Dharwad: ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್‌ಗೆ 4 ಲಕ್ಷ ದಂಡ

By Govindaraj SFirst Published Nov 2, 2022, 7:30 PM IST
Highlights

ಹುಬ್ಬಳ್ಳಿಯ ದೇವಾಂಗ ಪೇಟೆಯಲ್ಲಿರುವ ತನ್ನ ಫ್ಲಾಟ್‌ನಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಡುವಂತೆ ನಿವೃತ್ತ ಪೋಲಿಸ್ ನೌಕರ ಶಂಕರ ಕೆರಕಣ್ಣವರ ಹುಬ್ಬಳ್ಳಿಯ ಪ್ರಶಾಂತ ಲೋಕಾಪೂರ ಹಾಗೂ ಗಾಯಿತ್ರಿ ಲೋಕಾಪೂರ ಬಿಲ್ಡರ್‌ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಅದರ ಪ್ರಕಾರ ದೂರುದಾರ 25 ಲಕ್ಷ ರೂಪಾಯಿ ಸಂದಾಯ ಮಾಡಿದ್ದರು. 

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ನ.02): ಹುಬ್ಬಳ್ಳಿಯ ದೇವಾಂಗ ಪೇಟೆಯಲ್ಲಿರುವ ತನ್ನ ಫ್ಲಾಟ್‌ನಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಡುವಂತೆ ನಿವೃತ್ತ ಪೋಲಿಸ್ ನೌಕರ ಶಂಕರ ಕೆರಕಣ್ಣವರ ಹುಬ್ಬಳ್ಳಿಯ ಪ್ರಶಾಂತ ಲೋಕಾಪೂರ ಹಾಗೂ ಗಾಯಿತ್ರಿ ಲೋಕಾಪೂರ ಬಿಲ್ಡರ್‌ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಅದರ ಪ್ರಕಾರ ದೂರುದಾರ 25 ಲಕ್ಷ ರೂಪಾಯಿ ಸಂದಾಯ ಮಾಡಿದ್ದರು. 

ಬಿಲ್ಡರ್‌ಗಳು ಕಡಿಮೆ ಗುಣಮಟ್ಟದ ಕಳಪೆ ಸಾಮಗ್ರಿಗಳನ್ನು ಮನೆ ಕಟ್ಟಲು ಉಪಯೋಗಿಸಿ ಮನೆ ಕಟ್ಟಿದ್ದರಿಂದ ಈಗ ಮನೆಯಲ್ಲಿ ಲಿಕೇಜ್ ಬಂದು ಮನೆಯ ಪರಿಕರಗಳು ಕೆಟ್ಟು ಹೋಗಿ ತಮ್ಮ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ ಮತ್ತು ಕಳಪೆ ಗುಣಮಟ್ಟದ ಮನೆ ನಿರ್ಮಾಣದಿಂದ ತನಗೆ ಆರ್ಥಿಕ ಹಾನಿ, ಮಾನಸಿಕ ತೊಂದರೆಯಾಗಿದೆ. ಕಾರಣ ಬಿಲ್ಡರ್‍ಗಳು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರಿಂದ 5 ಲಕ್ಷ ರೂಪಾಯಿ ಪರಿಹಾರ, 2 ಲಕ್ಷ ರೂಪಾಯಿ ಮಾನಸಿಕ ತೊಂದರೆಗೆ ಪರಿಹಾರ ಬಡ್ಡಿ ಸಮೇತ ಕೊಡಿಸುವಂತೆ ದೂರುದಾರ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. 

ನಟೋರಿಯಸ್ ಪಾತಕಿಗಳ ಮೇಲೆ ಬೆಂಗಳೂರು ಸಿಸಿಬಿ ಹದ್ದಿನಕಣ್ಣು

ಬಿಲ್ಡರ್‍ಗಳು ವಕೀಲರ ಮೂಲಕ ಹಾಜರಾಗಿ ತಾವೇ ಸುಮಾರು 2.5 ಲಕ್ಷ ಮೊತ್ತದ ಹೆಚ್ಚುವರಿ ಕೆಲಸ ಮಾಡಿಕೊಟ್ಟಿದ್ದು, ತಮ್ಮಿಂದ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲಾ ಅಂತಾ ಹೇಳಿ ಈ ದೂರನ್ನು ವಜಾ ಮಾಡುವಂತೆ ಕೋರಿದ್ದರು ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವ್ಹಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಅವರು, ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನುಉಪಯೋಗಿಸಲಾಗಿದೆಯೋ ಅಥವಾ ಇಲ್ಲವೋ ಅನ್ನುವುದನ್ನು ತಿಳಿದುಕೊಳ್ಳಲು ಧಾರವಾಡದ ಅರವಿಂದ ಕಪಲಿ ಅನ್ನುವ ಸ್ವತಂತ್ರ ಸಿವಿಲ್ ಇಂಜನೀಯರ್ ಅವರನ್ನು ನೇಮಿಸಿ ಅವರಿಂದ ಕಟ್ಟಡ ಕಾಮಗಾರಿಯ ಬಗ್ಗೆ ಗ್ರಾಹಕರ ಆಯೊಗ ವಿವರವಾದ ವರದಿ ತರಿಸಿಕೊಂಡಿತ್ತು. 

Haveri: ರಸ್ತೆಯಲ್ಲಿ ಅಡ್ಡ ಮಲಗಿ ವಿಭಿನ್ನ ಪ್ರತಿಭಟನೆ ಮಾಡಿದ ರೈತ ಮುಖಂಡರು

ಅವರ ವರದಿಯನ್ನು ಆಧರಿಸಿ ಬಿಲ್ಡರ್‍ಗಳ ಕೋರಿಕೆಯನ್ನು ತಳ್ಳಿಹಾಕಿ ಉಭಯತರ ಮಧ್ಯೆ ಆಗಿರುವ ಕಟ್ಟಡ ನಿರ್ಮಾಣದ ಒಪ್ಪಂದ ಪತ್ರದಲ್ಲಿರುವ ಷರತ್ತಿಗೆ ವಿರುದ್ಧವಾಗಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿ ಮನೆ ನಿರ್ಮಿಸಿಕೊಟ್ಟು ದೂರುದಾರನಿಗೆ ಮತ್ತು ಅವರ ಕುಟುಂಬದವರಿಗೆ ತೊಂದರೆ ಉಂಟು ಮಾಡಿ ಬಿಲ್ಡರ್‍ಗಳು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದ್ದಾರೆ. ಈ ತಪ್ಪಿಗೆ ಬಿಲ್ಡರ್‍ಗಳು ದೂರುದಾರನ Eag ದುರಸ್ತಿ ಮತ್ತು ಇತರೇ ಖರ್ಚಿಗೆ 4 ಲಕ್ಷ ರೂಪಾಯಿ ದಂಡದ ರೂಪದಲ್ಲಿ ಪರಿಹಾರ ಕೊಡುವಂತೆ ಮತ್ತು ಕಳಪೆ ಮನೆ ನಿರ್ಮಾಣದಿಂದ ದೂರುದಾರ ಮತ್ತು ಅವರ ಕುಟುಂಬದವರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ 1 ಲಕ್ಷ ರೂಪಾಯಿ ಪರಿಹಾರ ಹಾಗೂ 10 ಸಾವಿರ ರೂಪಾಯಿ ಈ ಪ್ರಕರಣದ ಖರ್ಚು ವೆಚ್ಚ ಕೊಡಲು ಆದೇಶಿಸಿದೆ.

click me!