ಶಕ್ತಿ ಯೋಜನೆ: ತಿಂಗಳಲ್ಲಿ 4.02 ಕೋಟಿ ಮಹಿಳೆಯರ ಪ್ರಯಾಣ

By Kannadaprabha News  |  First Published Jul 12, 2023, 10:01 PM IST

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಜು.10ಕ್ಕೆ ಒಂದು ತಿಂಗಳು ಪೂರೈಸಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ: ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌. 


ಹುಬ್ಬಳ್ಳಿ(ಜು.12): ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯು ಒಂದು ತಿಂಗಳು ಪೂರೈಸಿದೆ. ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ಯ ಬಸ್‌ಗಳಲ್ಲಿ 4.02 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಪ್ರಯಾಣದ ಟಿಕೆಟ್‌ ಮೌಲ್ಯ 103.51 ಕೋಟಿಗಳಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌. ತಿಳಿಸಿದ್ದಾರೆ

ಈ ಕುರಿತು ಪ್ರಕಟಣೆ ನೀಡಿದ ಅವರು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಜು.10ಕ್ಕೆ ಒಂದು ತಿಂಗಳು ಪೂರೈಸಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ ಎಂದಿದ್ದಾರೆ.

Tap to resize

Latest Videos

ತಿಂಗಳು ಪೂರೈಸಿದ ಶಕ್ತಿ ಯೋಜನೆ: ಸರ್ಕಾರಿ ಬಸ್‌ಗಳಲ್ಲಿ 16.75 ಕೋಟಿ ಮಹಿಳೆಯರ ಉಚಿತ ಪ್ರಯಾಣ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಸೇರಿ 6 ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್‌ಗಳಲ್ಲಿ ಜೂ.11ರಿಂದ ಜು.10ರ ವರೆಗೆ ಒಟ್ಟು 4,02,52,638 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್‌ ಮೌಲ್ಯ .103,51,65,967 ಗಳಾಗಿದೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿಗೆ ಎಂಡಿ ಅಭಿನಂದನೆ:

ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಲೋಪ-ದೋಷಗಳಿಲ್ಲದೆ ಯೋಜನೆ ಯಶಸ್ವಿಯಾಗಿ ಮುಂದುವರೆದಿದೆ. ಸಂಸ್ಥೆಯಲ್ಲಿ ಹೊಸ ಬಸ್‌ಗಳ ಸೇರ್ಪಡೆಯಾಗಿಲ್ಲ ಹಾಗೂ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕಾತಿಯ ಕೊರತೆ ಇದೆ. ಆದಾಗ್ಯೂ ಲಭ್ಯವಿರುವ ಬಸ್‌ಗಳು ಹಾಗೂ ಮಾನವ ಸಂಪನ್ಮೂಲಗಳ ಸದ್ಬಳಕೆ ಮಾಡುವ ಮೂಲಕ ಯೋಜನೆಯ ಯಶಸ್ಸಿಗೆ ತಂಡದ ರೂಪದಲ್ಲಿ ಎಲ್ಲ ನೌಕರರು ಮತ್ತು ಅಧಿಕಾರಿಗಳ ಕಾರ್ಯ ಕ್ಷಮತೆ ಕಾರಣವಾಗಿದೆ ಎಂದಿದ್ದಾರೆ.

ವಾರಾಂತ್ಯ ದಿನಗಳು, ಹಬ್ಬದ ದಿನಗಳು ಮತ್ತು ಸಾರ್ವಜನಿಕ ರಜೆ ದಿಗಳಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ಬಸ್‌ ನಿಲ್ದಾಣಗಳಲ್ಲಿ ಉಪಸ್ಥಿತರಿದ್ದು ಜನಸಂದಣಿಗೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌. ಅಭಿನಂದಿಸಿದ್ದಾರೆ.

ಶಕ್ತಿ ಯೋಜನೆ ಆರಂಭದಲ್ಲೇ ಅಕ್ರಮದ ವಾಸನೆ: ಪ್ರಯಾಣಿಕರ ದಿಢೀರ್‌ ಏರಿಕೆ ಹಿಂದಿದೆಯಾ ಗೋಲ್‌ಮಾಲ್‌?

ವಿಭಾಗವಾರು ಪ್ರಯಾಣ ಮಾಡಿದ ಮಹಿಳೆಯರು ಹಾಗೂ ಪ್ರಯಾಣದ ಟಿಕೆಟ್‌ ಮೌಲ್ಯದ ಮಾಹಿತಿ ಈ ಕೆಳಗಿನಂತಿದೆ.

ವಿಭಾಗ ಮಹಿಳೆಯರು(ಲಕ್ಷಗಳಲ್ಲಿ) ಪ್ರಯಾಣದ ಟಿಕೆಟ್‌ ಮೌಲ್ಯ

ಹು-ಧಾ ನಗರ ಸಾರಿಗೆ 54,23,700 .6,64,83,273
ಹುಬ್ಬಳ್ಳಿ ಗ್ರಾಮಾಂತರ 27,70,090 .10,01,89,702
ಧಾರವಾಡ 3,26,298 .8,93,61,503
ಬೆಳಗಾವಿ 61,15,163 .12,70,99,283
ಚಿಕ್ಕೋಡಿ 52,83,421 13,52,65,560
ಬಾಗಲಕೋಟೆ 49,70,498 16,07,82,999
ಗದಗ 42,45,811 13,02,22,151
ಹಾವೇರಿ 44,97,458 12,40,80,658
ಉತ್ತರ ಕನ್ನಡ 36,77,199 10,16,80,838

click me!