Western Railway Recruitment 2022; ಬರೋಬ್ಬರಿ 3612 ಹುದ್ದೆಗಳ ನೇಮಕಾತಿ

By Suvarna News  |  First Published Jun 17, 2022, 7:13 PM IST

ಪಶ್ಚಿಮ ರೈಲ್ವೇಸ್‌ನ ನೇಮಕಾತಿ ವಿಭಾಗವು ಒಟ್ಟು  3612  ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.  ಅರ್ಜಿ ಸಲ್ಲಿಸಲು ಜೂನ್‌ 27 ಕೊನೆಯ ದಿನಾಂಕವಾಗಿದೆ.


ಬೆಂಗಳೂರು (ಜೂನ್ 17): ರೈಲ್ವೆ ಇಲಾಖೆ 2022ನೇ ಸಾಲಿನ ನೇಮಕಾತಿಯನ್ನು ಮುಂದುವರಿಸಿದ್ದು, ಮತ್ತೊಮ್ಮೆ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಕುರಿತು ಅಧಿಸೂಚನೆ ಹೊರಡಿಸಿದೆ. ವೆಸ್ಟರ್ನ್‌ ರೈಲ್ವೆ ನೇಮಕಾತಿ ವಿಭಾಗವು ಈ ಕುರಿತು ಅಧಿಸೂಚನೆ ಹೊರಡಿಸಿ ಮಾಹಿತಿಯನ್ನೂ ನೀಡಿದೆ. ಅರ್ಜಿ ಸಲ್ಲಿಸಲು ಜೂನ್‌ 27 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಪೂಣ ವಿವರಗಳೊಳಗೊಂಡ ಅರ್ಜಿಯನ್ನು ಮಾತ್ರವೇ ಕಳುಹಿಸಬೇಕಿದೆ ಎಂದು ವೆಸ್ಟರ್ನ ರೈಲ್ವೇಸ್‌ ಸೂಚನೆ ನೀಡಿದೆ.   ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ rrchubli.in ಗೆ ಭೇಟಿ ನೀಡಲು ಕೋರಲಾಗಿದೆ.

ಹುದ್ದೆಗಳ ವಿವರ ಹೀಗಿದೆ: ಪಶ್ಚಿಮ ರೈಲ್ವೇಸ್‌ನ ನೇಮಕಾತಿ ವಿಭಾಗವು ಮುಂಬೈ ಸಹಿತ ಹಲವೆಡೆ ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅಧಿಸೂಚನೆ ಪ್ರಕಾರ ಇಲಾಖೆಯಲ್ಲಿ 3612 ಹುದ್ದೆಗಳು ಖಾಲಿ ಇದ್ದು, ಇದನ್ನು ಭರ್ತಿಗೊಳಿಸುವುದಕ್ಕಾಗಿ ಅಭ್ಯರ್ಥಿಗಳ ಕಡೆಯಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಫಿಟ್ಟರ್‌ ಹುದ್ದೆ(941), ಇಲೆಕ್ಟ್ರೀಷಿಯನ್‌ ಹುದ್ದೆ(639), ವೆಲ್ಡರ್‌(378), ಪಿಎಎಸ್‌ಎಸ್‌ಎ(252), ಕಾರ್ಪೆಂಟರ್‌(221),ಪೇಂಟರ್‌(213), ಡೀಸೆಲ್‌ ಮೆಕ್ಯಾನಿಕ್‌(209),ಪೈಪ್‌ ಫಿಟ್ಟರ್‌(186), ಇಲೆಕ್ಟ್ರಾನಿಕ್‌ ಮೆಕ್ಯಾನಿಕ್‌(112), ಎಸಿ ಮೆಕ್ಯಾನಿಕ್‌(112), ಪ್ಲಂಬರ್‌(126),ವೈಯರ್‌ಮ್ಯಾನ್‌(14),ಡ್ರಾಫ್‌್ಟಮನ್‌(ಸಿವಿಲ್‌-88), ಸ್ಟೆನೋಗ್ರಾಫರ್‌(08),ಮೆಕ್ಯಾನಿಸ್ಟ(26), ಟರ್ನರ್‌(37) ಸಹಿತ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಹಾಲಕು ಅವಕಾಶವಿದೆಯಷ್ಟೆ. ಹೆಚ್ಚಿನ ವಿವರಗಳು ಕೆಳಗಡೆ ನೀಡಲಾಗಿದೆ ಎಂದು ವೆಸ್ಟರ್ನ್‌ ರೈಲ್ವೇಸ್‌ ತಿಳಿಸಿದೆ.

Latest Videos

undefined

ASSAM RIFLES RECRUITMENT 2022; ಒಟ್ಟು 1380 ಹುದ್ದೆಗಳಿಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ತೇರ್ಗಡೆಯಾಗಿರಲೇಬೇಕು. ಜೊತೆಗೆ ಐಟಿಐ ವಿದ್ಯಾರ್ಹತೆ ಪ್ರಮಾಣಪತ್ರವನ್ನು ಎನ್‌ಸಿವಿಟಿ/ಎಸ್‌ಸಿವಿಟಿಯಿಂದ ಪಡೆದಿರಬೇಕು. ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಡೆದವರು, ಸದರಿ ಟ್ರೇಡ್‌ಗೆ ಅರ್ಜಿ ಸಲ್ಲಿಸಬೇಕಿದೆ ಎಂದು ವೆಸ್ಟರ್ನ್‌ ರೈಲ್ವೇಸ್‌ ಮಾಹಿತಿ ನೀಡಿದೆ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆಗೆ ಕನಿಷ್ಠ 15 ವರ್ಷವಾದರೂ ಆಗಿರಬೇಕು ಹಾಗೂ ಗರಿಷ್ಠವೆಂದರೆ 24 ವರ್ಷವನ್ನು ಮೀರಿರಬಾರದು. ಏತನ್ಮಧ್ಯೆ ಕೇಂದ್ರ ಸರ್ಕಾರದ ಅಪ್ರೆಂಟೀಸ್‌ ನಿಯಮಗಳ ಪ್ರಕಾರ ಜಾತಿವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದ್ದು, ಇದರ ಪ್ರಕಾರ ಸಡಿಲಿಕೆಗಳನ್ನೂ ಅಗತ್ಯ ಬಿದ್ದಲ್ಲಿ ನೀಡಲಾಗುವುದು ಎಂದು ರೈಲ್ವೇಸ್‌ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳ ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐನಲ್ಲಿ ಗಳಿಸಿದ ಅಂಕಗಳು ಹಾಗೂ ಮೆರಿಟ್‌ ಆಧಾರದ ಮೇಲೆ ಶಾರ್ಚ್‌ ಲಿಸ್ಟ್‌ ಮಾಡಿ ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ವೆಸ್ಟರ್ನ್‌ ರೈಲ್ವೇಸ್‌ ಮಾಹಿತಿ ನೀಡಿದೆ.

ವೇತನ ಶ್ರೇಣಿ : ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿರ್ದಿಷ್ಠ ವೇತನ ಪ್ಯಾಕೇಜನ್ನು ವೆಸ್ಟರ್ನ್‌ ರೈಲ್ವೇಸ್‌ ಫಿಕ್ಸ್‌ ಮಾಡಿದೆ. ಇದರಂತೆ, ಆಯ್ಕೆಯಾಗಿ ಕರ್ತವ್ಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾಸಿಕವಾಗಿ 12 ಸಾವಿರ ರುಪಾಯಿ ವೇತನವನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ರೈಲ್ವೇಸ್‌ ತಿಳಿಸಿದೆ.

VPN Banned Govt Employees; ಸರಕಾರಿ ನೌಕರರು ಇನ್ಮುಂದೆ ವಿಪಿಎನ್‌ ಬಳಸುವಂತಿಲ್ಲ

ಅರ್ಜಿ ಶುಲ್ಕದ ವಿವರ: ರೈಲ್ವೇಸ್‌ ನೇಮಕಾತಿ ಅಧಿಸೂಚನೆಯಲ್ಲಿ ಹೊರಡಿಸಿದ ಪ್ರಕಟಣೆ ಅನ್ವಯ ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರುಪಾಯಿ ಎಂದು ನಿಗದಿಪಡಿಸಲಾಗಿದೆ. ಆದರೆ ಇತರೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಜೂನ್‌ 27ರಂದು ಕೊನೆಯ ದಿನವಾಗಿದೆ. ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಕೆ ಹೀಗೆ ಮಾಡಿ: ಪಶ್ಚಿಮ ರೈಲ್ವೇಸ್‌ ನೇಮಕಾತಿ ವಿಭಾಗದ ಅಪ್ಲಿಕೇಶನ್‌ ವೆಬ್‌ ವಿಳಾಸ ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ rrchubli.in ಗೆ ಭೇಟಿ ನೀಡಲು ಕೋರಲಾಗಿದೆ.ಗೆ ಲಾಗ್‌ಇನ್‌ ಮಾಡಿಕೊಳ್ಳಬೇಕು. ಓಪನ್‌ ಆದ ಪೇಜ್‌ಗೆ ಮೊದಲು ಅಭ್ಯರ್ಥಿಗಳು ತಮ್ಮ ಹೆಸರು ರಿಜಿಸ್ಪ್ರೇಷನ್‌ ಮಾಡಿಕೊಳ್ಳಬೇಕಿದೆ. ನಂತರ ಸದರಿ ಪೇಜ್‌ನಲ್ಲಿ ಸಂಪೂರ್ಣ ವಿವರಗಳನ್ನು ಭರ್ತಿ ಮಾಡುವ ಮೂಲಕ ಅಪ್ಲಿಕೇಶನ್‌ ಪೂರ್ಣಗೊಳಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿಯನ್ನು ಜೂನ್‌ 27ರ ಸಂಜೆ 5.30ರ ಒಳಗೆ ಸಲ್ಲಿಸಬೇಕು ಎಂದು ವೆಸ್ಟರ್ನ್‌ ರೈಲ್ವೇಸ್‌ ಮಾಹಿತಿ ನೀಡಿದೆ.

click me!