25 ಉಂಗುರ ಕದ್ದು ಹೊಟ್ಟೆಯಲ್ಲಿ ಇಟ್ಕೊಂಡಿದ್ದ!

Kannadaprabha News   | Asianet News
Published : Jun 01, 2021, 07:25 AM IST
25 ಉಂಗುರ ಕದ್ದು ಹೊಟ್ಟೆಯಲ್ಲಿ ಇಟ್ಕೊಂಡಿದ್ದ!

ಸಾರಾಂಶ

ಚಿನ್ನ ಕದ್ದ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಖತರ್ನಾಕ್ ಐಡಿಯಾ ಚಿನ್ನ ಕದ್ದು ಹೊಟ್ಟೆಯಲ್ಲಿಟ್ಟುಕೊಂಡಿದ್ದ ಆರೋಪಿ ಹೊಟ್ಟೆನೋವೇಂದಾಗ ಹೊರಬಿದ್ದ ರಹಸ್ಯ 

ಸುಳ್ಯ (ಜೂ.01): ಚಿನ್ನ ಕದ್ದ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ 25ಕ್ಕೂ ಹೆಚ್ಚು ಚಿನ್ನದ ಉಂಗುರಗಳನ್ನು ಐಸ್‌ಕ್ರೀಂ ಜತೆ ನುಂಗಿದ ವಿಚಿತ್ರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ವರದಿಯಾಗಿದೆ. 

ಕೇರಳದ ತ್ರಿಶೂರಿನ ಶಿಬು ಎಂಬಾತನೇ ಚಿನ್ನ ನುಂಗಿದ ಆರೋಪಿಯಾಗಿದ್ದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆತನ ಹೊಟ್ಟೆಯಿಂದ 35 ಗ್ರಾಂ ಚಿನ್ನವನ್ನು ಹೊರತೆಗಿದಿದ್ದಾರೆ. 

ಇತ್ತೀಚೆಗೆ ಸುಳ್ಯದ ಮೋಹನ ಜ್ಯುವೆಲ್ಲರಿ ಮಾರ್ಟ್‌ನಿಂದ 180 ಗ್ರಾಂ ಚಿನ್ನ ಮತ್ತು 50 ಸಾವಿರ ನಗದು ಕಳ್ಳತನವಾಗಿತ್ತು. ಪ್ರಕರಣ ಸಂಬಂಧ ತಂಗಚ್ಚ ಮ್ಯಾಥ್ಯೂ ಮತ್ತು ಶಿಬು ಎಂಬ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿ 147 ಗ್ರಾಂ ಚಿನ್ನ ಪೊಲೀಸರು ವಶಪಡಿಸಿಕೊಂಡಿದ್ದರು. 

ಪೊಲೀಸ್ ಚೆಕಿಂಗ್ ವೇಳೆ ಸಿಕ್ಕಿಬಿದ್ದ ಕಳ್ಳರು : ನಾಲ್ಕನೆ ಬಾರಿ ಅರೆಸ್ಟ್ ...

ಬಂಧನದ ಬಳಿಕ ಶಿಬು ಆರೋಗ್ಯದಲ್ಲಿ ಏರುಪೇರಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಏಕ್ಸ್‌ರೇ ಮಾಡಿದ ಸಂದರ್ಭ ಹೊಟ್ಟೆಯಲ್ಲಿ ಆಭರಣ ಇರೋದು ಪತ್ತೆಯಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಗಿದೆ.

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌