ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಒಟ್ಟು 3614 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮೇ 15, 2022ರವೆಗೂ ಅವಕಾಶವಿದೆ.
ಬೆಂಗಳೂರು(ಎ.26): ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್ (Oil and Natural Gas Corporation Limited-ONGC) ನಲ್ಲಿ ಖಾಲಿ ಇರುವ ಒಟ್ಟು 3614 ಅಪ್ರೆಂಟಿಸ್ ( Apprentice) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 15, 2022ರವೆಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ಅಧಿಕೃತ ವೆಬ್‌ತಾಣ ongcindia.com ಗೆ ಭೇಟಿ ನೀಡಲು ಕೋರಲಾಗಿದೆ.
ಒಎನ್‌ಜಿಸಿ 3614 ಅಪ್ರೆಂಟಿಸ್ ಹುದ್ದೆಗಳ ಪ್ರದೇಶವಾರು ವಿವರ
ಡೆಹ್ರಾಡೂನ್ : 159
ದೆಹಲಿ : 40
ಜೋದ್‌ಪುರ್ : 10
ಮುಂಬೈ : 200
ಗೊವಾ : 15
ಹಜಿರಾ : 74
ಕ್ಯಾಂಬೆ : 96
ವಡೋದರಾ : 157
ಆಂಕ್ಲೇಶ್ವರ್ : 438
ಅಹ್ಮೆದಾಬಾದ್ : 387
ಮೆಹ್ಸನ : 356
ಕೋಲ್ಕತ್ತ : 50
ಅಗರ್‌ತಲ: 178
ಕರೈಕಲ್ : 233
ರಾಜಮುಂಡ್ರಿ : 353
ಕಾಕಿನಾಡ : 58
ಚೆನ್ನೈ : 50
ನಾಜಿರ ಮತ್ತು ಶಿವಸಾಗರ್ : 583
ಸಿಲ್ಚಾರ್ : 51
ಜೋರ್ಹತ್ : 110
undefined
ONGC Director Recruitment 2022: ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಿದ ಒಎನ್‌ಜಿಸಿ
ಅಕೌಂಟ್ಸ್ ಎಕ್ಸಿಕ್ಯೂಟಿವ್, ಆಫೀಸ್ ಅಸಿಸ್ಟೆಂಟ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಸೆಕ್ರೆಟೇರಿಯಲ್ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಲ್ಯಾಬೋರೇಟರಿ ಅಸಿಸ್ಟೆಂಟ್ (ಕೆಮಿಕಲ್ ಪ್ಲಾಂಟ್), ಮೆಕ್ಯಾನಿಕ್ ಡೀಸೆಲ್, ಮೆಷಿನಿಸ್ಟ್, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಷಿಯನ್ (ಕಾರ್ಡಿಯಾಲಜಿ ಮತ್ತು ಫಿಸಿಯಾಲಜಿ) , ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ, ವೆಲ್ಡರ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವ್ಯವಸ್ಥೆಯ ನಿರ್ವಹಣೆ, ಶೈತ್ಯೀಕರಣ ಮತ್ತು ಹವಾನಿಯಂತ್ರಣ ಮೆಕ್ಯಾನಿಕ್, ಡ್ರಾಫ್ಟ್ಸ್‌ಮನ್ (ಸಿವಿಲ್), ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಬಿಎ / ಬಿ.ಕಾಮ್ /ಬಿಎಸ್ಸಿ / ಬಿಬಿಎ / ಬಿಇ ಪದವಿ, ಡಿಪ್ಲೊಮಾ ಮತ್ತು ಐಟಿಐ ಮಾಡಿರಬೇಕು.
ವಯೋಮಿತಿ : ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, PWBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ
ಆಯ್ಕೆ ಪ್ರಕ್ರಿಯೆ : ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.
ಸ್ಟೈಫಂಡ್ ವಿವರ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ ಹುದ್ದೆಗೆ ಮಾಸಿಕ 9000, ಟ್ರೇಡ್ ಅಪ್ರೆಂಟಿಸ್ ಗಳಿಗೆ ಮಾಸಿಕ ರೂ.7,700 (2ನೇ ವರ್ಷ Rs.8,050), ಡಿಪ್ಲೊಮ ಅಪ್ರೆಂಟಿಸ್ ಹುದ್ದೆಗಳಿಗೆ ರೂ.8000 ಸ್ಟೈಫಂಡ್ ನೀಡಲಾಗುತ್ತದೆ.