
ಮೈಸೂರು (ಮೇ. 18): ದೇಶದಲ್ಲಿ ಪ್ರಜಾಪ್ರಭುತ್ವ ತುಂಬಾ ವಿಷಮ ಪರಿಸ್ಥಿತಿಯಲ್ಲಿದೆ. ಸಂವಿಧಾನ ರಕ್ಷಣೆ ಮಾಡಬೇಕಾದ ರಾಜಕೀಯ ಪಕ್ಷಗಳು ಅದನ್ನು ಹಾಳು ಮಾಡುತ್ತಿವೆ. ಇದಕ್ಕೆ ರಾಜ್ಯಪಾಲರು ಹಾಗೂ ಪ್ರಧಾನಿ ಕುಮ್ಮಕ್ಕಿದೆ ಎಂದು ಪ್ರೋ. ಭಗವಾನ್ ಹೇಳಿದ್ದಾರೆ.
ರಾಜ್ಯಪಾಲರು ಬಿಜೆಪಿಗೆ ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನಬಾಹಿರ. ರಾಜ್ಯಪಾಲರ ವಾಸ ಸ್ಥಳವನ್ನು ರಾಜಭವನ ಎಂದು ಕರೆಯುವುದೇ ತಪ್ಪು. ಅವರು ರಾಜ್ಯ ಪಾಲಕರು, ರಾಜ ಅಲ್ಲ. ಎಲ್ಲೆಲ್ಲಿ ರಾಜಭವನ ಇದೆಯೋ ಅದನ್ನೆಲ್ಲ ರಾಜ್ಯಭವನ ಎಂದು ಬದಲಿಸಬೇಕು ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಪ್ರಜಾಪ್ರಭುತ್ವ ತೊಂದರೆಯಲ್ಲಿದ್ದು, ಅದನ್ನ ಉಳಿಸಲು ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಹೋರಾಡಬೇಕು. ರಾಜ್ಯಪಾಲರ ತೀರ್ಮಾನದ ಹಿಂದೆ ಮೋದಿ ಹಾಗೂ ಅಮಿತ್ ಶಾ ಕೈವಾಡ ಇದೆ. ರಾಜ್ಯಪಾಲರು ಕೂಡ ಅವರದ್ದೇ ಪಕ್ಷದವರಾಗಿದ್ದು, ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರೋ. ಕೆ.ಎಸ್.ಭಗವಾನ್ ಆರೋಪ ಮಾಡಿದ್ದಾರೆ.