ಅಂಕೋಲಾದಲ್ಲಿ ನಡೆದ 13ನೇ ರಾಜ್ಯ ನೋಟರಿಗಳ ಸಮ್ಮೇಳನ

By Suvarna NewsFirst Published Dec 10, 2022, 8:48 PM IST
Highlights

ಕರ್ನಾಟಕ ರಾಜ್ಯ ನೋಟರಿಗಳ ಸಂಘದ 13ನೇ ರಾಜ್ಯ ನೋಟರಿಗಳ ಸಮ್ಮೇಳನ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶೆಟಗೇರಿಯಲ್ಲಿ ನಡೆಯಿತು.   ಕಾನೂನು ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ  ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್

ಉತ್ತರ ಕನ್ನಡ (ಡಿ.10): ಕರ್ನಾಟಕ ರಾಜ್ಯ ನೋಟರಿಗಳ ಸಂಘದ 13ನೇ ರಾಜ್ಯ ನೋಟರಿಗಳ ಸಮ್ಮೇಳನ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶೆಟಗೇರಿಯಲ್ಲಿ ನಡೆಯಿತು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾನೂನು ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ, ನೋಟರಿ ಗೌರವದ ಹುದ್ದೆಯಾಗಿದ್ದು, ಅದನ್ನು ಕಾಪಾಡಬೇಕು.‌ ಪ್ರಾಮಾಣೀಕರಿಸಲು ನಿಂತರೆ ಕೋರ್ಟ್ ಮಾತ್ರವಲ್ಲದೇ, ರಾಜ್ಯವೇ ಹೌದು ಅನ್ನಬೇಕು. ಕೆಲವು ನೋಟರಿಗಳು ವಕೀಲ ವೃತ್ತಿಯನ್ನು ಮರೆತಿದ್ದಾರೆ. ನೀವು ಪ್ರಮುಖವಾಗಿ ವಕೀಲರು. ನೋಟರಿ ಫುಲ್ ಟೈಮ್ ಪ್ರೊಫೆಶನ್ ಅಲ್ಲ. ಹಲವು ಪ್ರಕರಣಗಳನ್ನು ಇತ್ಯರ್ಥ ಮಾಡಲು ವಕೀಲರು ಕೆಲಸ ಮಾಡಬೇಕು. ದಾಖಲೆಗಳು ಸರಿಯಾಗಿಲ್ಲದಿದ್ದಲ್ಲಿ ನೀವು ರೆಫ್ಯೂಸ್ ಮಾಡಬೇಕು. ಕೆಲವರು ಮಾಡುವ ತಪ್ಪಿನಿಂದಾಗಿ ಈ ಪ್ರೊಫೆಶನ್ ಕೊಂಚ ಮಟ್ಟಿಗೆ ಗೌರವ ಕಳೆದುಕೊಳ್ಳುತ್ತಿದೆ. ಅದನ್ನು ಸರಿಪಡಿಸಬೇಕು. ರಾಜ್ಯದಲ್ಲಿ ನ್ಯಾಯಾಂಗಕ್ಕೆ ಹಾಗೂ ವಕೀಲರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಲಾಗಿದೆ. ಕೋರ್ಟ್ ಮೇಲಿರುವ ಲೋಡ್‌ಗಳನ್ನು ಕಡಿಮೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.‌ 

ಬಳಿಕ ಮಾತನಾಡಿದ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನೋಟರಿ ವ್ಯವಸ್ಥೆಯ ದುರ್ಲಾಭ ಪಡೆಯಲು ಹಲವರು ಕಾಯ್ತಿರ್ತಾರೆ. ಇದು ಬಹಳಷ್ಟು ಗೌರವಯುತ, ಜವಾಬ್ದಾರಿಯು ಸ್ಥಾನ. ನೋಟರಿಗಳು ಸೀಲು, ಸಹಿಗೆ ಮಾತ್ರ ಸೀಮಿತವಾಗದೆ ಸತ್ಯಾಸತ್ಯತೆಗಳಿಗೆ ಹಾಗೂ ನ್ಯಾಯ ಒದಗಿಸುವಲ್ಲೂ ಸಾಕಷ್ಟು ಗಮನ ಹರಿಸಬೇಕು. ಬೇಡದಿರುವ ಕಾಯ್ದೆಗಳನ್ನು ಪ್ರಸ್ತುತ ಸ್ಥಿತಿಗೆ ಬದಲಾಯಿಸುವ ಬಗ್ಗೆ ಚರ್ಚೆಯಾಗಬೇಕಿದೆ.

ಕೇಂದ್ರದ ನಡೆಗೆ ಮತ್ತೆ ಸುಪ್ರೀಂಕೋರ್ಟ್ ಕಿಡಿ: ಜಡ್ಜ್‌ಗಳ ನೇಮಕ ವಿಳಂಬಕ್ಕೆ ಆಕ್ರೋಶ

ಎಲ್ಲದಕ್ಕೂ ಶಾಸಕಾಂಗದವರೇ ಕಾರಣವೆಂದು ತೋರದಂತೆ ನೋಡಿಕೊಳ್ಳಬೇಕು. ಅಳಿಲು ಸೇವೆಯನ್ನು ಕೂಡಾ ರಾಷ್ಟ್ರ ಸೇವೆಗೆ ಮುಡಿಪಾಗಿಡುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ನಂತರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಜನರು ನೀಡುವ ದಾಖಲೆಗಳು ಸುಳ್ಳಾಗದಂತೆ ನೋಡುವುದು ನೋಟರಿಗಳ ಜವಾಬ್ದಾರಿ. ಸಣ್ಣ ದಾಖಲೆಗಳ ತಪ್ಪು ದೊಡ್ಡ ತಪ್ಪು ಜಡ್ಜ‌ಮೆಂಟ್‌ಗೂ ಕಾರಣವಾಗುತ್ತದೆ.‌ ಎಲ್ಲೂ ಚ್ಯುತಿ ಬರದಂತೆ ಗೌರವದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.

Chikkamagaluru: ದತ್ತ ಜಯಂತಿಯಲ್ಲಿ ಕಾನೂನು ಮರೆತ ಜಿಲ್ಲಾಡಳಿತ: ಭೋಜೇಗೌಡ

ಕಾರ್ಯಕ್ರಮದಲ್ಲಿ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್, ಹಿರಿಯ ವಕೀಲ ಪದ್ಮಪ್ರಸಾದ ಹೆಗಡೆ, ಅಖಿಲ ಭಾರತ ನೋಟರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆಸಿಫ್ ಅಲಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಬಂಟ್, ರಾಜ್ಯ ಘಟಕದ ಅಧ್ಯಕ್ಷ ಕೋಟೇಶ್ವರ ರಾವ್, ಪ್ರಮುಖರಾದ ರಂಗರಾಮು, ಇ.ಎಂ.ಪುಟ್ಟಸ್ವಾಮಿ ಭಾಗವಹಿಸಿದ್ದರು.

click me!