ಗಜಾನನ ಶರ್ಮಾ ‘ಪುನರ್ವಸು’ ಸೇರಿ 4 ಪುಸ್ತಕ ಒಂದೇ ದಿನ ಬಿಡುಗಡೆ

By Web DeskFirst Published Jan 25, 2019, 7:50 PM IST
Highlights

ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯದ ಚಟುವಟಿಕೆಗಳಿಗೆ ಯಾವ ಕೊರತೆ ಇಲ್ಲ. ಭಾನುವಾರ ಅಂದರೆ ಜನವರಿ 27 ರಂದು ಮುಂಜಾನೆ ನಾಲ್ಕು ಹೊಸ ಕನ್ನಡ ಪುಸ್ತಕಗಳು ಕನ್ನಡ ಸಾಹಿತ್ಯ ಲೋಕ ಸೇರಿಕೊಳ್ಳಲಿವೆ.

ಬೆಂಗಳೂರು[ಜ.25] ಅಂಕಿತ ಪುಸ್ತಕ ಹೊರತಂದಿರುವ ನಾಲ್ಕು ಹೊಸ ಪುಸ್ತಕಗಳು ಕನ್ನಡತನವನ್ನು ಮತ್ತಷ್ಟು ಗಟ್ಟಿ ಮಾಡಲಿವೆ. ಡಾ. ಗಜಾನನ ಶರ್ಮಾ ಅವರ ‘ಪುನರ್ವಸು’ [ಕಾದಂಬರಿ], ಡಾ. ಎಚ್‌.ಡಿ.ಜಯಪದ್ಮ ಅವರ ‘ಧರ್ಮಸ್ಥಳ: ಸಂಸ್ಕೃತಿ ಕಥನ’, ವಸುಮತಿ ಉಡುಪ ಅವರ ‘ಸಂಧಿಕಾಲ’ [ಕಾದಂಬರಿ], ಕೆ.ಟಿ.ಗಟ್ಟಿ ಅವರ ‘ಕರ್ಮಣ್ಯೇವಾಧಿಕಾರಸ್ತೇ’ [ಕಾದಂಬರಿ]  ಬಿಡುಗಡೆಯಾಗಲಿದೆ.

ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ

ಜನವರಿ 27 ಭಾನುವಾರ ಬೆಳಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಪುಸ್ತಕಗಳ ಅನಾವರಣ ಆಗಲಿದ್ದು ಸಾಹಿತಿ ಶ್ರೀಕಂಠ ಕೂಡಿಗೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಮರ್ಶಕ, ಕಥೆಗಾರ ಕೆ.ಸತ್ಯನಾರಾಯಣ, ಹಿರಿಯ ಪತ್ರಕರ್ತ ಎನ್‌.ಎಸ್‌.ಶ್ರೀಧರಮೂರ್ತಿ ಭಾಗವಹಿಸಲಿದ್ದಾರೆ.

ಗಜಾನನ ಶರ್ಮ ಅವರ ಪುಸ್ತಕ ಬಿಡುಗಡೆ ಸಂಬಂಧ ಶುಭಕೋರಿ ಶ್ರೀಕಾಂತ್ ಕಾಳಮಂಜಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಕವನ ಒಂದನ್ನು ಕೇಳಿಕೊಂಡು ಬನ್ನಿ.

   

click me!