ಉಡುಪಿ ಜಿಲ್ಲೆಯಲ್ಲಿ ಮಳೆಹಾನಿ ಸ್ಥಿತಿಗತಿ ಪರಿಶೀಲಿಸಲು ಬಂದಿದ್ದ ರಾಜ್ಯ ಗೃಹ - ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಮುದ್ರ ವಿಶಿಷ್ಟರೀತಿಯಲ್ಲಿ ತನ್ನ ಪರಿಚಯ ಮಾಡಿಕೊಟ್ಟಿತು. ಸಚಿವರ ಚಪ್ಪಲಿಯನ್ನು ಸೆಳೆದುಕೊಂಡು ಸಮುದ್ರ ಮತ್ತೆ ಮರಳಿಸಿತು.
ಕಾಪು(ಆ.12): ಉಡುಪಿ ಜಿಲ್ಲೆಯಲ್ಲಿ ಮಳೆಹಾನಿ ಸ್ಥಿತಿಗತಿ ಪರಿಶೀಲಿಸಲು ಬಂದಿದ್ದ ರಾಜ್ಯ ಗೃಹ - ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಮುದ್ರ ವಿಶಿಷ್ಟರೀತಿಯಲ್ಲಿ ತನ್ನ ಪರಿಚಯ ಮಾಡಿಕೊಟ್ಟಿತು. ಸಚಿವರ ಚಪ್ಪಲಿಯನ್ನು ಸೆಳೆದುಕೊಂಡು ಸಮುದ್ರ ಮತ್ತೆ ಮರಳಿಸಿತು.
ಸಚಿವರು ಪಡುಬಿದ್ರಿ ಬೀಚಲ್ಲಿ ಸಮುದ್ರ ಕೊರೆತವನ್ನು ದಡದಲ್ಲಿ ನಿಂತು ವೀಕ್ಷಿಸುತ್ತಿದ್ದರು. ಬಿಜೆಪಿ ನಾಯಕರು ಅತ್ಯುತ್ಸಾಹ ತೋರಿಸಿ ಸಚಿವರನ್ನು ಸಮುದ್ರತೀರಕ್ಕೆ ಕರೆದೊಯ್ದರು. ಅಷ್ಟರಲ್ಲಿ ಸಮುದ್ರದಲ್ಲಿ ಭಾರಿ ಅಲೆಯೊಂದು ಎದ್ದುಬಂತು. ಸಚಿವರು ಹಿಂದಕ್ಕೆ ತಿರುಗಬೇಕು ಎನ್ನುವಷ್ಟರಲ್ಲಿ ಅಲೆ ಅವರ ಮೊಳಕಾಲೆತ್ತರಕ್ಕೆ ಚಿಮ್ಮಿ ಅವರ ಕಾಲಲ್ಲಿದ್ದ ಒಂದು ಚಪ್ಪಲಿಯನ್ನು ಸೆಳೆದುಕೊಂಡು ಹಿಂದಕ್ಕೆ ಹೋಯಿತು.
ವಿಶಿಷ್ಟ ರೀತಿಯಲ್ಲಿ ತನ್ನನ್ನು ಪರಿಚಯಿಸಿದ ಸಮುದ್ರ: ಸಚಿವ ಬಸವರಾಜ ಬೊಮ್ಮಾಯಿ ಪಾರು
ಒಂದು ಕ್ಷಣ ಗಲಿಬಿಲಿಯಾದ ಸಚಿವರು ಚಪ್ಪಲಿ ಹೆಕ್ಕಲೆಂದು ಮುಂದಕ್ಕೆ ಹೋದಾಗ ಅವರ ಅಂಗರಕ್ಷಕ ಬಂದು ತಡೆದರು. ಎಸ್ಪಿ ವಿಷ್ಣುವರ್ಧನ್ ಸಹಿತ ಉಳಿದವರು ಸಚಿವರಿದ್ದಲ್ಲಿ ಓಡಿದರು. ಒಂದೆರೆಡು ನಿಮಿಷದಲ್ಲಿ ಇನ್ನೊಂದು ಅಲೆಯ ಜೊತೆಗೆ ಸಚಿವರ ಚಪ್ಪಲಿ ಹಿಂದಕ್ಕೆ ಬಂತು.