ಬಾಗಲಕೋಟೆ: ಹಿಪ್ಪರಗಿ ಜಲಾಶಯಕ್ಕೆ 23,000 ಕ್ಯುಸೆಕ್‌ ನೀರು

By Kannadaprabha News  |  First Published Jul 12, 2023, 9:35 PM IST

ಕಳೆದ ಮೂರು ದಿನಗಳಿಂದ ಉತ್ತಮ ಪ್ರಮಾಣದ ನೀರು ಹರಿದು ಬಂದಿದೆ. ಮಂಗಳವಾರ ಹಿಪ್ಪರಗಿ ಜಲಾಶಯಕ್ಕೆ 23 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಮುಂದೆ ಹರಿ ಬೀಡಲಾಗುತ್ತಿದೆ.


ರಬಕವಿ-ಬನಹಟ್ಟಿ(ಜು.12): ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜಾಪೂರ ಜಲಾಶಯದಿಂದ ನೀರು ಭಾರೀ ಮಟ್ಟದಲ್ಲಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಕಳೆದ ಮೂರು ದಿನಗಳಿಂದ ಉತ್ತಮ ಪ್ರಮಾಣದ ನೀರು ಹರಿದು ಬಂದಿದೆ. ಮಂಗಳವಾರ ಹಿಪ್ಪರಗಿ ಜಲಾಶಯಕ್ಕೆ 23 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಮುಂದೆ ಹರಿ ಬೀಡಲಾಗುತ್ತಿದೆ.

ಇನ್ನೂ ಪರಿಪೂರ್ಣವಾಗಿ ನೀರು ಹಿಡಿದಿಟ್ಟುಗೊಳ್ಳದೇ ಹಿಪ್ಪರಗಿ ಜಲಾಶಯದ ತಳಮಟ್ಟದಲ್ಲಿಯೇ ನೀರು ಇದೆ. ಮುಂದಿನ ಊರುಗಳಿಗೆ ನೀರಿನ ಅಭಾವ ತಪ್ಪಿಸುವ ಸಲುವಾಗಿ ಯಾವುದೇ ರೀತಿ ನೀರನ್ನು ಹಿಡಿದಿಟ್ಟುಕೊಳ್ಳದೆ ಬಂದಷ್ಟು ನೀರನ್ನು ಹಿಪ್ಪರಗಿ ಜಲಾಶಯದಿಂದ ಮುಂದೆ ಸಾಗಿಸುವಲ್ಲಿ ಕಾರಣವಾಗಿದೆ.

Tap to resize

Latest Videos

ಬಾಗಲಕೋಟೆ: ಹಿಪ್ಪರಗಿ ಜಲಾಶಯಕ್ಕೆ ಹರಿದು ಬಂದ ನೀರು, ಜನರಲ್ಲಿ ಸಂತಸ

ನೀರಿನ ಅಭಾವವಿಲ್ಲ:

ಒಡಲು ತುಂಬದಿದ್ದರೂ ಪೂರ್ಣ ಪ್ರಮಾಣದಲ್ಲಿ ಕೃಷ್ಣೆಯು ಹರಿಯುತ್ತಿದ್ದು, ನೀರಿನ ಅಭಾವ ದೂರವಾಗುವಲ್ಲಿ ಕಾರಣವಾಗಿದೆ. ಬೆಳಗಾವಿ, ವಿಜಯಪುರ ಹಾಹೂ ಬಾಗಲಕೋಟೆ ಜಿಲ್ಲೆಗಳಿಗೆ ನೀರಿನ ಅಭಾವ ನೀಗಿದೆ. ಆದರೆ ಕೃಷಿ ಭೂಮಿಗೆ ಹಾಗೂ ಪರಿಪೂರ್ಣವಾಗಿ ಬಳಕೆಗೆ ಇನ್ನೂ ಸಮಸ್ಯೆ ನೀಗಿಸಲು ಸಾಧ್ಯವಾಗಿಲ್ಲ.

click me!