ಉಡುಪಿ ಜಿಲ್ಲೆಯಲ್ಲಿ ನರ್ಸ್‌ ಸಹಿ​ತ 14 ಮಂದಿಗೆ ಸೋಂಕು

By Kannadaprabha News  |  First Published Jun 25, 2020, 7:25 AM IST

ಕಾಪು ತಾಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು ಎಂಬಲ್ಲಿನ ನರ್ಸ್‌ ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ ಅವರಿಗೆ ಯಾರಿಂದ ಸೋಂಕು ತಗಲಿತು ಎನ್ನುವುದು ಪತ್ತೆಯಾಗಿಲ್ಲ. ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಸಹೋದ್ಯೋಗಿಗಳಲ್ಲಿ ಈಗ ಆತಂಕ ಶುರುವಾಗಿದೆ.


ಉಡುಪಿ(ಜೂ.25): ಕಾಪು ತಾಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು ಎಂಬಲ್ಲಿನ ನರ್ಸ್‌ ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ ಅವರಿಗೆ ಯಾರಿಂದ ಸೋಂಕು ತಗಲಿತು ಎನ್ನುವುದು ಪತ್ತೆಯಾಗಿಲ್ಲ. ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಸಹೋದ್ಯೋಗಿಗಳಲ್ಲಿ ಈಗ ಆತಂಕ ಶುರುವಾಗಿದೆ.

ಶೀತಜ್ವರದಿಂದ ನರಳುತ್ತಿದ್ದ ಅವರನ್ನು ಪರೀಕ್ಷಿಸಿದಾಗ ಅವರಿಗೆ ಸೋಂಕಿರುವುದು ಪತ್ತೆಯಾಗಿದೆ. ಅವರ ಮನೆಯನ್ನು ಕಂಟೈನ್ಮೆಂಟ್‌ ಮಾಡಲಾಗಿದ್ದು, ಅವರ ಮನೆಯವರು ಮತ್ತು ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.

Latest Videos

undefined

ದಕ್ಷಿಣ ಕನ್ನಡದಲ್ಲಿ ಕೊರೋನಾಕ್ಕೆ 10ನೇ ಬಲಿ, 45 ಡಿಸ್ಚಾರ್ಜ್

ಇದರೊಂದಿಗೆ ಜಿಲ್ಲೆಯಲ್ಲಿ ಬುಧವಾರ ಒಟ್ಟು 14 ಮಂದಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1102ಕ್ಕೇರಿದೆ. ಈ 14 ಮಂದಿಯಲ್ಲಿ 7 ಪುರುಷರು, 5 ಮಹಿಳೆಯರು ಮತ್ತು 11 ವರ್ಷದ ಬಾಲಕಿ ಮತ್ತು 2 ವರ್ಷದ ಬಾಲಕರಿದ್ದಾರೆ. ಅವರಲ್ಲಿ 9 ಮಂದಿ ಮುಂಬೈಯಿಂದ ಬಂದವರು, ಒಬ್ಬರು ಬೆಂಗಳೂರಿನಿಂದ ಬಂದವರು, ಒಬ್ಬರು ಶಿರ್ವದ ನರ್ಸ್‌ ಆಗಿದ್ದಾರೆ.

ಅಲ್ಲದೆ, ಜೂ.3ರಂದು ಸೋಂಕು ಪತ್ತೆಯಾದ, ಮುಂಬೈಯಿಂದ ಬಂದ 63 ವರ್ಷ ವಯಸ್ಸಿನ ಗಂಡಸಿನಿಂದ ಮೂರೂ ಮಹಿಳೆಯರಿಗೆ (38, 40 ಮತ್ತು 50 ವರ್ಷ) ಕೊರೋನಾ ಸೋಂಕು ತಗಲಿದ್ದು ಪತ್ತೆಯಾಗಿದೆ.

ಸರ್ಕಾರದ ದಿಟ್ಟ ತೀರ್ಮಾನ, ಚೀನಾ ಮೇಡ್ ವಿದ್ಯುತ್ ಉಪಕರಣ ಬ್ಯಾನ್!

ಜಿಲ್ಲೆಯ ಒಟ್ಟು 1102 ಸೋಂಕಿತರಲ್ಲಿ 987 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದವರಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ದ.ಕ. ಜಿಲ್ಲೆಯವರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 113 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಮತ್ತೆ 107 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ 47 ಮಂದಿ ಮುಂಬೈ, ಬೆಂಗಳೂರು ಹಾಟ್‌ ಸ್ಪಾಟ್‌ಗಳಿಂದ ಬಂದವರು, 29 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರು, 7 ಮಂದಿ ಕೊರೋನಾ ಶಂಕಿತರು ಮತ್ತು 22 ಮಂದಿ ಶೀತಜ್ವರದಿಂದ ಬಳ​ಲು​ತ್ತಿದ್ದವರಾಗಿದ್ದಾರೆ. ಬುಧವಾರ 65 ಮಾದರಿಗಳ ವರದಿಗಳು ಬಂದಿದ್ದು, ಅವುಗಳಲ್ಲಿ 14 ಪಾಸಿಟಿವ್‌ ಮತ್ತು 51 ನೆಗೆಟಿವ್‌ ಬಂದಿವೆ. ಇನ್ನೂ 398 ಮಾದರಿಗಳ ವರದಿ ಬರಬೇಕಾಗಿದೆ.

ಹಾಟ್‌ ಸ್ಪಾಟ್‌ ಮುಂಬೈಯಿಂದ ಬರುತ್ತಲೇ ಇದ್ದಾರೆ

ಮಹಾರಾಷ್ಟ್ರದಿಂದ ಈಗಲೂ ಪ್ರತಿದಿನ 200 - 250 ಮಂದಿ ರೈಲು ಮತ್ತು ಕಾರುಗಳ ಮೂಲಕ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರನ್ನೂ ಹೋಂ ಕ್ವಾರಂಟೈನ್‌ ಮಾಡಿಸಲಾಗುತ್ತಿದೆ. ಅವರಲ್ಲಿ ಗರ್ಭಿಣಿ, ಸಣ್ಣ ಮಕ್ಕಳು ಹಾಗೂ 65 ವರ್ಷಗಳಿಂದ ಮೇಲ್ಪಟ್ಟವರು ಹಾಗೂ ಇತರ ಕಾಯಿಲೆ ಇರುವವರನ್ನು ಆದ್ಯತೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದ್ದಾರೆ.

click me!