ಪತಿಗೆ ಜೀವಭಯ ಎಂದು ಶಾಸಕನ ಪತ್ನಿ, ಪುತ್ರಿ ಕಣ್ಣೀರು: ರಮ್ಯಾ ಟ್ವೀಟ್

Published : May 18, 2018, 11:03 AM IST
ಪತಿಗೆ ಜೀವಭಯ ಎಂದು ಶಾಸಕನ ಪತ್ನಿ, ಪುತ್ರಿ ಕಣ್ಣೀರು: ರಮ್ಯಾ ಟ್ವೀಟ್

ಸಾರಾಂಶ

ತಮ್ಮ ಪತಿಗೆ ಜೀವ ಭಯವಿದೆ ಎಂದು ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರ ಪತ್ನಿ ಹಾಗೂ ಪುತ್ರಿ ತಮ್ಮ ಬಳಿ ಕಣ್ಣೀರಿಟ್ಟು ಆತಂಕ ತೋಡಿಕೊಂಡಿದ್ದಾರೆ ಎಂದು ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ತಮ್ಮ ಪತಿಗೆ ಜೀವ ಭಯವಿದೆ ಎಂದು ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರ ಪತ್ನಿ ಹಾಗೂ ಪುತ್ರಿ ತಮ್ಮ ಬಳಿ ಕಣ್ಣೀರಿಟ್ಟು ಆತಂಕ ತೋಡಿಕೊಂಡಿದ್ದಾರೆ ಎಂದು ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.

 

 

ಬಿಜೆಪಿಯು ಬಹುಮತ ಸಾಬೀತುಪಡಿಸಲು ಕಾಂಗ್ರೆಸ್ ಶಾಸಕರನ್ನು ಹೈಜಾಕ್ ಮಾಡಲು ಯತ್ನಿಸುತ್ತಿದೆ. ಈ ಹಂತದಲ್ಲಿ ಕಾಂಗ್ರೆಸ್‌ನ ಆನಂದ್ ಸಿಂಗ್ ಸೇರಿದಂತೆ ಕೆಲ ಶಾಸಕರು ಯಾರ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗಿದ್ದಾರೆ. ಇಂತಹ ವೇಳೆಯಲ್ಲಿ ರಮ್ಯಾ ಕಾಂಗ್ರೆಸ್ ಶಾಸಕರಿಗೆ ಜೀವ ಭಯ ಇದೆ ಎಂದು ಮಾಡಿರುವ ಟ್ವೀಟ್ ಕುತೂಹಲ ಮೂಡಿಸಿದೆ.

ಶಾಸಕರ ಖರೀದಿ ಯತ್ನ: ರಮ್ಯಾ ವಾಗ್ದಾಳಿ

ತಮ್ಮ ಟ್ವೀಟ್‌ನಲ್ಲಿ ರಮ್ಯಾ, ಈಗ ತಾನೇ ಕರ್ನಾಟಕದ ಶಾಸಕರೊಬ್ಬರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದೆ. ಶಾಸಕರ ಪತ್ನಿ ಹಾಗೂ ಪುತ್ರಿ ಶಾಸಕರ ಜೀವದ ಬಗ್ಗೆ ಕಣ್ಣೀರಿಡುತ್ತಿದ್ದಾರೆ. ಶಾಸಕರ ಪುತ್ರಿ ಅಳುತ್ತಾ ತಮ್ಮ ತಂದೆಯ ಜೀವದ ಬಗ್ಗೆ ಆತಂಕ ವ್ಯಕ್ತಪಡಿಸುವ ಧ್ವನಿ ಕೇಳಿ ಹೃದಯ ಕಲಕಿದಂತಾಯಿತು. ರಾಜಕಾರಣ ಈ ಹಂತಕ್ಕೆ ತಲುಪಿದರೆ ಎಲ್ಲರೂ ಅಸಹಾಯಕರಾಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ