ನಿರುದ್ಯೋಗಿಗಳಿಗೆ ಬಾಗಿಲು ಕ್ಲೋಸ್​ ಮಾಡಿದ TCS ಕಂಪೆನಿ: ಲವ್​ ಜಿಹಾದ್​ ಬೆನ್ನಲ್ಲೇ ಏನಿದು ಮತ್ತೊಂದು ಶಾಕ್​

Published : Jun 11, 2026, 05:00 PM IST
TCS

ಸಾರಾಂಶ

ಟಾಟಾ ಒಡೆತನದ ಟಿಸಿಎಸ್ ಕಂಪನಿಯು ಇನ್ನು ಮುಂದೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸುವ ಮೂಲಕ ನಿರುದ್ಯೋಗಿಗಳಿಗೆ ಆಘಾತ ನೀಡಿದೆ. ಕೃತಕ ಬುದ್ಧಿಮತ್ತೆ (AI) ಮೇಲೆ ಭಾರಿ ಹೂಡಿಕೆ ಮಾಡುತ್ತಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.

ಟಾಟಾ ಒಡೆತನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಕಂಪೆನಿ (TCS) ಕೆಲ ತಿಂಗಳ ಹಿಂದೆ ಲವ್​ ಜಿಹಾದ್​ನಿಂದ ಬಿರುಗಾಳಿ ಎಬ್ಬಿಸಿತ್ತು. ಇಲ್ಲಿದ್ದ ಒಬ್ಬ ಯುವತಿ, ಹಿಂದೂ ಉದ್ಯೋಗಿಗಳನ್ನು ಒತ್ತಾಯಪೂರ್ವಕವಾಗಿ ಲವ್​ ಜಿಹಾದ್​ ಮಾಡ್ತಿರೋದು, ಮತಾಂತರಕ್ಕೆ ಪ್ರೇರೇಪಿಸ್ತಿರುವ ಸುದ್ದಿಗಳು ಐಟಿ ವಲಯವನ್ನೇ ದಂಗು ಬಡಿಸಿದ್ದವು. ಇದರ ಕೇಸ್​ ಇನ್ನೂ ನಡೆಯುತ್ತಿದೆ. ಆದರೆ ಇದರ ಬೆನ್ನಲ್ಲೇ ಇದೀಗ ನಿರುದ್ಯೋಗಿಗಳಿಗೆ ಬಾಗಿಲು ಕ್ಲೋಸ್​ ಮಾಡಿ ಬಹುದೊಡ್ಡ ಶಾಕ್​ ಕೊಟ್ಟಿದೆ ಟಿಸಿಎಸ್​ ಕಂಪೆನಿ. ಅರ್ಥಾತ್​, ಇನ್ಮುಂದೆ ಯಾವುದೇ ಉದ್ಯೋಗಿಗಳನ್ನು ಅಪಾಯಿಂಟ್​ ಮಾಡಿಕೊಳ್ಳಲ್ಲ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ ಯುಗ

ಮುಂದಿನ ಮೂರು ವರ್ಷಗಳಲ್ಲಿ ಟಿಸಿಎಸ್ ಮಾನವ ಉದ್ಯೋಗಿಗಳಷ್ಟೇ ಸಂಖ್ಯೆಯ ಎಐ ಏಜೆಂಟ್‌ಗಳನ್ನು ಹೊಂದಿರುತ್ತದೆ ಎಂದು ಟಿಸಿಎಸ್‌ನ 31 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಚಂದ್ರಶೇಖರನ್, ಸಿಬ್ಬಂದಿಯನ್ನು ಕಡಿಮೆ ಮಾಡುವ ಯಾವುದೇ ಯೋಜನೆಯನ್ನು ಕಂಪೆನಿ ಹೊಂದಿಲ್ಲ, ಆದರೆ ನೇಮಕಾತಿಯನ್ನು ನಿಧಾನಗೊಳಿಸುತ್ತದೆ ಎಂದಿದ್ದಾರೆ. ಅವರು ನಿಧಾನಗೊಳಿಸುತ್ತದೆ ಎಂದಿದ್ದರೂ, ಇನ್ಮುಂದೆ ನೇಮಕಾತಿ ಡೌಟ್​ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದಕ್ಕೆ ಕಾರಣ, ಇದಾಗಲೇ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಕಂಪೆನಿ ಭಾರಿ ಹೂಡಿಕೆ ಮಾಡುತ್ತಿದೆ.

20 ಸಾವಿರ ಉದ್ಯೋಗಿಗಳ ಕಡಿತ

ಕಳೆದ ವರ್ಷ ಜುಲೈನಲ್ಲಿ, ಕಂಪೆನಿಯು 12,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿತು. ಅಂದಿನಿಂದ ಅದರ ಸಿಬ್ಬಂದಿಗಳ ಸಂಖ್ಯೆ 20,000 ಕ್ಕೂ ಹೆಚ್ಚು ಕಡಿಮೆಯಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಟಿಸಿಎಸ್‌ನ AI ಆದಾಯವು ಸ್ಥಿರವಾಗಿ ಬೆಳೆದಿದೆ, ಸಂಯುಕ್ತ ತ್ರೈಮಾಸಿಕ ಬೆಳವಣಿಗೆಯ ದರವು ಶೇಕಡಾ 22 ಕ್ಕಿಂತ ಹೆಚ್ಚಾಗಿದೆ ಎಂದಿರುವ ಚಂದ್ರಶೇಖರನ್, 2026 ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಅದರ ವಾರ್ಷಿಕ AI ಆದಾಯವು 2.5 ಬಿಲಿಯನ್ ಡಾಲರ್​ ತಲುಪಿದೆ ಎನ್ನುವ ಅಂಕಿ ಅಂಶಕೊಡುತ್ತಲೇ ಇಲ್ಲಿ ಕೆಲಸ ಮಾಡಬೇಕು ಎಂದು ಹಾತೊರೆಯುತ್ತಿರುವ ಅಸಂಖ್ಯ ಉದ್ಯೋಗಿಗಳಿಗೆ ಶಾಕ್​ ಕೊಟ್ಟಿದ್ದಾರೆ.

ತಂತ್ರಜ್ಞಾನ ಸೇವೆಗಳ ಉದ್ಯಮಕ್ಕೆ AI ಒಂದು ಪರಿವರ್ತನಾ ಶಕ್ತಿ ಎಂದು ವಿವರಿಸಿದ ಚಂದ್ರಶೇಖರನ್, "TCS ತನ್ನ ಭೌತಿಕ ಕೆಲಸಗಾರರಷ್ಟೇ AI ಏಜೆಂಟ್‌ಗಳು ಅಥವಾ AI ಕೆಲಸಗಾರರನ್ನು ಹೊಂದಿರುವ ದಿನ ದೂರವಿಲ್ಲ" ಎಂದು ಹೇಳಿದರು.

 

PREV
Read more Articles on
click me!

Recommended Stories

ಬ್ಯಾಂಕ್ ಆಫ್ ಬರೋಡಾದಿಂದ ಪದವೀಧರರಿಗೆ ಸುವರ್ಣಾವಕಾಶದ ಕರೆ, 5000 ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿಕ್ಷಣ ಏನೇ ಇರಲಿ, ನಮ್ಮ ಮೆಟ್ರೋದಲ್ಲಿ 500ಕ್ಕೂ ಅಧಿಕ ಉದ್ಯೋಗ: 2.06 ಲಕ್ಷ ಮಾಸಿಕ ವೇತನ