PSI ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ, ಹೈಕೋರ್ಟ್ ಮೆಟ್ಟಿಲೇರಲು ಅಭ್ಯರ್ಥಿಗಳು ತೀರ್ಮಾನ

By Suvarna News  |  First Published Apr 29, 2022, 2:08 PM IST

* ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ
* ಸರ್ಕಾರ ಮರು ಪರೀಕ್ಷೆ ನಿರ್ಧಾರ ಹಿನ್ನಲೆ
* ಹೈಕೋರ್ಟ್ ಮೆಟ್ಟಿಲೇರಲು  ಅಭ್ಯರ್ಥಿಗಳ ನಿರ್ಧಾರ 


ಬೆಂಗಳೂರು, (ಏ.29): ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ (PSI Exam Scam)  ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಯಾರು ಪರೀಕ್ಷೆ ಬರೆದಿದ್ದರೋ ಅವರಿಗೆ ಮರು ಪರೀಕ್ಷೆ ನಡೆಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಘೋಷಿಸಿದ್ದಾರೆ.

ಒಟ್ಟು 54289 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಇದ್ದ ಆಪಾದಿತರನ್ನು ಬಿಟ್ಟು , ಉಳಿದವರಿಗೆ ಮರುಪರೀಕ್ಷೆ (Reexam) ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಆದ್ರೆ, ಇದರ ವಿರುದ್ಧ  ಹೈಕೋರ್ಟ್ ಮೆಟ್ಟಿಲೇರಲು  ಅಭ್ಯರ್ಥಿಗಳು ತೀರ್ಮಾನಿಸಿದ್ದಾರೆ.

Tap to resize

Latest Videos

ಮರು ಪರೀಕ್ಷೆ  ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಹಾಕಲು ತಯಾರಿ ನಡೆಸಿದ್ದು, ಈಗಾಗಲೇ  ಹಲವು ಅಭ್ಯರ್ಥಿಗಳು ಹೈಕೋರ್ಟ್ ಬಳಿ ಜಮಾವಣೆಗೊಂಡಿದ್ದಾರೆ.

ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ

ಇಂದೇ(ಶುಕ್ರವಾರ) ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ತಯಾರಿ ನಡೆಸಿದ್ದಾರೆ. ನ್ಯಾಯಯುವವಾಗಿ ಪರೀಕ್ಷೆ ಬರೆದಿದ್ದೇವೆ. ಮರು ಪರೀಕ್ಷೆಯಿಂದ ‌ನಮಗೆ ಅನ್ಯಾಯವಾಗತ್ತೆ. ಹೀಗಾಗಿ ಸರ್ಕಾರದ ಮರು ಪರುಪರೀಕ್ಷೆ ಮಾಡದಂತೆ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.

ಈ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಇದೀಗ ಮತ್ತೊಂದು ತಿರುವುಪಡೆದುಕೊಳ್ಳಲಿದ್ದು, ಸರ್ಕಾರ ಹಾಗೂ ಅಭ್ಯರ್ಥಿಗಳ ಜಟಾಪಟಿಗೆ ಹೈಕೋರ್ಟ್‌ ಏನು ಹೇಳುತ್ತೆ ಎನ್ನುವುದು ಕಾದುನೋಡಬೇಕಿದೆ.

ಪ್ರಮುಖ ಆರೋಪಿ ಅರೆಸ್ಟ್
ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷಾ ಅಕ್ರಮ  ಪ್ರಕರಣದ ಪ್ರಮುಖ ಆರೋಪಿ  ದಿವ್ಯಾ ಹಾಗರಗಿ (Divya Hagaragi) ಅರೆಸ್ಟ್  ಆಗಿದ್ದಾಳೆ. ಬರೋಬ್ಬರಿ 18 ದಿನಗಳ ಬಳಿಕ ದಿವ್ಯಾಗೆ ಪೊಲೀಸರು ಪುಣೆಯಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಇಷ್ಟು ದಿನ ಸಿಐಡಿ ಪೊಲೀಸ್ (CID Police) ಹಾಗೂ ಸರ್ಕಾರಕ್ಕೆ (Government) ಚಳ್ಳೆಹಣ್ಣು ತಿನ್ನಿಸಿದ್ದ ಬಿಜೆಪಿ ನಾಯಕಿ (BJP Leader) ವಿರುದ್ಧ ಅರೆಸ್ಟ್ ವಾರೆಂಟ್ (Arrest Warrant) ಜಾರಿ ಮಾಡಲಾಗಿತ್ತು. ಅಂತಿಮವಾಗಿ ದಿವ್ಯಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 

ಘಟನೆ ಹಿನ್ನೆಲೆ
ನೇಮಕಾತಿ ಅಕ್ರಮದ ಬಗ್ಗೆ ‘ಕನ್ನಡಪ್ರಭ’ ಏಷ್ಯಾನೆಟ್ ಸುವರ್ಣನ್ಯೂಸ್  ಸರಣಿ ವರದಿಗಳನ್ನು ಪ್ರಕಟಿಸಿ, ಸರ್ಕಾರದ ಗಮನ ಸೆಳೆದಿತ್ತು. ಇತ್ತೀಚೆಗೆ ನಡೆದ ಅಧಿ​ವೇಶನದಲ್ಲಿ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ (BK Hariprasad) ಸೇರಿದಂತೆ ಹಿರಿಯ ಸದಸ್ಯರು ಈ ವರದಿಗಳನ್ನು ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದ್ದರು.

ಇತ್ತ ರಾಜ್ಯದ ವಿವಿಧೆಡೆಯ ನೊಂದ ಅಭ್ಯರ್ಥಿಗಳೂ ನೇಮಕಾತಿ ಅಕ್ರಮ ಕುರಿತು, ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಧಾರವಾಡ ಸೇರಿದಂತೆ ಹಲವೆಡೆ ನೊಂದ ಅಭ್ಯರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದರಲ್ಲದೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ತನಿಖೆಗೆ ಆಗ್ರಹಿಸಿದ್ದರು.

ಸಿಐಡಿ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ್ದ ಹಾಗರಗಿ: 18 ದಿನದಿಂದ ದಿವ್ಯಾ ಎಲ್ಲಿದ್ರು? ಇಂಚಿಂಚು ಮಾಹಿತಿ ಇಲ್ಲಿದೆ

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಕುರಿತು ವಿಧಾನ ಪರಿಷತ್‌ ಕಲಾಪದಲ್ಲಿ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ಪಿಎಸ್‌ಐ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್‌ ಉಪಕರಣಗಳನ್ನು ಬಳಸಿ ಸಹಾಯ ಮಾಡುತ್ತಿದ್ದ ಅಕ್ರಮ ಕೂಟದ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಲಾಗಿದೆ ಎಂದಿದ್ದರು. ಆದರೆ ಸಚಿವರು ಹೇಳಿದಂತೆ ಅ.3, 2021ರಂದು ನಡೆದ ಪಿಎಸ್‌ಐ ಲಿಖಿತ ಪರೀಕ್ಷೆ ವೇಳೆ ಯಾವುದೇ ದಾಳಿ ನಡೆದಿರಲಿಲ್ಲ. ಬದಲಾಗಿ ಅ.24ರಂದು ನಡೆದ ಕಾನ್ಸ್‌ಟೇಬಲ್‌ ಪರೀಕ್ಷೆಯ ಮುನ್ನಾದಿನ (ಅ.23, 2021) ಕಲಬುರಗಿ ಹಾಗೂ ಬೆಳಗಾವಿ ವಿಭಾಗದಲ್ಲಿ ದಾಳಿ ನಡೆದಿತ್ತು. ಎಲೆಕ್ಟ್ರಾನಿಕ್‌ ಸಾಧನ, ಬ್ಲೂಟೂತ್‌ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡುವ ಯತ್ನಕ್ಕಿಳಿದಿದ್ದ 9 ಜನರನ್ನು ಕಲಬುರಗಿಯಲ್ಲಿ ಪೊಲೀಸರು ಬಂಧಿಸಿದ್ದರು(ಅಪರಾಧ ಸಂಖ್ಯೆ: 23/2021). ಲಾಡ್ಜ್‌ವೊಂದರಲ್ಲಿ ತಂಗಿದ್ದ ಇವರ ಮೇಲೆ ದಾಳಿ ನಡೆಸಿದಾಗ, ಬ್ಲೂಟೂತ್‌ ಡಿವೈಸ್‌, ಮೈಕ್ರೋಫೋನ್‌ ಮತ್ತು ಸಿಮ್‌ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಸದನದಲ್ಲಿ ಉತ್ತರಿಸುವಾಗ ಗೃಹಸಚಿವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ವಾಸ್ತವಾಂಶದ ಮಾಹಿತಿ ನೀಡದೆ ದಾರಿ ತಪ್ಪಿಸುವ ಯತ್ನ ನಡೆಸಿದ್ದರು ಎಂಬಿತ್ಯಾದಿ ಮಾತುಗಳು ಕೇಳಿ ಬಂದಿತ್ತು.

click me!