SBI Recruitment 2022: ಒಟ್ಟು 35 ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ

By Suvarna News  |  First Published Apr 28, 2022, 4:07 PM IST

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾಲಿ ಇರುವ 35 ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ  ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು,  ಮೇ.17 ಅರ್ಜಿ ಸಲ್ಲಿಸಲು ಕೊನೆಯ   ದಿನಾಂಕವಾಗಿದೆ.


ಬೆಂಗಳೂರು(ಎ.28): ಭಾರತೀಯ ಸ್ಟೇಟ್ ಬ್ಯಾಂಕ್ (State Bank of India) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಿದೆ.  ಒಟ್ಟು 32 ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ (Specialist Cadre Officer) ಹುದ್ದೆಗಳು ಖಾಲಿ ಇದ್ದು,   ಪದವಿ ಪೂರ್ಣಗೊಳಿಸಿರುವ ಅರ್ಹ ಮತ್ತು ಆಸಕ್ತ    ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು ಮೇ.17 ಕೊನೆಯ  ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು sbi.co.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಅಥವಾ ಈ ಲಿಂಕ್ ಗೆ https://sbi.co.in/web/careers/current-openings ಭೇಟಿ ನೀಡಲು ಕೋರಲಾಗಿದೆ.

ಒಟ್ಟು 37 ಹುದ್ದೆಗಳ ಮಾಹಿತಿ ಇಂತಿದೆ
ಸಿಸ್ಟಮ್ ಅಧಿಕಾರಿ (ಟೆಸ್ಟ್ ಇಂಜಿನಿಯರ್): 02 ಹುದ್ದೆಗಳು
ಸಿಸ್ಟಮ್ ಅಧಿಕಾರಿ (ವೆಬ್ ಡೆವಲಪರ್): 01 ಹುದ್ದೆ
ಸಿಸ್ಟಮ್ ಅಧಿಕಾರಿ (ಪರ್ಫಾರ್ಮೆನ್ಸ್/ಸೀನಿಯರ್ ಆಟೋಮೇಷನ್ ಟೆಸ್ಟ್ ಇಂಜಿನಿಯರ್): 01 ಹುದ್ದೆ
ಸಿಸ್ಟಮ್ ಅಧಿಕಾರಿ(ಪ್ರಾಜೆಕ್ಟ್ ಮ್ಯಾನೇಜರ್): 02 ಹುದ್ದೆಗಳು
ಸಿಸ್ಟಮ್ ಅಧಿಕಾರಿ (ಪ್ರಾಜೆಕ್ಟ್ ಮ್ಯಾನೇಜರ್): 01 ಹುದ್ದೆ
ಕಾರ್ಯನಿರ್ವಾಹಕ -Executive (ಪರೀಕ್ಷಾ ಇಂಜಿನಿಯರ್): 10 ಹುದ್ದೆಗಳು
ಕಾರ್ಯನಿರ್ವಾಹಕ (ಇಂಟರಾಕ್ಷನ್ ಡಿಸೈನರ್): 3 ಪೋಸ್ಟ್‌ಗಳು
ಕಾರ್ಯನಿರ್ವಾಹಕ (ವೆಬ್ ಡೆವಲಪರ್): 01 ಪೋಸ್ಟ್
ಕಾರ್ಯನಿರ್ವಾಹಕ (ಪೋರ್ಟಲ್ ಅಡ್ಮಿನಿಸ್ಟ್ರೇಟರ್): 03 ಪೋಸ್ಟ್‌ಗಳು
ಹಿರಿಯ ಕಾರ್ಯನಿರ್ವಾಹಕ (ಕಾರ್ಯಕ್ಷಮತೆ/ ಆಟೋಮೇಷನ್ ಟೆಸ್ಟ್ ಇಂಜಿನಿಯರ್): 04 ಹುದ್ದೆಗಳು
ಹಿರಿಯ ಕಾರ್ಯನಿರ್ವಾಹಕ (ಇಂಟರಾಕ್ಷನ್ ಡಿಸೈನರ್): 02 ಪೋಸ್ಟ್‌ಗಳು
ಹಿರಿಯ ಕಾರ್ಯನಿರ್ವಾಹಕ (ಪ್ರಾಜೆಕ್ಟ್ ಮ್ಯಾನೇಜರ್): 04 ಹುದ್ದೆಗಳು
ಹಿರಿಯ ವಿಶೇಷ ಕಾರ್ಯನಿರ್ವಾಹಕ (ಪ್ರಾಜೆಕ್ಟ್ ಮ್ಯಾನೇಜರ್): 01 ಹುದ್ದೆ

Tap to resize

Latest Videos

undefined

 KEA Exam Paper Leak ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ

ಶೈಕ್ಷಣಿಕ ವಿದ್ಯಾರ್ಹತೆ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ  ಯಾವುದೇ  ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು. ಅದರಂತೆ BE/ BTech ಅನ್ನು ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಮಾಹಿತಿ ತಂತ್ರಜ್ಞಾನ/ಸಾಫ್ಟ್‌ವೇರ್ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ನಲ್ಲಿ ಮಾಡಿರಬೇಕು. ಅಥವಾ MCA/MTech/ MSc ಅನ್ನು  ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ಅಥವಾ ತತ್ಸಮಾನತೆಯನ್ನು  ಮಾಡಿರಬೇಕು.

ಅರ್ಜಿ ಶುಲ್ಕ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ಮತ್ತು SC/ST/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ : ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಅಭ್ಯರ್ಥಿಗಳ ವಯಸ್ಸು ಹುದ್ದೆಗೆ ಅನುಸಾರವಾಗಿ    ನಿಗದಿಯಾಗಿದೆ.  

ಆಯ್ಕೆ ಪ್ರಕ್ರಿಯೆ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ,  ಶಾರ್ಟ್ ಲಿಸ್ಟ್  ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

RATION CARD MISUSE 20 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ನೋಟಿಸ್ 

Bank of India Recruitment 2022 ವಿವಿಧ 696 ಅಧಿಕಾರಿ ಹುದ್ದೆಗಳಿಗೆ ನೇಮಕಾತಿ: ಬ್ಯಾಂಕ್ ಆಫ್​ ಇಂಡಿಯಾ (Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು  696 ವಿವಿಧ ವಿಭಾಗದ ಅಧಿಕಾರಿ (Officer) ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ10, 2022 ಆಗಿದೆ. ಅಭ್ಯರ್ಥಿಗಳು ಬ್ಯಾಂಕ್​ ಆಫ್​ ಇಂಡಿಯಾದ ಅಧಿಕೃತ ವೆಬ್​ ತಾಣ ​ www.bankofindia.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ  ಪಡೆದುಕೊಳ್ಳಬಹುದು.

click me!