ಇಂದಿನಿಂದ ಹಾವೇರಿ ಸಾಹಿತ್ಯ ಸಮ್ಮೇಳನದ ರಥಯಾತ್ರೆ ಆರಂಭ

By Kannadaprabha NewsFirst Published Dec 1, 2022, 10:00 AM IST
Highlights

ಸಿದ್ದಾಪುರದ ಭುವನಗಿರಿಯಲ್ಲಿ ಯಾತ್ರೆಗೆ ಚಾಲನೆ, ರಾಜ್ಯಾದ್ಯಂತ ಸಂಚಾರ, ಜನವರಿಯಲ್ಲಿ ಹಾವೇರಿಯಲ್ಲಿ ನಡೆಯಲಿರುವ 86ನೇ ಸಾಹಿತ್ಯ ಸಮ್ಮೇಳನ

ಶಿಗ್ಗಾಂವಿ(ಡಿ.01): ಜನವರಿಯಲ್ಲಿ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಗುರುವಾರ ಸಾಹಿತ್ಯ ಸಮ್ಮೇಳನದ ರಥಯಾತ್ರೆ (ಕನ್ನಡರಥ)ಗೆ ಚಾಲನೆ ನೀಡಲಾಗುವುದು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಹಾವೇರಿ ಶಾಸಕ, ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ವೇದಿಕೆ ಸಮಿತಿ ಅಧ್ಯಕ್ಷ ನೆಹರು ಓಲೇಕಾರ ಈ ಬಗ್ಗೆ ಮಾಹಿತಿ ನೀಡಿದರು. ಈ ಬಾರಿ ಸಾಹಿತ್ಯ ಸಮ್ಮೆಳನವನ್ನು ಅದ್ದೂರಿಯಾಗಿ, ವಿಶೇಷವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ. ಗುರುವಾರ ಭುವನಗಿರಿಯ ಭುವನೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಕನ್ನಡರಥಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಈ ರಥಯಾತ್ರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚಾರ ನಡೆಸಲಿದ್ದು, ಇದರ ಮೂಲಕ ಸಮ್ಮೇಳನಕ್ಕೆ ಬರುವಂತೆ ಜನರಿಗೆ ಆಮಂತ್ರಣ ನೀಡಲಾಗುವುದು. ಸಮ್ಮೇಳನ ಆರಂಭಕ್ಕೂ ಮುನ್ನ ಯಾತ್ರೆ ಹಾವೇರಿಗೆ ಬಂದು ತಲುಪಲಿದೆ. ಕರ್ನಾಟಕ ಜಾನಪದ ವಿವಿಯ ಸಹಾಯಕ ಕುಲಸಚಿವ ಹಾಗೂ ಕಲಾವಿದ, ಶಹಜಾನ್‌ ಮುದಕವಿ ಹಾಗೂ ಅವರ ತಂಡದ ನೇತೃತ್ವದಲ್ಲಿ ರಥ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಕನ್ನಡದ ಮೊದಲ ನಿಘಂಟು ಬರೆದ ಕಿಟಲ್‌ ವಂಶಸ್ಥರು ಹಾವೇರಿಗೆ ಭೇಟಿ

ಇದಕ್ಕೂ ಮೊದಲು, ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಥಕ್ಕೆ ಪೂಜೆ ನೆರವೇರಿಸಿ, ಭುವನಗಿರಿಗೆ ಕಳುಹಿಸಿಕೊಡಲಾಯಿತು.
 

click me!