ಕೈ-ತೆನೆ ಮೈತ್ರಿ ಒಪ್ಪದವರು ಬಿಜೆಪಿಯೊಂದಿಗಿದ್ದಾರಾ?

First Published May 18, 2018, 12:41 PM IST
Highlights

ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದ್ದ ಕಾಂಗ್ರೆಸ್-ಜೆಡಿಎಸ್‌ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಎಲ್ಲ ಗೊಂದಲಕ್ಕೂ ಬಹುಮತ ಸಾಬೀತು ಪಡಿಸುವುದೊಂದೇ ಪರಿಹಾರವೆಂಬುದನ್ನು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್, ಮೇ 19ರ ಸಂಜೆಯೊಳಗೆ 4 ಗಂಟೆಗೆ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಆದೇಶಿಸಿದೆ.

ಬೆಂಗಳೂರು: ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದ್ದ ಕಾಂಗ್ರೆಸ್-ಜೆಡಿಎಸ್‌ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಎಲ್ಲ ಗೊಂದಲಕ್ಕೂ ಬಹುಮತ ಸಾಬೀತು ಪಡಿಸುವುದೊಂದೇ ಪರಿಹಾರವೆಂಬುದನ್ನು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್, ಮೇ 19ರ ಸಂಜೆಯೊಳಗೆ 4 ಗಂಟೆಗೆ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಆದೇಶಿಸಿದೆ.

ಚುನಾವಣಾ ಮೊದಲು ಹೇಳುತ್ತಿದ್ದಂತೆಯೇ ಯಡ್ಯೂರಪ್ಪ ಮೇ 17ರಂದು ರಾಜಭವನದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಬಹುಮತ ಸಾಬೀತುಪಡಿಸುವ ವಿಶ್ವಾಸವೂ ಹೊಸ ಮುಖ್ಯಮಂತ್ರಿ ಇದ್ದು, ಸದನದಲ್ಲಿ ಹೇಗೆ ಗೆಲ್ಲುತ್ತಾರೆ ಎಂಬುವುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆ.

'ನಾಳೆ ಬಿಎಸ್‌ವೈ ನೇತೃತ್ವದಲ್ಲಿ ಬಹುಮತ ಸಾಬೀತು ಮಾಡ್ತೇವೆ. ಕಾಂಗ್ರೆಸ್ - ಜೆಡಿಎಸ್ ಅಪವಿತ್ರ ಮೈತ್ರಿ ಒಪ್ಪದವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ವಿಧಾನಸೌಧದಲ್ಲಿಯೂ ಬಹುಮತ ಸಾಬೀತು ಮಾಡುತ್ತೇವೆ,' ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!