ಜನಪ್ರತಿನಿಧಿಗಳ ಪಿಎಗಳಿಗೂ ಕೊರೋನಾ ವಾರಿಯರ್ಸ್ ಗೌರವ?

Published : May 31, 2021, 09:54 PM IST
ಜನಪ್ರತಿನಿಧಿಗಳ ಪಿಎಗಳಿಗೂ ಕೊರೋನಾ ವಾರಿಯರ್ಸ್ ಗೌರವ?

ಸಾರಾಂಶ

*  ಜನಪ್ರತಿನಿಧಿಗಳ ಆಪ್ತ ಸಹಾಯಕರನ್ನು ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಪರಿಗಣಿಸಿ * ನಿಯಮ್ ಏನು ಹೇಳುತ್ತದೆ ಪರಿಶೀಲನೆ ಮಾಡಿ ಎಂದ ಆರೋಗ್ಯ ಇಲಾಖೆ * ಆರೋಗ್ಯ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರಿಗೆ ಆರೋಗ್ಯ ಇಲಾಖೆ ಎಸಿಎಸ್ ನಿರ್ದೇಶನ

ಬೆಂಗಳೂರು(ಮೇ 31)  ಸಚಿವರು, ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರ ಆಪ್ತ ಸಹಾಯಕರನ್ನು ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿತ್ತು. 

ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಆಪ್ತ ಸಹಾಯಕರು ಫ್ರಂಟ್ ಲೈನ್ ವಾರಿಯರ್ಸ್‌ ಪರಿಮಿತಿಯ ವ್ಯಾಪ್ತಿಗೆ ಒಳಪಡಲಿದ್ದಾರೋ ಅಥವಾ ಇಲ್ಲವೋ ಎಂದು ನಿಯಮಾನುಸಾರ ಪರಿಶೀಲಿಸಿ ಅಭಿಪ್ರಾಯ ನೀಡುವಂತೆ  ಸೂಚನೆ ನೀಡಲಾಗಿದೆ.

ಶೈಕ್ಷಣಿಕ ವರ್ಷ ಆರಂಭದ ವೇಳಾಪಟ್ಟಿ ಬಿಡುಗಡೆ

ಆರೋಗ್ಯ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರಿಗೆ ಆರೋಗ್ಯ ಇಲಾಖೆ ಎಸಿಎಸ್ ನಿರ್ದೇಶನ ನೀಡಿದ್ದಾರೆ. ಕೊರೋನಾ ಸೋಂಕಿಗೆ ಕೆಲಸ ಸಚಿವ ಆಪ್ತ ಸಹಾಯಕರು ತುತ್ತಾಗುತ್ತಿದ್ದಾರೆ.  ಜನಪ್ರತಿನಿಧಿಗಳೊಂದಿಗೆ ನಿರಂತರ ಕೆಲಸ  ಮಾಡುತ್ತಲೇ ಬಂದಿದ್ದಾರೆ.

ವೈದ್ಯರು, ದಾದಿಗಳು, ಮಾಧ್ಯಮದವರು, ಪೌರ ಕಾರ್ಮಿಕರು, ತುರ್ತು ಸೇವೆ ನಿರ್ವಹಿಸುವವರನ್ನು ಸೇರಿದಂತೆ ಕೆಲವು ವರ್ಗಗಳನ್ನು ಕೊರೋನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣನೆ ಮಾಡಿದೆ. 

"

PREV
click me!

Recommended Stories

30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು
ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್