Shivamogga: ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರು. ಘೋಷಣೆ

Kannadaprabha News   | Asianet News
Published : Mar 04, 2022, 06:08 AM ISTUpdated : Mar 04, 2022, 08:18 AM IST
Shivamogga: ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರು. ಘೋಷಣೆ

ಸಾರಾಂಶ

*   ಭಾನುವಾರ ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಚೆಕ್‌ ವಿತರಣೆ *  ಕಾಂಗ್ರೆಸ್‌ ರಾಜಕಾರಣಕ್ಕಾಗಿ ವಿಶ್ವನಾಥ್‌ ಪ್ರಕರಣ ಪ್ರಸ್ತಾಪಿಸುತ್ತಿದೆ *  ಹರ್ಷನ ಹತ್ಯೆಯನ್ನು ಮುಸಲ್ಮಾನ ಗೂಂಡಾಗಳು ಮಾಡಿದ್ದಾರೆ

ಶಿವಮೊಗ್ಗ(ಮಾ.04): ಫೆ.20ರಂದು ಹತ್ಯೆಗೀಡಾದ ಹಿಂದೂಪರ ಕಾರ್ಯಕರ್ತ ಹರ್ಷನ(Harsha) ಕುಟುಂಬಕ್ಕೆ ಸರ್ಕಾರ(Government of Karnataka) 25 ಲಕ್ಷ ರು. ಪರಿಹಾರ ಘೋಷಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾನುವಾರ ತಾವು ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರು ಈ ಚೆಕ್‌ ಅನ್ನು ಹರ್ಷ ಕುಟುಂಬಕ್ಕೆ ಹಸ್ತಾಂತರಿಸಲಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಆಸ್ತಿಗಳಿಗೆ ಹಾನಿಯಿಂದ ನಷ್ಟಕ್ಕೆ ಒಳಗಾದವರಿಗೂ ಪರಿಹಾರ(Compensation) ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಹರ್ಷನ ಹತ್ಯೆಯನ್ನು ಮುಸಲ್ಮಾನ(Muslim) ಗೂಂಡಾಗಳು ಮಾಡಿದ್ದಾರೆ. ಎಲ್ಲ ಮುಸ್ಲಿಂರ ಬಗ್ಗೆ ನಾನು ಈ ಮಾತು ಹೇಳುತ್ತಿಲ್ಲ. ಒಳ್ಳೆಯವರೂ ಇದ್ದಾರೆ. ಆದರೆ ಗೂಂಡಾ ವರ್ತನೆ ತೋರುವ ಮುಸಲ್ಮಾನರಿಗೆ ಮಾತ್ರ ಈ ಮಾತು ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದ ಅವರು, ಆದರೆ ಈ ಮುಸಲ್ಮಾನ ಗೂಂಡಾಗಳ ಬಗ್ಗೆ ಕಾಂಗ್ರೆಸ್‌ ಇದುವರೆಗೂ ಒಂದು ಖಂಡನೆಯ ಮಾತನ್ನು ಹೇಳಿಲ್ಲ. ರಾಜ್ಯ ನಾಯಕರಿಗೆ ಇಲ್ಲಿಗೆ ಬಂದು ಸಾಂತ್ವನ ಹೇಳುವುದಕ್ಕೆ ಸಮಯ ಕೂಡಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

'ಬಿಜೆಪಿ ಹರ್ಷನ ತಂಗಿಗೆ MLA, ತಾಯಿಗೆ MP ಟಿಕೆಟ್ ಕೊಡಲಿ, ಅವಿರೋಧವಾಗಿ ಆಯ್ಕೆ ಮಾಡಿಸೋಣ'

ಹತ್ಯೆಯ(Murder) ಬಳಿಕ ನಡೆದ ಗಲಭೆಯಲ್ಲಿ ಹೊರಗಿನ ಶಕ್ತಿಗಳು ಭಾಗಿಯಾಗಿರುವಂತೆ ಕಾಣುತ್ತಿದೆ. ಇದಕ್ಕೆ ಹಿಂದೂ, ಮುಸ್ಲಿಂ ಎರಡೂ ಕಡೆಯವರ ಮನೆ ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆದಾಗ ಮಾತ್ರ ಈ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದರು.

ಇದರಲ್ಲಿ ಎಸ್‌ಡಿಪಿಐ(SDPI) ಮತ್ತು ಪಿಎಫ್‌ಐ(PFI) ಪಾತ್ರ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಹಿಜಾಬ್‌ ವಿವಾದ(Hijab Controversy) ಮತ್ತು ಗಲಭೆಯಂತಹ(Riots) ಘಟನೆಗಳಿಗೆ ಕಾರಣವಾಗುತ್ತಿರುವ ಈ ಎರಡೂ ಸಂಘಟನೆಗಳನ್ನು ನಿಷೇಧಿಸುವಂತೆ ಇತ್ತೀಚೆಗೆ ಯು.ಟಿ. ಖಾದರ್‌ ನೇತೃತ್ವದಲ್ಲಿ ಅನೇಕ ಮುಸ್ಲಿಂ ಶಾಸಕರು ಒಟ್ಟಾಗಿ ಒತ್ತಾಯ ಹೇಳಿಕೆ ನೀಡಿದ್ದರು. ಆದರೆ, ಇದೇ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರು ಈ ಗಲಭೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರಣ ಎಂದು ಟೀಕಿಸುತ್ತಾರೆ. ಅಂದರೆ ಮುಸ್ಲಿಂ ನಾಯಕರಿಗೆ ಇರುವ ತಿಳುವಳಿಕೆ ಮತ್ತು ಅರಿವು ಈ ನಾಯಕರಿಗಿಲ್ಲ ಎಂಬುದು ಗೊತ್ತಾಗಿದೆ ಎಂದರು.
18 ಲಕ್ಷ ರು. ನೀಡಲಾಗಿತ್ತು:

Harsha Murder Case: 'ಸಿದ್ದರಾಮಯ್ಯ ಅಲ್ಲ, ಸಿದ್ದರಾಮ ಮುಲ್ಲಾ...'

ಇದೇ ವೇಳೆ 2015 ರ ಗಲಭೆಯ ವೇಳೆಯಲ್ಲಿ ಹತ್ಯೆಗೀಡಾದ ವಿಶ್ವನಾಥ್‌ ಶೆಟ್ಟಿ ಪ್ರಕರಣವನ್ನು ಕೇವಲ ರಾಜಕಾರಣಕ್ಕಾಗಿ ಎಳೆ ತರಲಾಗುತ್ತಿದೆ. ವಿಶ್ವನಾಥ್‌ ತಾಯಿ ಕಷ್ಟದಲ್ಲಿರುವುದು ಮಾಧ್ಯಮಗಳ ಮೂಲಕ ತಮಗೆ ಗೊತ್ತಾಗಿದೆ. ವಾಸ್ತವವಾಗಿ ವಿಶ್ವನಾಥ ಶೆಟ್ಟಿ ಹತ್ಯೆಗೀಡಾದಾಗ ಸಂಘಟನೆಯಿಂದ 18 ಲಕ್ಷ ರು.ಗಳನ್ನು ಆ ಕುಟುಂಬಕ್ಕೆ ನೀಡಲಾಗಿತ್ತು. ಆ ಬಳಿಕ ಅವರ ತಂದೆ ನಿಧನರಾದರು. ಎರಡನೇ ಪತ್ನಿ ದೂರವಾದರು. ಹೀಗಾಗಿ ತಾಯಿ ಏಕಾಂಗಿಯಾಗಿದ್ದಾರೆ. ಈಗ ನಾವು ಆ ಕುಟುಂಬಕ್ಕೆ ಯಾವ ನೆರವು ನೀಡಬೇಕು ಎಂಬುದನ್ನು ನಿರ್ಧರಿಸಿ ಕೊಡುತ್ತೇವೆ ಎಂದು ಹೇಳಿದರು.

ಈಗ ವಿಶ್ವನಾಥ್‌ ಶೆಟ್ಟಿ ಪ್ರಕರಣದ ಕುರಿತು ಮಾತನಾಡುತ್ತಿರುವ ಕಾಂಗ್ರೆಸ್‌, ಆತನ ಹತ್ಯೆಯಾದಾಗ ಅಧಿಕಾರದಲ್ಲಿತ್ತು. ಆಗ ಆರೋಪಿಗಳನ್ನು ಬಂಧಿಸಲಿಲ್ಲ. ಕುಟುಂಬಕ್ಕೆ ಪರಿಹಾರ ನೀಡಲಿಲ್ಲ. ಈಗ ಇದ್ದಕ್ಕಿದ್ದಂತೆ ಆ ಕುಟುಂಬದ ಬಗ್ಗೆ ಕನಿಕರ ಹುಟ್ಟಿದ್ದು ಮತ್ತು ಸಾಂತ್ವನ ಹೇಳಲು ಮುಂದಾಗುತ್ತಿರುವುದು ಆಶ್ಚರ್ಯ ತಂದಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್‌, ಎಸ್‌.ದತ್ತಾತ್ರಿ, ಮೇಯರ್‌ ಸುನೀತಾ ಅಣ್ಣಪ್ಪ, ಪರಿಷತ್‌ ಸದಸ್ಯರಾದ ಎಸ್‌. ರುದ್ರೇಗೌಡ ಮತ್ತಿತರರು ಇದ್ದರು.
 

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!