ಭದ್ರಾವತಿ: ಬೀದಿ ನಾಯಿಗಳ ದಾಳಿ, 4 ವರ್ಷದ ಬಾಲಕ ಸಾವು

Published : Dec 01, 2022, 11:00 AM IST
ಭದ್ರಾವತಿ:  ಬೀದಿ ನಾಯಿಗಳ ದಾಳಿ, 4 ವರ್ಷದ ಬಾಲಕ ಸಾವು

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದ ಘಟನೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸೈಯದ್ ಮದನಿ ಸಾವು 

ಶಿವಮೊಗ್ಗ(ಡಿ.01):  ಬೀದಿ ನಾಯಿಗಳ ದಾಳಿಗೆ ಗಾಯಗೊಂಡಿದ್ದ 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಸೈಯದ್ ಮದನಿ ಎಂಬಾತನೇ ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. 

ನಿನ್ನೆ(ಬುಧವಾರ) ಸಂಜೆ  4 ಗಂಟೆ ಸುಮಾರಿಗೆ ಮಗುವಿನ ತಂದೆ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ತಂದೆಯನ್ನ ಹಿಂಬಾಲಿಸಿಕೊಂಡು ಹೋಗುವಾಗ 7 ರಿಂದ 8 ಬೀದಿ ನಾಯಿಗಳ ಹಿಂಡು ಬಾಲಕನ ಮೇಲೆ ದಾಳಿ ಮಾಡಿತ್ತು. ಇದರಿಂದಾಗಿ ತೀವ್ರ ಅಸ್ವಸ್ಥತೆಯಿಂದ ಬಳಲಿದ ಬಾಲಕನನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸೈಯದ್ ಮದನಿ ಸಾವನಪ್ಪಿದ್ದಾನೆ.

ಬಳಿಗಾರ್‌, ಬೆಂಬಲಿಗರ ಆಗಮನದಿಂದ ಬಿಜೆಪಿಗೆ ಆನೆಬಲ: ಬಿ.ಎಸ್‌.ಯಡಿಯೂರಪ್ಪ

ನಾಯಿಗಳ ದಾಳಿಯ ವೇಳೆ ಬಾಲಕನ ತಂದೆ ಸ್ವಲ್ಪ ದೂರದಲ್ಲಿ ಯಂತ್ರದಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದ, ಯಂತ್ರದ ಶಬ್ದಕ್ಕೆ ನಾಯಿ ದಾಳಿ ತಿಳಿಯದೆ ಬಾಲಕನನ್ನ ಕಳೆದುಕೊಂಡಿದ್ದಾರೆ. 
 

PREV
Read more Articles on
click me!

Recommended Stories

ಸ್ವಾರ್ಥಕ್ಕಾಗಿ ಟ್ರಸ್ಟ್‌ಗಳನ್ನು ಬಳಸಿದ್ರೆ ಸಮಾಜಕ್ಕೆ ಹೇಗೆ ಒಳ್ಳೆದಾಗುತ್ತೆ? ಶಾಸಕ ಬಸನಗೌಡ ಪಾಟೀಲ ಯತ್ನಾಳ
ಗ್ಯಾರಂಟಿ ನಿಭಾಯಿಸಲಾಗದೇ ಕಾಂಗ್ರೆಸ್ ಹೆಣಗಾಟ: ಸಂಸದ ರಮೇಶ ಜಿಗಜಿಣಗಿ ಆರೋಪ