Assam Rifles Recruitment 2022; ಒಟ್ಟು 1380 ಹುದ್ದೆಗಳಿಗೆ ನೇಮಕಾತಿ

By Suvarna NewsFirst Published Jun 17, 2022, 6:33 PM IST
Highlights

ಅಸ್ಸಾಂ ರೈಫಲ್ಸ್‌ ಭಾರತೀಯ ಸೇನೆಯ ಅತ್ಯಂತ ಹಳೇಯ ಶಾಖೆಯಾಗಿದ್ದು, ಇಲ್ಲಿ ಖಾಲಿ ಇರುವ 1380 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಲು ಜುಲೈ 20ರಂದು ಕೊನೆಯ ದಿನವಾಗಿದೆ.

ನವದೆಹಲಿ (ಜೂನ್.17): ಭಾರತೀಯ ಸೇನೆಯಲ್ಲಿ ಪ್ರಸಕ್ತ ವರ್ಷದ ನೇಮಕಾತಿ ಪ್ರಕ್ರಿಯೆ ಮುಂದುವರಿದಿದೆ. ಅಸ್ಸಾಂ ರೈಫಲ್ಸ್‌ ಭಾರತೀಯ ಸೇನೆಯ ಅತ್ಯಂತ ಹಳೇಯ ಶಾಖೆಯಾಗಿದ್ದು, ಇಲ್ಲಿ ಖಾಲಿ ಇರುವ 1380 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಭಾರತೀಯ ಸೇನಾ ನೇಮಕಾತಿ ವಿಭಾಗ ಸೂಚನೆ ನೀಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಜುಲೈ 20ರಂದು ಕೊನೆಯ ದಿನವಾಗಿದೆ. ಹೊರಡಿಸಲಾಗಿರುವ ನೇಮಕಾತಿ ಅಧಿಸೂಚನೆಯಲ್ಲಿ ಯಾವ ಸ್ಥಳ, ನೇಮಕಾತಿ ವಿವರಗಳು, ವೇತನ, ಅರ್ಹತೆಗಳು ಇತ್ಯಾದಿ ವಿಚಾರಗಳನ್ನು ವಿಸ್ತಾರವಾಗಿ ನೀಡಲಾಗಿದೆ. ಅಭ್ಯರ್ಥಿಗಳು ಪರಿಶೀಲಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ https://www.assamrifles.gov.in/ಗೆ ಲಾಗಿನ್‌ ಮಾಡಿಕೊಳ್ಳಬಹುದು.

ಹುದ್ದೆಗಳ ವಿವರ ಹೀಗಿದೆ: ಸೇನೆಯಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವವರು ಹಾಗೂ ನಿರುದ್ಯೋಗಿಗಳಿಗಾಗಿ ಭಾರತೀಯ ಸೇನೆ ನೇಮಕಾತಿ ಮಾಹಿತಿ ನೀಡಿದೆ. ಅಸ್ಸಾಂ ರೈಫಲ್ಸ್‌ ವಿಭಾಗದಲ್ಲಿ ಅಪ್ರೆಂಟಿಸ್‌ ಹಾಗೂ ಟ್ರೇಡ್‌್ಸಮ್ಯಾನ್‌ (ಕರ್ನಾಟಕದ ಆಯಾ ಹುದ್ದೆಗಳ ವಿವರ ಅಧಿಸೂಚನೆಯಲ್ಲಿ) ನೀಡಲಾಗಿದೆ) ವಿಭಾಗದಲ್ಲಿ 1,380 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಶೀಘ್ರವೇ ಮುಂದಾಗಬೇಕಿದೆ ಎಂದು ಸೇನಾ ನೇಮಕಾತಿ ವಿಭಾಗ ಹೇಳಿದೆ.

VPN BANNED GOVT EMPLOYEES; ಸರಕಾರಿ ನೌಕರರು ಇನ್ಮುಂದೆ ವಿಪಿಎನ್‌ ಬಳಸುವಂತಿಲ್ಲ

ಶೈಕ್ಷಣಿಕ ವಿದ್ಯಾರ್ಹತೆ: ಅಸ್ಸಾಂ ರೈಫಲ್ಸ್‌ನ ನೇಮಕಾತಿ ಅಧಿಸೂಚನೆಯಲ್ಲಿ ಅಭ್ಯರ್ಥಿಗಳಿಗಾಗಿ ವಿದ್ಯಾರ್ಹತೆಯನ್ನೂ ನಮೂದಿಸಲಾಗಿದೆ. ಅಧಿಸೂಚನೆ ಅನ್ವಯ ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್‌ಸಿ ಆಗಿರಲೇಬೇಕು. ಪಿಯುಸಿ, ಜೊತೆಗೆ ಡಿಪ್ಲೊಮಾ ವಿದ್ಯಾರ್ಹತೆಯು ಇರಲೇಬೇಕಿದೆ ಎಂದು ನೇಮಕಾತಿ ವಿಭಾಗವು ತಿಳಿಸಿದೆ. ಹೆಚ್ಚಿನ ವಿವರಗಳನ್ನು ಅಸ್ಸಾಂ ರೈಫಲ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಅಭ್ಯರ್ಥಿಗಳ ಆಯ್ಕೆ ವಿಧಾನ: ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದ್ದು, ತೇರ್ಗಡೆಯಾದ ಬಳಿಕ ದೈಹಿಕ ಸಹಿಷ್ಣುತೆ ಪರೀಕ್ಷೆ ಹಾಗೂ ಅದರ ಬಳಿಕ ಭೌತಿಕ ಅಳತೆ ನಡೆಸಿ ನಿರ್ದಿಷ್ಠ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ ಎಂದು ನೇಮಕಾತಿ ವಿಭಾಗವು ತಿಳಿಸಿದೆ.

ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅಧಿಕೃತ ಸೇನಾ ನೇಮಕಾತಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ಸಮರ್ಪಕವಾದ ಮಾಹಿತಿಗಳನ್ನು ಭರ್ತಿ ಮಾಡಿಕೊಳ್ಳಬೇಕು. ಅರ್ಜಿ ಭರ್ತಿ ಮಾಡಿದ ಬಳಿಕ ಸೂಕ್ತ ದಾಖಲೆಗಳ ಜೊತೆ ಅರ್ಜಿಯನ್ನು ಸಲ್ಲಿಸಬೇಕು. ಇಲ್ಲಿಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮುಗಿಯಿತು.

Railway Recruitment 2022; ಈಶಾನ್ಯ ಗಡಿ ರೈಲ್ವೆಯಲ್ಲಿ 5636 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ಅಭ್ಯರ್ಥಿಯ ವಯಸ್ಸಿನ ವಿವರ: ಅಭ್ಯರ್ಥಿಯ ವಯಸ್ಸಿನ ವಿಚಾರದಲ್ಲಿ ಸೇನೆಯು ತುಸು ಬಿಗಿಯಾಗಿದೆ. ಸಾಮಾನ ವರ್ಗದ ಅರ್ಜಿದಾರನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠವೆಮದರೆ 23 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠವೆಂದರೆ 28 ವರ್ಷದೊಳಗಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿದ್ದು, ಗರಿಷ್ಠ 28 ವರ್ಷದೊಳಗಿರಬೇಕು ಎಂದು ಸೇನೆ ಹೇಳಿದೆ.

ಅಗತ್ಯ ದಾಖಲೆಗಳು ಏನೇನು?
ಅಭ್ಯರ್ಥಿಯು ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ವೇಳೆ ಅದಕ್ಕೆ ಬೇಕಾದ ಅಗತ್ಯ ದಾಖಲೆಗಳ ಕುರಿತು ತಿಳಿದಿರಬೇಕು. ಅಭ್ಯರ್ಥಿ ಅರ್ಜಿ ಜೊತೆಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಹಾಗೂ ಡಿಪ್ಲೊಮಾ ಅಂಕಪಟ್ಟಿ, ಆಧಾರ್‌ಕಾರ್ಡ್‌ ಪ್ರತಿ, ಜಾತಿ ಪ್ರಮಾಣ ಪತ್ರ(ಲಭ್ಯವಿದ್ದಲ್ಲಿ), ಇಡಬ್ಲ್ಯುಎಸ್‌,ಮೀಸಲಾತಿ ಸಹಿತ ಇನ್ನಿತರೇ ದಾಖಲೆಗಳು ಇದ್ದಲ್ಲಿ ಲಗತ್ತಿಸಬೇಕು.

click me!