ಮಳೆ ನೀರಿನ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಿದ ಕಾರ್ಪೊರೇಟರ್‌..!

Kannadaprabha News   | Asianet News
Published : Jun 25, 2020, 07:20 AM ISTUpdated : Jun 25, 2020, 08:03 AM IST
ಮಳೆ ನೀರಿನ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಿದ ಕಾರ್ಪೊರೇಟರ್‌..!

ಸಾರಾಂಶ

ಮಳೆ ನೀರು ಹರಿಯುವ ಮ್ಯಾನ್‌ಹೋಲ್‌ಗೆ ಕಾರ್ಮಿಕರು ಇಳಿಯಲು ನಿರಾಕರಿಸಿದಾಗ ಸ್ಥಳೀಯ ಕಾರ್ಪೊರೇಟರ್‌ ಸ್ವತಃ ಇಳಿದು ಚರಂಡಿ ಸ್ವಚ್ಛಗೊಳಿಸಿ ಗಮನ ಸೆಳೆಯುವ ಕಾರ್ಯ ಮಂಗ​ಳೂ​ರಿ​ನಲ್ಲಿ ಮಾಡಿದ್ದಾರೆ.

ಮಂಗಳೂರು(ಜೂ.25): ಮಳೆ ನೀರು ಹರಿಯುವ ಮ್ಯಾನ್‌ಹೋಲ್‌ಗೆ ಕಾರ್ಮಿಕರು ಇಳಿಯಲು ನಿರಾಕರಿಸಿದಾಗ ಸ್ಥಳೀಯ ಕಾರ್ಪೊರೇಟರ್‌ ಸ್ವತಃ ಇಳಿದು ಚರಂಡಿ ಸ್ವಚ್ಛಗೊಳಿಸಿ ಗಮನ ಸೆಳೆಯುವ ಕಾರ್ಯ ಮಂಗ​ಳೂ​ರಿ​ನಲ್ಲಿ ಮಾಡಿದ್ದಾರೆ.

ನಗರದ ಕದ್ರಿ ಕಂಬಳದ ಮುಖ್ಯ ರಸ್ತೆ ಪಕ್ಕದಲ್ಲಿ ಹಲವು ವರ್ಷಗಳಿಂದ ಮಳೆ ನೀರು ಹರಿಯುವ ಮುಖ್ಯ ಚರಂಡಿ ಬ್ಲಾಕ್‌ ಆಗಿ ನೀರು ರಸ್ತೆಯಲ್ಲಿ ಹರಿಯುವಂತಾಗಿತ್ತು. ಮಂಗಳವಾರ ಗುತ್ತಿಗೆ ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿದ ಕಾರ್ಪೊರೇಟರ್‌ ಮನೋಹರ ಶೆಟ್ಟಿ, ಚರಂಡಿ ಸ್ವಚ್ಛಗೊಳಿಸುವಂತೆ ತಿಳಿಸಿದರೂ ಕಾರ್ಮಿಕರು ನೀರ ಚರಂಡಿಯ ಮ್ಯಾನ್‌ಹೋಲ್‌ ಒಳಗೆ ಇಳಿಯಲು ಒಪ್ಪಲಿಲ್ಲ. ಕೂಡಲೆ ಕಾರ್ಯ ಪ್ರವೃತ್ತರಾದ ಮನೋಹರ ಶೆಟ್ಟಿಮನೆಯಿಂದ ಬೇರೆ ದಿರಿಸು ತರಿಸಿ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಕೊರೋನಾಕ್ಕೆ 10ನೇ ಬಲಿ, 45 ಡಿಸ್ಚಾರ್ಜ್

ಮನೋಹರ್‌ ಶೆಟ್ಟಿಇಳಿದ ಬಳಿಕ ಕಾರ್ಮಿಕರು ಕೂಡ ಇಳಿಯಲು ಮನಸ್ಸು ಮಾಡಿದ್ದಾರೆ. ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮನೋಹರ ಶೆಟ್ಟಿ, ಚರಂಡಿ ಬ್ಲಾಕ್‌ ಆಗಿದ್ದರಿಂದ ಜೆಟ್‌ ಹೊಡೆಯಬೇಕಿತ್ತು. ಈ ಕಾರ್ಯ ಮಾಡಲು ಕಾರ್ಮಿಕರು ಒಪ್ಪಲಿಲ್ಲ. ಹಾಗಾಗಿ ನಾನೇ ಇಳಿದು ಅರ್ಧ ಪಾಲು ಕ್ಲೀನ್‌ ಮಾಡಿದೆ ಎಂದಿ​ದ್ದಾ​ರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!