ಪಿಕಪ್‌, ಕಾರಿನಲ್ಲಿ 175 ಕೆ.ಜಿ. ಗಾಂಜಾ ಸಾಗಾಟ

Suvarna News   | Asianet News
Published : Aug 12, 2020, 09:14 AM ISTUpdated : Aug 12, 2020, 09:17 AM IST
ಪಿಕಪ್‌, ಕಾರಿನಲ್ಲಿ 175 ಕೆ.ಜಿ. ಗಾಂಜಾ ಸಾಗಾಟ

ಸಾರಾಂಶ

ಪಿಕಪ್‌ ಜೀಪ್‌ ಮತ್ತು ಕಾರಿನಲ್ಲಿ ಸುಮಾರು 175 ಕೆ.ಜಿ. ಗಾಂಜಾ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ನಗರ ಪೊಲೀಸರು, ವಾಹನಗಳ ಸಮೇತ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಪ್ರಕರಣ ಮಂಗಳವಾರ ಬೆಳಗ್ಗೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ನಡೆದಿದೆ.

ಪುತ್ತೂರು(ಆ.12): ಪಿಕಪ್‌ ಜೀಪ್‌ ಮತ್ತು ಕಾರಿನಲ್ಲಿ ಸುಮಾರು 175 ಕೆ.ಜಿ. ಗಾಂಜಾ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ನಗರ ಪೊಲೀಸರು, ವಾಹನಗಳ ಸಮೇತ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಪ್ರಕರಣ ಮಂಗಳವಾರ ಬೆಳಗ್ಗೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾ ಸಾಗಾಟ ನಡೆಸುತ್ತಿದ್ದ ಪಿಕಪ್‌ ಜೀಪ್‌ ಮತ್ತು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಸುಮಾರು 17.50 ಲಕ್ಷ ರು. ಮೌಲ್ಯದ 175 ಕೆಜಿ ಗಾಂಜಾ ಪತ್ತೆಯಾಗಿದೆ.

ಮೆಂತ್ಯದ ಎಲೆ ಎಂದು ಭಾವಿಸಿ ಗಾಂಜಾದ ಸಬ್ಜಿ ಸೇವಿಸಿದ ಕುಟುಂಬ!

ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ಕೇರಳ ರಾಜ್ಯದ ಕಾಸರಗೋಡು ದೂರ್ಮಕ್ಕಾಡ್‌ ನಿವಾಸಿ ಇಬ್ರಾಹಿಂ ಯಾನೆ ಅರ್ಶದ್‌ ಯಾನೆ ಅಚ್ಚು(26), ಕಾಸರಗೋಡು ಹೊಸಂಗಡಿ ಮಿಜರ್‌ಪಳ್ಳ ನಿವಾಸಿ ಮೊಹಮ್ಮದ್‌ ಶಫೀಕ್‌(31) ಮತ್ತು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಮಡಕುಂಜ ನಿವಾಸಿ ಖಲಂದರ್‌ ಶಾಫಿ(26) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗಾಂಜಾ ಸಹಿತ 3 ಲಕ್ಷ ರು. ಮೌಲ್ಯದ ಪಿಕಪ್‌ ಜೀಪ್‌ ಮತ್ತು 4 ಲಕ್ಷ ರು. ಮೌಲ್ಯದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 24,50,000 ರು. ಎಂದು ತಿಳಿದು ಬಂದಿದೆ.

ಗುದದ್ವಾರದಲ್ಲಿ ಕೆಜಿ ಚಿನ್ನ, ಎಂಥಾ ಚಾಲಾಕಿ ಕಣ್ರಲಾ!

ನಗರ ಠಾಣೆಯ ಇನ್ಸ್‌ಪೆಕ್ಟರ್‌ ತಿಮ್ಮಪ್ಪ ನಾಯ್‌್ಕ ಅವರ ನಿರ್ದೇಶನದಂತೆ ಎಸ್‌ಐ ಜಂಬುರಾಜ್‌, ಸಿಬ್ಬಂದಿ ಚಿದಾನಂದ, ಸ್ಕರಿಯ, ಕೃಷ್ಣಪ್ಪ, ಜಗದೀಶ, ಜಯರಾಮ, ಸುಬ್ರಹ್ಮಣ್ಯ, ಕಿರಣ್‌, ಶರೀಫ್‌, ಶರಣ್‌ ಪಾಟೀಲ್‌, ಶ್ರೀಶೈಲ, ಮತ್ತು ಆನಂದಯ್ಯ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬಂಧಿತ ಆರೋಪಿಗಳಲ್ಲಿ ಇಬ್ರಾಹಿಂ ಯಾನೆ ಅರ್ಶದ್‌ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿರುವ ಆರೋಪಿಯಾಗಿದ್ದು, ಖಲಂದರ್‌ ಶಾಫಿ ವಿಟ್ಲ ಪೊಲೀಸ್‌ ಠಾಣೆಯಲ್ಲಿ 2 ಗಾಂಜಾ ಸಾಗಾಟ ಪ್ರಕರಣ, 1 ಕೊಲೆ ಯತ್ನ ಪ್ರಕರಣ, ಮತ್ತು ಕಾವೂರು ಠಾಣೆಯಲ್ಲಿ 1 ಗಾಂಜಾ ಸಾಗಾಟ ಪ್ರಕರಣ ಆರೋಪ ಈ ಹಿಂದೆ ದಾಖಲಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!