Covid Outbreak in School : ವಸತಿಗೆ ಶಾಲೆಗೆ ವಕ್ಕರಿಸಿದ ಕೊರೋನಾ - 400 ಮಂದಿ ಕ್ವಾರಂಟೈನ್

By Suvarna News  |  First Published Dec 5, 2021, 12:21 PM IST
  • ರಾಜ್ಯದಲ್ಲಿ  ಕೊರೋನಾ ಕೊಂಚ ಏರಿಕೆಯತ್ತ ಸಾಗುತ್ತಿದ್ದು ಮತ್ತೆ ಮೂರನೇ ಅಲೆ ಆತಂಕ ಮೂಡಿಸಿದೆ
  • ಚಿಕ್ಕಮಗಳೂರಿನ  ವಸತಿ ಶಾಲೆಯಲ್ಲಿ 40 ಮಂದಿಗೆ ಕೊರೋನಾ ಸೋಂಕು

ಚಿಕ್ಕಮಗಳೂರು (ಡಿ.05): ರಾಜ್ಯದಲ್ಲಿ  ಕೊರೋನಾ (Covid 19) ಕೊಂಚ ಏರಿಕೆಯತ್ತ ಸಾಗುತ್ತಿದ್ದು ಮತ್ತೆ ಮೂರನೇ ಅಲೆ ಆತಂಕ ಮೂಡಿಸಿದೆ. ಚಿಕ್ಕಮಗಳೂರಿನ (chikkamagaluru )  ವಸತಿ ಶಾಲೆಯಲ್ಲಿ 40 ಮಂದಿಗೆ ಕೊರೋನಾ ಸೋಂಕು (Covid ) ತಗುಲಿದೆ.  ಚಿಕ್ಕಮಗಳೂರು ಜಿಲ್ಲೆ ಎನ್ ಅರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರೋ ವಸತಿ ಶಾಲೆಯ (School) ವಿದ್ಯಾರ್ಥಿಗಳು (Students), ಶಿಕ್ಷಕರು ಸೇರಿದಂತೆ 40  ಮಂದಿಯಲ್ಲಿ ಕೊರೋನಾ ದೃಢ ಪಟ್ಟಿದೆ.ಮೂರು ವಿಧ್ಯಾರ್ಥಿಗಳು ಹಾಗೂ ನಾಲ್ವರು ಸಿಬ್ಬಂದಿಗೆ ಮೊದಲು ಕೊರೋನಾ ಸೋಂಕು ಹರಡಿತ್ತು. 418 ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿ ಇರುವ ಶಾಲೆಯಲ್ಲಿ ಎಲ್ಲರ ಸ್ವ್ಯಾಬ್ ಪಡೆದಿದ್ದ ಆರೋಗ್ಯ ಇಲಾಖೆ (health Department) ಇದೀಗ 40 ಮಂದಿಗೆ ಸೋಂಕು ತಗುಲಿರುವುದನ್ನು ದೃಢಪಡಿಸಿದೆ. 

ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಹಾಗು ಸಿಬ್ಬಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಶಾಲೆಯನ್ನು ಜಿಲ್ಲಾಡಳಿತ ಸೀಲ್ ಡೌನ್ (Seal Down) ಮಾಡಿದೆ.  ಪತ್ತೆಯಾದವರಲ್ಲಿ ಯಾವುದೇ ಲಕ್ಷಣಗಳಿಲ್ಲದೆ ಸೌಮ್ಯ ಸ್ವರೂಪದಲ್ಲಿದೆ. ಸದ್ಯ ವಸತಿ ಶಾಲೆಯಲ್ಲಿಯೇ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದೆ.

Tap to resize

Latest Videos

undefined

"

ಸ್ಥಳಕ್ಕೆ ಡಿಎಚ್ ಓ (DHO), ಸರ್ವೇಕ್ಷಣಾಧಿಕಾರಿ, ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 

ಒಮಿಕ್ರಾನ್ ವಿದೇಶದಿಂದ ಬಂದಿದ್ದಲ್ಲ ನಮ್ಮಲ್ಲೇ ಇದೆ : 

ನವದೆಹಲಿ (ಡಿ. 05): ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ (Covid 19 New Variant Omicron) ಕೇವಲ ವಿದೇಶದಿಂದ ಭಾರತಕ್ಕೆ ಬರಬೇಕಿಲ್ಲ. ಅದು ಈಗಾಗಲೇ ಇಲ್ಲಿ ಇದೆ ಮತ್ತು ದೇಶದ ಪ್ರಮುಖ ಎಲ್ಲಾ ನಗರಗಳಲ್ಲೂ ಇರುವ ಸಾಧ್ಯತೆ ದಟ್ಟವಾಗಿದೆ. ಯಾವುದೇ ಪ್ರವಾಸ ಇತಿಹಾಸವಿಲ್ಲದ ಬೆಂಗಳೂರಿನ ವ್ಯಕ್ತಿಗೆ ಸೋಂಕು ದೃಢ ಪಟ್ಟಿರುವುದು ಇದನ್ನು ಸ್ಪಷ್ಟಪಡಿಸುತ್ತದೆ ಎಂದು ಸಿಎಸ್‌ಐಆರ್‌ (CSIR) ಮಾಜಿ ಮುಖ್ಯಸ್ಥ ಡಾ.ರಾಕೇಶ್‌ ಮಿಶ್ರಾ (Dr Rakesh Mishra) ಹೇಳಿದ್ದಾರೆ.

ಹೊಸ ವೈರಸ್‌ ಪತ್ತೆ ಹೊರತಾಗಿಯೂ ಸಮಾಧಾನಕರ ವಿಷಯವೆಂದರೆ ಸೋಂಕು ಸಮುದಾಯಕ್ಕೆ ಹರಡಿದ (Community Spread) ಹೊರತಾಗಿಯೂ ಅದು ಸೌಮ್ಯ ಸ್ವರೂಪದಲ್ಲೇ ಇದೆ. ಜೊತೆಗೆ ದೊಡ್ಡ ಮಟ್ಟದಲ್ಲಿ ಅಪಾಯಕಾರಿಯಾಗಿ ಹೊರಹೊಮ್ಮಿಲ್ಲ. ಗುರುವಾರ ಭಾರತದಲ್ಲಿ ಮೊದಲ ಒಮಿಕ್ರೋನ್‌ ಪ್ರಕರಣ ದಾಖಲಾಯಿತು. ಒಬ್ಬ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ (South Africa) ಬಂದಿದ್ದರೆ, ಮತ್ತೊಬ್ಬರು ಯಾವುದೇ ಪ್ರಯಾಣ ಮಾಡಿರಲಿಲ್ಲ. ಇದು ಹೊಸ ರೂಪಾಂತರಿ ಭಾರತದಲ್ಲೇ ಇತ್ತು ಎನ್ನುವುದನ್ನು ಸ್ಪಷ್ಟವಾಗುತ್ತದೆ. ಒಮಿಕ್ರಾನ್‌ ನಾವು ಊಹಿಸಿರುವ ವ್ಯಾಪ್ತಿಯಲ್ಲಷ್ಟೇ ಇಲ್ಲ. ಭಾರತದ ಮುಖ್ಯ ನಗರಗಳಲ್ಲಿ ಈ ರೂಪಾಂತರಿ ಈಗಾಗಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

Covid Vaccine: ಕೊರೋನಾ ಯೋಧರಿಗೂ 2ನೇ ಡೋಸ್‌ ಬೇಡ್ವಂತೆ..!

‘ಈ ಹೊಸ ರೂಪಾಂತರಿ ಭಾರತೀಯರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಇದರ ಲಕ್ಷಣಗಳು ಸೌಮ್ಯವಾಗಿರುವುದು ಅದೃಷ್ಟಎಂದೇ ಹೇಳಬೇಕು. ಇದನ್ನು ತಡೆಗಟ್ಟಲು ಕೋವಿಡ್‌ ಮಾರ್ಗಸೂಚಿಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ, ಲಸಿಕೆ ಪಡೆಯುವುದು ಹಾಗೂ ನೈರ್ಮಲ್ಯವನ್ನು ಕಾಪಾಡಬೇಕು. ಭಾರತದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಗಳಿಸಿಕೊಂಡಿದ್ದಾರೆ. ಹಾಗಾಗಿ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

8603 ಕೇಸು, 415 ಜನರ ಸಾವು: 99974 ಸಕ್ರಿಯ ಸೋಂಕಿತರು

ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 8,603 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3.46 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 415 ಸೋಂಕಿತರು ಸಾವಿಗೀಡಾಗಿದ್ದು ಒಟ್ಟು ಸಾವು 4.70 ಲಕ್ಷಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 99,974ರಷ್ಟಿದೆ. ಇದು 2020ರ ಮಾಚ್‌ರ್‍ನಿಂದ ದಾಖಲಾದ ಕಡಿಮೆ ಸಂಖ್ಯೆಯಾಗಿದೆ. ಸತತ 160 ದಿನಗಳಿಂದ ದೈನಂದಿನ ಪ್ರಕರರಣಗಳು 50 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.81ಆಗಿದ್ದು, ಕಳೆದ 2 ತಿಂಗಳಿನಿಂದ ಶೇ.2ಕ್ಕಿಂತ ಕಡಿಮೆ ದಾಖಲಾಗುತ್ತಿದೆ. ದೇಶದಲ್ಲಿ ಈವರೆಗೆ 126.53 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

click me!