೇಶನಕ್ಕಷ್ಟೇ ಸೀಮಿತವಾಗಿದೆ. ಹೀಗಾಗಿ ಇಲ್ಲಿಗೆ ರಾಜ್ಯಮಟ್ಟದ, ಈ ಭಾಗಕ್ಕೆ ಸಂಬಂಧಪಟ್ಟ ಕೆಲ ಕಚೇರಿಗಳು ಬರಬೇಕೆಂಬ ಬೇಡಿಕೆ ಸುವರ್ಣ ಸೌಧ ನಿರ್ಮಿಸಿದ ದಿನದಿಂದಲೂ ಇದ್ದೇ ಇದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ(ಡಿ.18): ಉತ್ತರ ಕರ್ನಾಟಕದ ಬಹುವರ್ಷಗಳ ಬೇಡಿಕೆಯಾಗಿರುವ ರಾಜ್ಯಮಟ್ಟದ ಕೆಲ ಕಚೇರಿಗಳ ಸ್ಥಳಾಂತರಕ್ಕೆ ಈ ಅಧಿವೇಶನದಲ್ಲಾದರೂ ನಿರ್ಧಾರವಾಗುವುದೇ? ಈ ಭಾಗದವರೇ ಮುಖ್ಯಮಂತ್ರಿಯಾಗಿರುವ ಈ ವೇಳೆಯಲ್ಲಾದರೂ ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುವುದೇ?
undefined
ಇದು ಬೆಳಗಾವಿ ಅಧಿವೇಶನದ ಬಗ್ಗೆ ಜನರಲ್ಲಿರುವ ನಿರೀಕ್ಷೆ. ಉತ್ತರ ಕರ್ನಾಟಕಕ್ಕೆ ಕೆಲವೊಂದಿಷ್ಟು ಕಚೇರಿಗಳನ್ನು ಸ್ಥಳಾಂತರಿಬೇಕು. ಆ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬ ಬೇಡಿಕೆ ಬಹುವರ್ಷಗಳದ್ದು.
ಸುವರ್ಣ ವಿಧಾನಸೌಧ ನಿರ್ಮಿಸಿ 12 ವರ್ಷಗಳಿಗೂ ಹೆಚ್ಚು ಕಾಲವೇ ಗತಿಸಿದೆ. 400 ಕೋಟಿಗೂ ಅಧಿಕ ಖರ್ಚು ಮಾಡಿ ನಿರ್ಮಿಸಿರುವ ಸುವರ್ಣ ವಿಧಾನಸೌಧ ಬರೀ ಚಳಿಗಾಲದ ಅಧಿವೇಶನಕ್ಕಷ್ಟೇ ಸೀಮಿತವಾಗಿದೆ. ಹೀಗಾಗಿ ಇಲ್ಲಿಗೆ ರಾಜ್ಯಮಟ್ಟದ, ಈ ಭಾಗಕ್ಕೆ ಸಂಬಂಧಪಟ್ಟ ಕೆಲ ಕಚೇರಿಗಳು ಬರಬೇಕೆಂಬ ಬೇಡಿಕೆ ಸುವರ್ಣ ಸೌಧ ನಿರ್ಮಿಸಿದ ದಿನದಿಂದಲೂ ಇದ್ದೇ ಇದೆ. ಇದಕ್ಕಾಗಿ ನಡೆದ ಹೋರಾಟ ಅಷ್ಟಿಷ್ಟಲ್ಲ. ಪ್ರತಿಸಲ ಚಳಿಗಾಲದ ಅಧಿವೇಶನ ನಡೆದಾಗ ಇಲ್ಲಿನ ಸಂಘಟನೆಗಳು, ವಿವಿಧ ಮಠಾಧೀಶರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದುಂಟು. ಆಗ ಸರ್ಕಾರದಿಂದ ಕೆಲವು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂಬ ಬರೀ ಆಶ್ವಾಸನೆಯೇ ದೊರೆಯುತ್ತಿತ್ತು. ಕೊನೆಗೆ 2018ರಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಾಜ್ಯಮಟ್ಟದ 9 ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಿ ಆದೇಶ ಹೊರಡಿಸಿತ್ತು. 2020ರಲ್ಲಿ ಇಲ್ಲಿಗೆ ಕಚೇರಿಗಳನ್ನು ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ಸಭೆ ನಡೆಸಿ ತಿರ್ಮಾನಕ್ಕೆ ಬಂದಿತು. ಬಳಿಕ ಇಲ್ಲಿನ ಹೋರಾಟಕ್ಕೆ ಮಣಿದು ಸರ್ಕಾರ ಕಚೇರಿಗಳನ್ನು ಸ್ಥಳಾಂತರಿಸಲು ನಿರ್ಧಾರ ಮಾಡಿತು. ಅದರಂತೆ ಕೆಲವೊಂದಿಷ್ಟುಕಚೇರಿಗಳು ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಅವು ನಾಮ ಕೆ ವಾಸ್ತೆ ಎಂಬಂತೆ ಮಾಡಲಾಗಿದೆ. ಬರೀ ಒಬ್ಬ ಸಿಬ್ಬಂದಿಯನ್ನು ಇಟ್ಟು ಕೈತೊಳೆದುಕೊಳ್ಳುವ ಕೆಲಸವಾಗಿದೆ. ಈವರೆಗೂ ಒಂದೇ ಒಂದು ಕಚೇರಿಯೂ ಪೂರ್ಣಪ್ರಮಾಣದಲ್ಲಿ ಸ್ಥಳಾಂತರವಾಗಿಯೇ ಇಲ್ಲ.
ನೀರು ಪೂರೈಕೆ ಜಾಲಕ್ಕೆ ಕಲ್ಲು ಹಾಕಿ ಪಾಲಿಕೆ ವಿರುದ್ಧ ಜನರನ್ನು ರೊಚ್ಚಿಗೆಬ್ಬಿಸುವ ಪ್ಲಾನ್ ಮಾಡಿದ್ದ ಕಿಡಿಗೇಡಿಗಳು!
ಯಾವ್ಯಾವ ಕಚೇರಿ ಸ್ಥಳಾಂತರ:
ಕೃಷ್ಣ ಭಾಗ್ಯ ಜಲನಿಗಮದ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಲಾಗಿದೆ. ಆದರೆ ಇದು ಬರೀ ಬೋರ್ಡ್‌ಗೆ ಮಾತ್ರ ಸೀಮಿತವಾಗಿದೆ. ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಿಲ್ಲ. ಇನ್ನೂ ಕರ್ನಾಟಕ ನೀರಾವರಿ ನಿಗಮ ಈ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ಕೆಲಸವಾಗಿಲ್ಲ. ಜತೆಗೆ ಇದು ದಾವಣಗೆರೆಗೆ ಅಗತ್ಯವಿಲ್ಲ. ಕರ್ನಾಟಕದ 22 ಜಿಲ್ಲೆಗಳು ಇದರಲ್ಲಿ ಬರುತ್ತವೆ. ಹೀಗಾಗಿ ಇದು ಹುಬ್ಬಳ್ಳಿಗೆ ಸ್ಥಳಾಂತರಿಸುವುದು ಅತ್ಯಂತ ಸೂಕ್ತ ಎಂಬ ಅಭಿಪ್ರಾಯವಿದೆ.
ಇನ್ನು ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಬೆಳಗಾವಿಗೆ ಸ್ಥಳಾಂತರವಾಗಿದೆ ಆದರೂ ಪೂರ್ಣ ಪ್ರಮಾಣದಲ್ಲಿ ಕೆಲಸ ಪ್ರಾರಂಭವಾಗಿಲ್ಲವಂತೆ. ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ ಬೆಳಗಾವಿಗೆ ಸ್ಥಳಾಂತರವಾಗಿದೆ. ಆದರೆ ಬರೀ ಒಬ್ಬರೋ ಇಬ್ಬರೋ ಸಿಬ್ಬಂದಿಗಳು ಮಾತ್ರ ಇಲ್ಲಿದ್ದಾರಂತೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಬೇಕು. ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕರ ಕಚೇರಿ ಹಂಪಿಗೆ ಸ್ಥಳಾಂತರವೇನೋ ಆಗಿದೆ. ಆದರೆ ಈಗಲೂ ಮೈಸೂರಿನ ಕಚೇರಿಯಿಂದಲೇ ಎಲ್ಲ ನಿರ್ಧಾರಗಳಾಗುತ್ತವೆ.
Dharwad: ದೂರು ಕೊಟ್ಟವರಿಗೆ ಸಾಬೀತು ಪಡಿಸುವ ಜವಾಬ್ದಾರಿ ಇರುತ್ತದೆ: ಡಿಸಿ ಗುರುದತ್ತ ಹೆಗಡೆ ಸಲಹೆ
ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಕಚೇರಿಯ ಪೈಕಿ ಒಂದು ಪೀಠವನ್ನು ಕಲಬುರಗಿ, ಇನ್ನೊಂದು ಬೆಳಗಾವಿಗೆ ಸ್ಥಳಾಂತರವೇನೋ ಆಗಿದೆ. ಆದರೆ ಬೆಳಗಾವಿ ಪೀಠಕ್ಕೆ ಈ ವರೆಗೂ ಕಮಿಷನರ್ ನೇಮಿಸಿಲ್ಲ. ಈ ಕಾರಣದಿಂದಾಗಿ ಉತ್ತರ ಕರ್ನಾಟಕಕ್ಕೆ ಕೆಲ ಕಚೇರಿಗಳು ಬಂದರೂ ಅವು ನಾಮ ಕೆ ವಾಸ್ತೆ ಎಂಬಂತಾಗಿದೆ. ಇನ್ನಾದರೂ ಪೂರ್ಣ ಪ್ರಮಾಣದಲ್ಲಿ ಈ ಎಲ್ಲ ಕಚೇರಿಗಳು ಕಾರ್ಯಾರಂಭ ಮಾಡಬೇಕು. ಜತೆಗೆ ಇದರೊಂದಿಗೆ ಇನ್ನಷ್ಟುಕಚೇರಿಗಳನ್ನು ಸ್ಥಳಾಂತರಿಸಲು ಚಳಿಗಾಲದ ಅಧಿವೇಶನದಲ್ಲಿ ಗಟ್ಟಿನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು ಎಂಬ ಬೇಡಿಕೆ ಇಲ್ಲಿನ ಹೋರಾಟಗಾರರದ್ದು. ಸರ್ಕಾರ ಇದಕ್ಕೆ ಸ್ಪಂದಿಸುತ್ತದೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ಉತ್ತರ ಕರ್ನಾಟಕ ಭಾಗಕ್ಕೆ ಕೆಲವೊಂದಿಷ್ಟು ಕಚೇರಿಗಳನ್ನು ಸ್ಥಳಾಂತರಿಸಿದ್ದಾರೆ. ಆದರೆ ಎಲ್ಲವೂ ನಾಮ ಕೆ ವಾಸ್ತೆ ಎಂಬಂತಾಗಿದೆ. ಪೂರ್ಣ ಪ್ರಮಾಣದಲ್ಲಿ ಯಾವ ಕಚೇರಿಯೂ ಇಲ್ಲಿ ಸ್ಥಳಾಂತರಗೊಂಡಿಲ್ಲ. ಇದೀಗ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಇದ್ದಾರೆ. ಈ ಸಲದ ಅಧಿವೇಶನದಲ್ಲಾದರೂ ಗಟ್ಟಿನಿರ್ಧಾರ ಕೈಗೊಳ್ಳಬೇಕು ಅಂತ ಕರ್ನಾಟಕ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ.