ಇನ್ಫೋಸಿಸ್ ಆರಂಭಕ್ಕೆ ಹುಬ್ಬಳ್ಳಿ ಜನರು ನಿರಂತರ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ ಇನ್ನು ಫಲ ನೀಡಿಲ್ಲ ಇದೀಗ ನೂತನ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದು, ಸ್ಟಾರ್ಟ್ ಇನ್ಫೊಸಿಸ್ ತಂಡದಿಂದ ಮುಖ್ಯಮಂತ್ರಿಯವರಿಗೆ 10,000 ಪತ್ರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಹುಬ್ಬಳ್ಳಿ: ಅಂದುಕೊಂಡಂತೆ ಆಗಿದ್ದರೆ ಎಂಟು ವರ್ಷದ ಹಿಂದೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಕಾರ್ಯಾರಂಭ ಮಾಡಬೇಕಿತ್ತು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸುಸಜ್ಜಿತವಾದ, ಬೃಹದಾಕಾರದ ಇನ್ಫೋಸಿಸ್ ಕ್ಯಾಂಪಸ್ ಈಗ ಧೂಳು ತಿನ್ನುತ್ತಿದೆ. ಇನ್ಫೋಸಿಸ್ ಆರಂಭಕ್ಕೆ ಹುಬ್ಬಳ್ಳಿ ಜನರು ನಿರಂತರ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ ಇನ್ನು ಫಲ ನೀಡಿಲ್ಲ ಇದೀಗ ನೂತನ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದು, ಸ್ಟಾರ್ಟ್ ಇನ್ಫೊಸಿಸ್ ತಂಡದಿಂದ ಮುಖ್ಯಮಂತ್ರಿಯವರಿಗೆ 10,000 ಪತ್ರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಕೆಎಲ್‌ಇ ಸಂಸ್ಥೆಯ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ನಂತರ ಬಿ.ಟಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳು ಹಾಗೂ ಬೋಧಕರ ಸಭೆಯಲ್ಲಿ ಇನ್ಫೊಸಿಸ್ ಕ್ಯಾಂಪಸ್ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿದ್ಯಾರ್ಥಿಗಳು ಬರೆದ 500ಕ್ಕೂ ಹೆಚ್ಚು ಮನವಿ ಪತ್ರಗಳನ್ನು ಸಂಗ್ರಹಿಸಲಾಯಿತು.
ಪ್ರಧಾನಿ ಮೋದಿ ಒಬ್ಬ ಮಹಾನ್ ನಾಯಕ: ಸುಧಾಮೂರ್ತಿ ಶ್ಲಾಘನೆ
ಇನ್ನೂ ಮುಂದಿನ 15 ದಿನಗಳಲ್ಲಿ ಅವಳಿ ನಗರದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. change.org/startinfyhubli ನಲ್ಲಿ ಈಗಾಗಲೇ 5,500ಕ್ಕಿಂತಲೂ ಹೆಚ್ಚು ಜನ ಸಹಿ ಮಾಡಿ ಅಭಿಯಾನ ಬೆಂಬಲಿಸಿದ್ದಾರೆ. ಜೊತೆಗೆ 10,000 ಜನರು ಸಹಿ ಹಾಕಿದ ಪೋಸ್ಟ್ ಕಾರ್ಡಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿ ಅವರ ವಿಧಾನಸೌಧದ ಕಚೇರಿಗೆ ಕಳಿಸಲಾಗುವುದು ಎಂದು ಅಭಿಯಾನದ ನೇತೃತ್ವ ವಹಿಸಿರುವ ಸಂತೋಷ ನರಗುಂದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆರಂಭಕ್ಕೆ ಒತ್ತಾಯಿಸಿ ಒಂದಿಲ್ಲೊಂದು ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಯುವ ಜನತೆಗೆ ಉದ್ಯೋಗಾವಕಾಶಗಳು ತೆಗೆದುಕೊಳ್ಳಲಿವೆ ಎಂಬ ಭರವಸೆಯಿಂದ ಇನ್ಫೋಸಿಸ್ ಕಾರ್ಯಾರಂಭಕ್ಕೆ ಒತ್ತಡ ಹೆಚ್ಚುತ್ತಿದ್ದು, ಯುವ ಸಮುದಾಯದ ಕನಸನ್ನು ಸಾಕಾರಗೊಳಿಸುವ ಮೂಲಕ ಅವಳಿನಗರದ ಅಭಿವೃದ್ಧಿಗೆ ಒತ್ತನ್ನು ನೀಡಬೇಕಿದೆ.
ಬೆಂಗಳೂರು ತರ ನಮ್ಮ ಧಾರವಾಡವನ್ನೂ ಮಾಡಿ: ಸಿಎಂಗೆ ಮನವಿ ಮಾಡಿದ ಸುಧಾಮೂರ್ತಿ!