ಈ ಸಂಸ್ಥೆಯಲ್ಲಿ ಜಾಬ್ ಮಾಡ್ಬೇಕಾದ್ರೆ ನೀವು ಸಿವಿ ಅಲ್ಲ ನಿಮ್ಮ ವೀಡಿಯೋ ಕಳಿಸ್ಬೇಕು..!

By Anusha Kb  |  First Published Nov 17, 2023, 3:19 PM IST

ಅತಿಥ್ಯ ಹಾಗೂ ಹೊಟೇಲ್ ಉದ್ಯಮದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಹಿಲ್ಟನ್ ಗ್ರೂಪ್ಸ್ (Hilton Groups) ಈಗ ತನ್ನ ಸಂಸ್ಥೆಯಲ್ಲಿ ಉದ್ಯೋಗ ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಹೊಸದೊಂದು ಆಫರ್ ನೀಡಿದೆ.


ಸಿಡ್ನಿ: ಶಿಕ್ಷಣ ಮುಗಿಸಿ ಉದ್ಯೋಗದಕ್ಕಾಗಿ ಹುಡುಕಾಟದಲ್ಲಿರುವವರು ಸಂಸ್ಥೆಗಳನ್ನು ಸೆಳೆಯುವ ಒಂದು ಸುಂದರವಾದ, ಸಿವಿಯ ಅಥವಾ ಸ್ವ ವಿವರದ ಪ್ರತಿಗಾಗಿ ಇನ್ನಿಲ್ಲದ ಹರ ಸಾಹಸ ಮಾಡುತ್ತಾರೆ. ತಮ್ಮ ಸೀನಿಯರ್‌ಗಳು, ಸ್ನೇಹಿತರು ಸೇರಿದಂತೆ ಹಲವರಲ್ಲಿ ಸುಂದರವಾದ ಸಿವಿ ನಿರ್ಮಾಣಕ್ಕಾಗಿ ಬೇಡುತ್ತಾರೆ. ಕೆಲವರು ತಾವೇ ಸುಂದರ ಸಿವಿ ನಿರ್ಮಿಸುತ್ತಾರೆ. ಆದರೆ ಈ ಸಿವಿ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಸಂಸ್ಥೆಯೊಂದು ನಿರ್ಧರಿಸಿದ್ದು, ಸಿವಿ ಬದಲು ಕೇವಲ ನಿಮ್ಮ ವೀಡಿಯೋ ಕಳಿಸುವಂತೆ ಕೇಳಿದೆ..!

ಹೌದು ಅತಿಥ್ಯ ಹಾಗೂ ಹೊಟೇಲ್ ಉದ್ಯಮದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಹಿಲ್ಟನ್ ಗ್ರೂಪ್ಸ್ (Hilton Groups) ಈಗ ತನ್ನ ಸಂಸ್ಥೆಯಲ್ಲಿ ಉದ್ಯೋಗ ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಹೊಸದೊಂದು ಆಫರ್ ನೀಡಿದೆ. ಇಲ್ಲಿ ಉದ್ಯೋಗ ಮಾಡಲು ಬಯಸುವವರು ಸಿವಿ ಅಥವಾ ತಮ್ಮ ರೆಸ್ಯೂಮ್ ಬದಲು  ತಮ್ಮ ಟಿಕ್‌ಟಾಕ್ ವೀಡಿಯೋ ಕಳುಹಿಸುವಂತೆ ಕೇಳಿದೆ. ಆದರೆ ಈ ಆಫರ್ ಆಸ್ಟ್ರೇಲಿಯಾದಲ್ಲಿರುವವರಿಗೆ ಮಾತ್ರ ಲಭ್ಯವಿದೆ.!

Latest Videos

undefined

ಮ್ಯಾಕ್‌ಡೊನಾಲ್ಡ್ ಮಹಿಳಾ ಉದ್ಯೋಗಿಯ ಕೆಣಕಿ ಕಂಗಾಲಾದ ಗ್ರಾಹಕ: ಸರಿಯಾಗಿ ಬಾರಿಸಿದ ಅಕ್ಕಬಾಂಡ್

ಸಿವಿ, ಕವರ್‌ ಲೆಟರ್‌ಗಳ ಬದಲು ನಿಮ್ಮ ನಿಮ್ಮ 30 ರಿಂದ 60 ಸೆಕೆಂಡ್‌ಗಳ ಟಿಕ್‌ಟಾಕ್‌ ವೀಡಿಯೋಗಳನ್ನು(Tiktok video) ಕಳುಹಿಸುವಂತೆ ಸಂಸ್ಥೆ ಹೇಳಿದೆ.  ಹಾಗಂತ ಇದೇನೂ ನಿಮ್ಮ ಕಲಾ ಪ್ರತಿಭೆ ಪ್ರದರ್ಶನ ತೋರಿಸುವ ವೀಡಿಯೋ ಅಲ್ಲ, ಇಲ್ಲಿ ನೀವು ಯಾವ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೀರಿ ಯಾವ ಸ್ಥಳದಲ್ಲಿ ಕೆಲಸ ಮಾಡಲು ಬಯಸುವಿರಿ ಹಾಗೂ ಹಿಲ್ಟನ್‌ನ ಅತಿಥಿಗಳು ಅಲ್ಲಿನ ವಾಸ್ತವ್ಯವನ್ನು ಸದಾ ಸ್ಮರಿಸುವಂತಾಗಲೂ ಯಾವ ರೀತಿಯ ಯೋಜನೆ ರೂಪಿಸುವಿರಿ ಎಂಬುದನ್ನು ಈ ವೀಡಿಯೋದಲ್ಲಿ ತಿಳಿಸಬೇಕಾಗಿದೆ. 

ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುವ ಆಸಕ್ತರು ಈ ಎಲ್ಲಾ ವಿವರಗಳನ್ನು ಒಳಗೊಂಡ 30 ರಿಂದ 60 ಸೆಕೆಂಡ್‌ಗಳ ವೀಡಿಯೋವನ್ನು ಮಾಡಿ ಕಳುಹಿಸುವಂತೆ ಹೇಳಿದೆ. hiltonsurfersparadise ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ (Instagram Post) ಈ ಪೋಸ್ಟ್ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಸಾರ್ವಜನಿಕ ಟಿಕ್‌ಟಾಕ್‌ ಖಾತೆಯಿಂದ ಈ ವೀಡಿಯೋವನ್ನು HireMeHilton ಎಂಬ ಹ್ಯಾಶ್‌ಟ್ಯಾಗ್ ಜೊತೆ ಪೋಸ್ಟ್ ಮಾಡಬೇಕು. ಅಲ್ಲಿಂದ ಅವುಗಳನ್ನು ನೇಮಕಾತಿ ತಂಡವು ಮೌಲ್ಯಮಾಪನ ಮಾಡುತ್ತದೆ ಮತ್ತು ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ನಂತರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ ಎಂದು ಹಿಲ್ಟನ್ ಸಂಸ್ಥೆ ಹೇಳಿದೆ.

ಪೊಲೀಸ್ ಇಲಾಖೆ ಸೇರಿದ ಮುದ್ದು ಮುದ್ದಾದ ಅತೀ ಕಿರಿಯ ಉದ್ಯೋಗಿಗಳ ಫೋಟೋ ಶೂಟ್‌.!

ನಾವು ಉದ್ಯಮ ವಲಯದ ಸಾಂಪ್ರದಾಯಿಕ ನೇಮಕಾತಿ ಪ್ರಕ್ರಿಯೆಯನ್ನು ಅಲುಗಾಡಿಸುತ್ತಿದ್ದೇವೆ. ಸಾಂಪ್ರದಾಯಿಕ ಲೆಟರ್‌ಗಳು ಹಾಗೂ ಸಿವಿಯನ್ನು ಕೊನೆಗೊಳಿಸಲು ನಾವು ಆಸೀಸ್ ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡುತ್ತಿದ್ದೇವೆ ಹಾಗೂ ಹೀಗಾಗಿ ಸಿವಿ ಬದಲು ವೀಡಿಯೋ ಮೂಲಕ ನಮ್ಮ ಸಂಸ್ಥೆಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು ಸಂಸ್ಥೆ ಹೇಳಿದೆ. 

ಹೆಚ್ಚಿನ ಜೆಡ್ ತಲೆಮಾರಿನ ಉದ್ಯೋಗಿಗಳನ್ನು ಆಕರ್ಷಿಸಲು ಈ ರೀತಿಯ ಟಿಕ್‌ಟಾಕ್ ಪೈಲಟ್‌ ಕಾರ್ಯಕ್ರಮವನ್ನು ಪ್ರಾರಂಭಿಸಲು ಕಂಪನಿಯು ನಿರ್ಧರಿಸಿದೆ ಎಂದು ಹಿಲ್ಟನ್ ಆಸ್ಟ್ರೇಲಿಯದ ಪ್ರಾದೇಶಿಕ ಮಾನವ ಸಂಪನ್ಮೂಲ ನಿರ್ದೇಶಕರಾದ ಮೇರಿ ಹಾಗ್ ಅವರು  ಆಸ್ಟ್ರೇಲಿಯನ್ ಫೈನಾನ್ಷಿಯಲ್ ರಿವ್ಯೂಗೆ ತಿಳಿಸಿದ್ದಾರೆ.  AI ಹಾಗೂ ಚಾಟ್‌ ಜಿಪಿಟಿಯ  ಬಳಕೆಯ ಹೆಚ್ಚಳವೂ ಈ ನಿರ್ಧಾರಕ್ಕೆ ಕಾರಣವಾಗಿದೆ. ಏಕೆಂದರೆ ವಿದ್ಯಾರ್ಥಿಗಳು,  ಅಭ್ಯರ್ಥಿಗಳು ಇತ್ತೀಚೆಗೆ ತಮ್ಮ ಸಿವಿಯನ್ನು ಚಾಟ್ ಜಿಪಿಟಿ ಸಹಾಯದಿಂದ ತಯಾರಿಸುತ್ತಿರುವುದು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

click me!