Bengaluru: ಬಿಜೆಪಿ ಶಾಸಕರು, ಸಚಿವರಿಗೆ ಬಂಪರ್‌ ಅನುದಾನ

Kannadaprabha News   | Asianet News
Published : Mar 04, 2022, 04:58 AM IST
Bengaluru: ಬಿಜೆಪಿ ಶಾಸಕರು, ಸಚಿವರಿಗೆ ಬಂಪರ್‌ ಅನುದಾನ

ಸಾರಾಂಶ

*  ಬೆಂಗಳೂರು ನಗರ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ 3661 ಕೋಟಿ *  ಆಡಳಿತಾರೂಢ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಭರಪೂರ ಅನುದಾನ *  ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ 

ಬೆಂಗಳೂರು(ಮಾ.04): ಬೆಂಗಳೂರಿನ(Bengaluru) ಮೂಲಸೌಕರ್ಯ ಅಭಿವೃದ್ಧಿಗೆ ‘ಅಮೃತ್‌ ನವ ನಗರೋತ್ಥಾನ’ ಯೋಜನೆಯಡಿ ಘೋಷಿಸಿದ 6 ಸಾವಿರ ಕೋಟಿಗಳ ಪೈಕಿ 3,661 ಕೋಟಿಗಳನ್ನು ಬಿಬಿಎಂಪಿ(BBMP) ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದು, ಆಡಳಿತಾರೂಢ ಬಿಜೆಪಿ(BJP) ಶಾಸಕರು ಇರುವ ಕ್ಷೇತ್ರಗಳಿಗೆ ಭರಪೂರ ಅನುದಾನ(Grant) ನೀಡಲಾಗಿದೆ.

ಬಿಜೆಪಿಯ 15 ಶಾಸಕರಿಗೆ ಬರೋಬ್ಬರಿ .2,718 ಕೋಟಿ, ಕಾಂಗ್ರೆಸ್‌ನ 12 ಶಾಸಕರಿಗೆ 833 ಹಾಗೂ ಜೆಡಿಎಸ್‌ನ(JDS) ಒಬ್ಬ ಶಾಸಕರಿಗೆ .110 ಕೋಟಿ ಅನುದಾನ ನೀಡಲಾಗಿದೆ. ಬಿಜೆಪಿ ಶಾಸಕರಿಗೆ .208 ಕೋಟಿಗಳಿಂದ .140 ಕೋಟಿವರೆಗೆ, ಕಾಂಗ್ರೆಸ್‌(Congress) ಶಾಸಕರಿಗೆ .90 ರಿಂದ .8 ಕೋಟಿಗಳವರೆಗೆ ಅನುದಾನ ಹಂಚಿಕೆ ಮಾಡಲಾಗಿದೆ. ಈ ಮೂಲಕ ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರಿಗೆ ನಿರೀಕ್ಷೆಯಂತೆ ಹೆಚ್ಚಿನ ಅನುದಾನ ನೀಡಲಾಗಿದೆ.

Mekedatu Padayatra: ಮೇಕೆದಾಟು ಯಾತ್ರೆ ಸಮಾರೋಪ... ಎರಡು ಬಿಂದಿಗೆ ನೀರಿನ ಕತೆ!

ಮುಖ್ಯಮಂತ್ರಿಗಳು(Chief Minister of Karnataka) 75ನೇ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಬೆಂಗಳೂರಿನ ರಸ್ತೆ, ಗ್ರೇಟ್‌ ಸಪರೇಟರ್‌, ಕೆರೆ, ರಾಜಕಾಲುವೆ, ಉದ್ಯಾನವನ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಕಟ್ಟಡ ನಿರ್ಮಾಣ, ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ ಹಾಗೂ ಇತ್ಯಾದಿ ಕಾಮಗಾರಿಗೆ .6 ಸಾವಿರ ಕೋಟಿ ನೀಡುವುದಾಗಿ ಘೋಷಿಸಿದ್ದರು. ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಫೆ.25ರಂದು ಹೊರಡಿಸಿರುವ ಆದೇಶದಲ್ಲಿ 15 ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಕೈಗೊಳ್ಳುವ ಕಾಮಗಾರಿಯ ಕ್ರಿಯಾ ಯೋಜನೆ ರೂಪಿಸುವುದು ಹಾಗೂ ಶಾಸಕರ ಕೋರಿಕೆಯನ್ನು ಪರಿಗಣಿಸುವುದು. ಜತೆಗೆ 50:50 ಅನುಪಾತದಲ್ಲಿ ಬೃಹತ್‌ ಯೋಜನೆ ಹಾಗೂ ವಾರ್ಡ್‌ ಅಭಿವೃದ್ಧಿಗೆ ಕೈಗೊಳ್ಳಬೇಕೆಂದು ನಿರ್ದೇಶಿಸಲಾಗಿದೆ.

Karnataka Politics: ಸಿದ್ದರಾಮಯ್ಯನವರೇ, ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ: ಸಿ.ಟಿ. ರವಿ

ಅನುದಾನ ಹಂಚಿಕೆ ವಿವರ

ವಿಧಾನಸಭಾ ಕ್ಷೇತ್ರ ಶಾಸಕರು ಪಕ್ಷ ಅನುದಾನ (ಕೋಟಿ)

ಮಹದೇವಪುರ ಅರವಿಂದ ಲಿಂಬಾವಳಿ ಬಿಜೆಪಿ 208
ರಾಜರಾಜೇಶ್ವರಿ ನಗರ ಮುನಿರತ್ನ ಬಿಜೆಪಿ 208
ಬೊಮ್ಮನಹಳ್ಳಿ ಸತೀಶ್‌ ರೆಡ್ಡಿ ಬಿಜೆಪಿ 207
ಕೆ.ಆರ್‌.ಪುರ ಬೈರತಿ ಬಸವರಾಜ ಬಿಜೆಪಿ 207
ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ ಬಿಜೆಪಿ 206
ಯಶವಂತಪುರ ಎಸ್‌.ಟಿ.ಸೋಮಶೇಖರ್‌ ಬಿಜೆಪಿ 202
ಗೋವಿಂದರಾಜನಗರ ವಿ.ಸೋಮಣ್ಣ ಬಿಜೆಪಿ 200
ಪದ್ಮನಾಭನಗರ ಆರ್‌.ಅಶೋಕ ಬಿಜೆಪಿ 200
ಯಲಹಂಕ ಎಸ್‌.ಆರ್‌.ವಿಶ್ವನಾಥ್‌ ಬಿಜೆಪಿ 170
ಸಿವಿರಾಮನ್‌ನಗರ ಎಸ್‌.ರಘು ಬಿಜೆಪಿ ಬಿಜೆಪಿ 175
ಮಹಾಲಕ್ಷ್ಮಿಪುರ ಗೋಪಾಲಯ್ಯ ಬಿಜೆಪಿ 170
ಮಲ್ಲೇಶ್ವರ ಡಾ.ಸಿ.ಎನ್‌.ಅಶ್ವತ್ಥನಾರಾಯ 150
ರಾಜಾಜಿನಗರ ಸುರೇಶ್‌ ಕುಮಾರ್‌ ಬಿಜೆಪಿ 150
ಚಿಕ್ಕಪೇಟೆ ಉದಯ ಗರುಡಾಚಾರ್‌ ಬಿಜೆಪಿ 140
ಬಸವನಗುಡಿ ರವಿ ಸುಬ್ರಹ್ಮಣ್ಯ ಬಿಜೆಪಿ 125
ದಾಸರಹಳ್ಳಿ ಮಂಜುನಾಥ ಜೆಡಿಎಸ್‌ 110
ಹೆಬ್ಬಾಳ ಬೈರತಿ ಸುರೇಶ್‌ ಕಾಂಗ್ರೆಸ್‌ 90
ಬಿಟಿಎಂ ಲೇಔಟ್‌ ರಾಮಲಿಂಗಾರೆಡ್ಡಿ ಕಾಂಗ್ರೆಸ್‌ 80
ಚಾಮರಾಜಪೇಟೆ ಜಮೀರ್‌ ಅಹ್ಮದ್‌ ಕಾಂಗ್ರೆಸ್‌ 80
ಗಾಂಧಿನಗರ ದಿನೇಶ್‌ ಗುಂಡೂರಾವ್‌ ಕಾಂಗ್ರೆಸ್‌ 80
ಸರ್ವಜ್ಞನಗರ ಕೆ.ಜೆ.ಜಾಜ್‌ರ್‍ ಕಾಂಗ್ರೆಸ್‌ 80
ಶಿವಾಜಿನಗರ ರಿಜ್ವಾನ್‌ ಅಷ್ಮದ್‌ ಕಾಂಗ್ರೆಸ್‌ 80
ಬ್ಯಾಟರಾಯನಪುರ ಕೃಷ್ಣ ಭೈರೇಗೌಡ-ಕಾಂಗ್ರೆಸ್‌ 75
ಪುಲಕೇಶಿನಗರ ಅಖಂಡ ಶ್ರೀನಿವಾಸ್‌ ಕಾಂಗ್ರೆಸ್‌ 70
ಶಾಂತಿನಗರ ಎನ್‌.ಎ.ಹ್ಯಾರಿಸ್‌ ಕಾಂಗ್ರೆಸ್‌ 70
ಜಯನಗರ ಸೌಮ್ಯಾರೆಡ್ಡಿ ಕಾಂಗ್ರೆಸ್‌ 60
ವಿಜಯನಗರ ಎಂ.ಕೃಷ್ಣಪ್ಪ ಕಾಂಗ್ರೆಸ್‌ 60
ಆನೇಕಲ್‌ ಶಿವಣ್ಣ ಕಾಂಗ್ರೆಸ್‌ 08
ಒಟ್ಟು 3,661

ಯಾವ ಪಕ್ಷಕ್ಕೆ ಎಷ್ಟು? ಪಕ್ಷ ಶಾಸಕರು ಅನುದಾನ(ಕೋಟಿ)

ಬಿಜೆಪಿ 15 2,718
ಕಾಂಗ್ರೆಸ್‌ 12 833
ಜೆಡಿಎಸ್‌ 1 110
 

PREV
Read more Articles on
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ