ಗ್ರಾಚ್ಯುಟಿಗೆ ಅರ್ಹತೆ ಪಡೆಯಲು ಇನ್ನು 3 ತಿಂಗಳು ಇರುವಾಗಲೇ ಉದ್ಯೋಗಿಯ ರಾಜೀನಾಮೆಗೆ ಒತ್ತಡ ಹಾಕಿದ ಐಟಿ ಕಂಪನಿ! ಮುಂದೇನಾಯ್ತು ನೋಡಿ!

Published : Nov 03, 2026, 02:59 PM ISTUpdated : Nov 03, 2026, 03:25 PM IST
IT company gratuity fraud

ಸಾರಾಂಶ

ಮಧ್ಯಪ್ರದೇಶದ ಐಟಿ ಕಂಪನಿಯೊಂದು ಉದ್ಯೋಗಿಗೆ ಗ್ರಾಚ್ಯುಟಿ ಅವಧಿ ಸಮೀಪಿಸುತ್ತಿದ್ದಂತೆ ರಾಜೀನಾಮೆಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. 4 ವರ್ಷ 9 ತಿಂಗಳು ಸೇವೆ ಸಲ್ಲಿಸಿದ್ದ ಉದ್ಯೋಗಿಗೆ, ಗ್ರಾಚ್ಯುಟಿ, ಇತರ ಭತ್ಯೆಗಳನ್ನು ನೀಡದಿರಲು ಕಂಪನಿಯೇ ಸ್ವಯಂಪ್ರೇರಿತವಾಗಿ ರಾಜೀನಾಮೆ ದಾಖಲಿಸಿ ವಂಚಿಸಿದೆ.

ಐಟಿ ಕಂಪನಿಗಳು ಉದ್ಯೋಗಿಗಳನ್ನು ಹೇಗೆಲ್ಲ ವಂಚಿಸುತ್ತವೆ, ನಡೆಸಿಕೊಳ್ಳುತ್ತವೆ ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದಿರುವ ಈ ಘಟನೆ ತಾಜಾ ಉದಾಹರಣೆ ಅಷ್ಟೇ ಅಲ್ಲ, ಉದ್ಯೋಗಿಗಳನ್ನ ಜಾಗೃತೊಳ್ಳುವಂತೆ ಮಾಡಿದೆ. ಹೌದು ಮಧ್ಯಪ್ರದೇಶ ಮೂಲದ ಈ ಐಟಿ ಕಂಪನಿ ತನ್ನ ಉದ್ಯೋಗಿಗೆ ಗ್ರಾಚ್ಯುಟಿ ಅವಧಿ ಸಮೀಪಿಸಿದಾಗ ಅಲ್ಲಿವರೆಗೆ ನಿಷ್ಠೆಯಿಂದ ದುಡಿದಿದ್ದ ಉದ್ಯೋಗಿಗೆ ಹೇಗೆ ವಂಚಿಸಿದೆ. ಈ ವಿಚಾರ ತಿಳಿದಾಗ ನಿಮಗೂ ಹೀಗೆ ಆಗಬಹುದಾ ಎಂಬ ಯೋಚನೆಯೂ ಶುರುವಾಗುತ್ತೆ ನೋಡಿ. ಕಂಪನಿ ನಡೆಸಿಕೊಂಡಿರೋ ರೀತಿ, ವಂಚನೆ ಬಗ್ಗೆ ಸ್ವತಃ ಆ ಕಂಪನಿಯ ಉದ್ಯೋಗಿಯೇ ಬಿಚ್ಚಿಟ್ಟಿದ್ದಾರೆ.

ಗ್ರಾಚ್ಯುಟಿ ಅರ್ಹತೆಗೆ ಮೂರು ತಿಂಗಳು ಉದ್ಯೋಗಿಗೆ ಕಿರುಕುಳ

ಈಗಿನ ಯುವಕ/ಯುವತಿಯರು ಒಂದು ಕಡೆ ಕಂಪನಿಗಾಗಿ ನಿಷ್ಠೆಯಿಂದ ಹಲವು ವರ್ಷಗಳು ದುಡಿಯುವುದೇ ಅಪರೂಪ, ವರ್ಷ ಮುಗಿಯುವುದರೊಳಗೆ ಇನ್ನೊಂದು ಕಂಪನಿಗೆ ಸೇರಿರುತ್ತಾರೆ ಅಂತಹದ್ದರಲ್ಲಿ ಐಟಿ ಕಂಪನಿಯೊಂದಕ್ಕೆ ನಿಷ್ಠೆಯಿಂದ ದುಡಿದ ಉದ್ಯೋಗಿ ಗ್ಯಾಚುಟಿಗೆ ಅರ್ಹನಾಗಲು ಇನ್ನು ಮೂರು ತಿಂಳು ಇರುವಾಗಲೇ ಐಟಿ ಕಂಪನಿ ಅಸಲಿ ಮುಖ ತೋರಿಸಿದೆ. ಕೆಲಸದಿಂದ ರಾಜೀನಾಮೆ ನೀಡುವಂತೆ ಉದ್ಯೋಗಿಗೆ ಒತ್ತಡ ಹಾಕಲು ಶುರು ಮಾಡಿದೆ.

ಉದ್ಯೋಗಿಗೆ ಐಪಿ ಕಂಪನಿ ವಂಚನೆ ಕಂಡು ಶಾಕ್

ಕಂಪನಿಯಲ್ಲಿ ನಾಲ್ಕು ವರ್ಷ ಒಂಭತ್ತು ತಿಂಗಳು ದುಡಿದಿರುವ ಉದ್ಯೋಗಿ ಇನ್ನೇನು ಮೂರು ಗ್ಯಾಚುಟಿಗೆ ಮೂರು ತಿಂಗಳೀರುವಾಗಲೇ ರಾಜೀನಾಮೆಗೆ ಒತ್ತಡ ಹಾಕಲಾರಂಭಿಸುತ್ತದೆ. ತನ್ನ ಕಂಪನಿ ಐದು ವರ್ಷಗಳ ಸೇವೆ ಪ್ರಶಂಸಿಸಬಹುದು ಎಂದು ನಿರೀಕ್ಷಿಸಿದ್ದ ಉದ್ಯೋಗಿಗೆ ಕಂಪನಿಯ ವಂಚನೆಯ ಇನ್ನೊಂದು ಮುಖ ಕಂಡು ಅಕ್ಷರಶಃ ಶಾಕ್ ಆಗಿದೆ. ಉದ್ಯೋಗಿ ರಾಜೀನಾಮೆ ನೀಡಲು ನಿರಾಕರಿಸಿದರೂ ಕಂಪನಿಯ ಹೆಚ್‌ಆರ್ ವಿಭಾಗ ಉದ್ಯೋಗಿಯ ರಾಜೀನಾಮೆ ಪ್ರಕ್ರಿಯೆ ಸ್ವಯಂ ಪ್ರೇರಿತವಾಗಿ ಸ್ವೀಕರಿಸಿ ದಾಖಲಿಸಿಬಿಟ್ಟಿದೆ!

ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ ಬಗ್ಗೆಎಕ್ಸ್ (X) ನ ಯೂಸರ್ಸ್ @Sumits_X ಎಂಬುವವರು ಈ ಘಟನೆ ಬೆಳಕಿಗೆ ತಂದಿದ್ದಾರೆ. ಅವರು ರೆಡ್ಡಿಟ್(Reddit ನ r/IndiaLaw ಸಬ್ ರೆಡ್ಡಿಟ್‌ನಲ್ಲಿ ಪ್ರಕಟವಾಗಿ ಪೋಸ್ಟ್‌ನ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದೆರೆ. ಗ್ರ್ಯಾಚುಟಿಯಂತಹ ಉದ್ಯೋಗಿಗಳಿಗೆ ಸಿಗುವ ಸೌಲಭ್ಯಗಳಿಗೆ ಅರ್ಹತೆ ಪಡೆಯುವ ವೇಳೆ ರಾಜೀನಾಮೆ ನೀಡುವಂತೆ ಕಂಪನಿ ಒತ್ತಡ ಹೇರುವುದು ಕಳವಳಕರವಾಗಿದೆ. ಈ ಘಟನೆ ಬಗ್ಗೆ ನೆಟಿಜೆನ್ ನಡುವೆ ತೀವ್ರ ಚರ್ಚೆಗೆ ಕಾರಣವಾಯ್ತು.

ಉದ್ಯೋಗಿ ಹೇಳುವಂತೆ, ಕಂಪನಿಯು ಕೆಲಸದಿಂದ ತೆಗೆದುಹಾಕಿದೆ. ನಾನು ರಾಜೀನಾಮೆ ನೀಡದಿದ್ದರೂ ಸ್ವಯಂಪ್ರೇರಿತರಾಗಿ ಅವರೇ ರಾಜೀನಾಮೆ ಸಿದ್ಧಪಡಿಸಿದ್ದಾರೆ. ಆದರೆ ನಾನು ರಾಜೀನಾಮೆ ನಿರಾಕರಿಸಿದ್ದೇನೆ, ಆದರೆ ಗ್ಯಾಚ್ಯುಟಿ ಸೇರಿದಂತೆ ಇತರೆ ಹಣವನ್ನು ನೀಡಲು ಕಂಪನಿ ನಿರಾಕರಿಸುತ್ತಿದೆ. ಎಂದು ನಡೆದ ಘಟನೆಗಳ ಬಗ್ಗೆ ಉದ್ಯೋಗಿ ಹಂಚಿಕೊಂಡಿದ್ದಾರೆ.

ಉದ್ಯೋಗಿ ಹೇಳುವ ಪ್ರಕಾರ, HR ವಿಭಾಗ ಉದ್ಯೋಗಿಗೆ ಮೂವತ್ತು ನಿಮಿಷಗಳ ಗಡವು ನೀಡಿತ್ತು ಅಷ್ಟರೊಳಗೆ ರಾಜೀನಾಮೆ ನೀಡಬೇಕು, ಇಲ್ಲವೇ ಕೆಲಸದಿಂದ ವಜಾಗೊಳಿಸುವುದಾಗಿ ಒತ್ತಡ ಹಾಕಿತ್ತು. ಅಂದರೆ ರಾಜೀನಾಮೆ ನೀಡದಿದ್ರೆ ಅಧಿಕೃತವಾಗಿ ಲೇಆಫ್(Layoff} ಮಾಡುವುದಾಗಿ ಕಂಪನಿ ಒತ್ತಡ ಹಾಕಿತ್ತು. ಆದರೆ ಉದ್ಯೋಗಿ ರಾಜೀನಾಮೆ ನೀಡಲು ನಿರಾಕರಿಸಿದ್ದಾನೆ. ಇಮೇಲ್ ಮೂಲಕ ಕಂಪನಿಗೆ ಉತ್ತರಿಸಿದ ಉದ್ಯೋಗಿ, ಮೂರು ತಿಂಗಳ ವೇತನ ಪರಿಹಾರವಾಗಿ ನೀಡಬೇಕು ಅಥವಾ ಅಧಿಕೃತವಾಗಿ ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ HR ಪ್ರತಿನಿಧಿಯು ಕೇವಲ ಎರಡು ವಾರಗಳಷ್ಟು ಹೆಚ್ಚುವರಿ ವೇತನ ಕೊಡ್ತೇವೆ ಹೊರತು ಮೂರು ತಿಂಗಳಿನ ವೇತನ ಸಾಧ್ಯವಿಲ್ಲ ಎಂದಿದೆ. ಅಲ್ಲದೆ ಗ್ರ್ಯಾಚ್ಯುಟಿ ಹಿಂದಿನ ವರ್ಷಗಳಲ್ಲಿ ಬಳಕೆಯಾಗದೆ ಉಳಿದ ರಜೆಗಳ ಹಣ, ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ಬಾಕಿ ಉಳಿದಿದ್ದ ಹಣ, ಎರಡು ತಿಂಗಳ ವೇತನ ಹಾಗೂ ಸೇವಾವಧಿಗೆ ಅನುಗುಣವಾಗಿ ನೀಡಬೇಕಾದ ಪರಿಹಾರವನ್ನು ಕಂಪನಿ ನೀಡಲು ನಿರಾಕರಿಸಿದೆ.

ಕಂಪನಿ ತನ್ನ ನಿರ್ಧಾರಗಳ ಬಗ್ಗೆ ಫೋನ್‌ ಮೂಲಕ ತಿಳಿಸುವ ಬದಲು ಅಧಿಕೃತ ಇಮೇಲ್ ಮೂಲಕವೇ ತಿಳಿಸುವಂಟತೆ ಹೆಚ್‌ಆರ್ ಗೆ ಮನವಿ ಮಾಡಿದ್ರೂ ಕೂಡ. ಅವರು ಇಮೇಲ್ ಬದಲು ಮೊಬೈಲ್‌ ಮೂಲಕವೇ ರಾಜೀನಾಮೆ ಸ್ವೀಕರಿಸಿರುವುದಾಗಿ ತಿಳಿಸಿತು. ಜೊತೆಗೆ ಎರಡು ವಾರಗಳ ಹೆಚ್ಚುವರಿ ವೇತನ ನೀಡಿರುವುದು ಉದ್ಯೋಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಉದ್ಯೋಗಿ ಸಮ್ಮತಿಸಿಲ್ಲ, ರಾಜೀನಾಮೆ ನೀಡಿಲ್ಲ. ಬದಲಾಗಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಅಲ್ಲದೆ ಪ್ರತಿಯೊಂದನ್ನು ಇಮೇಲ್ ಮೂಲಕವೇ ಪ್ರತಿಕ್ರಿಯಿಸಿದ್ದಾರೆ. ನಂತರ ನಡೆದ ಫೋನ್ ಸಂಭಾಷಣೆಯನ್ನು ಕೂಡ 'ಉದ್ಯೋಗಿ ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಅದನ್ನ ಕಂಪನಿ ಸ್ವೀಕರಿಸುವುದಾಗಿಯೂ ಹೆಚ್‌ಆರ್ ಪ್ರತಿನಿಧಿ ಹೇಳಿದ್ದಾರೆ. ಅಂದರೆ ಉದ್ಯೋಗಿಯ ಅನುಮತಿ ಇಲ್ಲದೆ ರಾಜೀನಾಮೆ ಪಡೆದಾಗಿದೆ.

ಒಂದು ವೇಳೆ ಕಂಪನಿ ಅಧಿಕೃತವಾಗಿ ಲೇಆಫ್ ಮಾಡಿದ್ದರೆ ಅದನ್ನ ಸಂಸ್ಥೆಯ ಹಿತದೃಷ್ಟಿಯಿಂದ ಅಂತಾ ಎಚ್‌ಆರ್ ವಾರ್ನಿಂಗ್ ಮಾಡಿದ್ದರು ಎಂದು ಉದ್ಯೋಗಿ ಹೇಳಿದ್ದಾರೆ. ಆದರೆ ಕಂಪನಿಗಾಗಿ ನಾಲ್ಕು ವರ್ಷ ಒಂಭತ್ತು ತಿಂಗಳು ದುಡಿದು, ಗ್ರ್ಯಾಚುಟಿ ಅರ್ಹತೆಗೆ ಇನ್ನು ಮೂರು ತಿಂಗಳಿರುವಾಗ ನಾನೇಕೆ ರಾಜೀನಾಮೆ ನೀಡಬೇಕು ಎಂದು ಉದ್ಯೋಗಿ ಹೇಳಿದ್ದಾರೆ. ಕಂಪನಿಯ ಅಟ್ಠಹಾಸಕ್ಕೆ ಬಲಿಯಾಗಿರುವುದು ಈ ಉದ್ಯೋಗಿ ಮಾತ್ರವಲ್ಲ. ಅವನ ಸಹೋದ್ಯೋಗಿಗೂ ಇದೇ ರೀತಿ ಕೆಲಸದಿಂದ ತೆಗೆದುಹಾಕಿದ ಬಳಿಕ ಒಂದು ತಿಂಗಳ ಹೆಚ್ಚುವರಿ ವೇತನ ನೀಡುವುದಾಗಿ ಭರವಸೆ ನೀಡಿತ್ತು. ಅದೇ ರೀತಿ ನಮಗೂ ಈಗ ಒಂದು ತಿಂಗಳ ವೇತನ ನೀಡಬಹುದೇನೋ ಅಂದುಕೊಂಡಿದ್ದರು. ಆದರೆ ಪೂರ್ಣವಾಗಿ ಹಣ ಕೊಟ್ಟಾಗಿದೆ ಎಂದು ಕಂಪನಿ ಹೇಳಿದ್ಮೇಲೂ ನೋಟಿಸ್ ಅವಧಿಯ ಎರಡು ತಿಂಗಳ ಹಣ ಬಂದಿಲ್ಲ. ಉದ್ಯೋಗಿ ಆರೋಪಿಸಿದ್ದಾರೆ. ಹೀಗಾಗಿ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಉದ್ಯೋಗಿ ಮತ್ತೊಂದು ಇಮೇಲ್ ಕಳಿಸಿದ್ದಾರೆ. ಒಂದು ವೇಳೆ ಕೊಡಲು ನಿರಾಕರಿಸಿದರೆ ಕಾರ್ಮಿಕ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡುವುದಾಗಿ ಉದ್ಯೋಗಿ ಎಚ್ಚರಿಸಿದ್ದಾರೆ.

ಈ ವಿಚಾರವಾಗಿ ಸುಮ್ಮನಿರಲು ಸಾಧ್ಯವಿಲ್ಲ

ಕಂಪನಿಯ ವಂಚನೆ ಬಗ್ಗೆ ವ್ಯಘ್ರಗೊಂಡಿರುವ ಉದ್ಯೋಗಿ. ಈ ವಂಚನೆಯನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ. ಏಕೆಂದರೆ ತಮ್ಮ ಹಿಂದಿನ ವೇತನಕ್ಕೆ ಹೋಲಿಸಿದರೆ ಬಾಕಿ ಉಳಿದಿರುವ ಹಣವೇ ಹೆಚ್ಚಾಗಿದೆ. ಅಲ್ಲದೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಕೆಲಸ ಪಡೆಯುವುದು ಕಷ್ಟವಾಗಿದೆ. ಹೀಗಿರುವಾಗ ಏಕಾಏಕಿ ಯಾವುದೇ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿದ್ದಾರೆ, ಆದರೆ ಯಾವುದೇ ದಾಖಲೆ ನೀಡಿಲ್ಲ. ಹೀಗಾಗಿ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಸಮಸ್ಯೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉದ್ಯೋಗಿಯ ಈ ಪೋಸ್ಟ್ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಲಸದಿಂದ ತೆಗೆದುಹಾಕುವ ಸಂದರ್ಭದಲ್ಲಿ ಉದ್ಯೋಗಿಗಳು ಎದುರಿಸಬಹುದಾದ ಇತರ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆದಿದ್ದಾರೆ.

'ಇದು ಮಾತ್ರವಲ್ಲ, ಪರ್ಫಾರ್ಮೆನ್ಸ್ ಇಂಪ್ರೂವ್‌ಮೆಂಟ್ ಪ್ಲಾನ್ (PIP) ಕೂಡ ಉದ್ಯೋಗಿಗಳನ್ನು ಯಾವುದೇ ಪರಿಹಾರ ನೀಡದೆ ಕಂಪನಿಯಿಂದ ಹೊರಹಾಕಲು ಬಳಸುವ ಮತ್ತೊಂದು ತಂತ್ರ'ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ ಇನ್ನೊಬ್ಬರು, 'ಇಂತಹ ಘಟನೆಗಳು ಆತಂಕ ಮೂಡಿಸುತ್ತವೆ. ಅದರಲ್ಲೂ ಉದ್ಯೋಗ ಸೌಲಭ್ಯಗಳು ಸಿಗುವ ವೇಳೆ ಈ ರೀತಿ ವಂಚಿಸಿದ್ರೆ, ಕೆಲಸದಿಂದ ತೆಗೆದುಹಾಕಿದ್ರೆ ಉದ್ಯೋಗಿಗಳ ಪಾಡೇನು? ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಉದ್ಯೋಗಿಗೆ ಸಲಹೆ ನೀಡಿದ್ದು, 'ಗ್ರಾಚ್ಯುಟಿ ಮತ್ತು ರಜೆಗಳ ಹಣ ಪಾವತಿಗೆ ಸಂಬಂಧಿಸಿದಂತೆ ಸಿಪಿಗ್ರಾಮ್ಸ್ (CPGrams) ಮೂಲಕ ದೂರು ದಾಖಲಿಸಿ. ಆದರೆ ರಜೆಗಳ ಹಣ ಪಾವತಿ ಕಂಪನಿಯ ರಜೆ ನೀತಿಯನ್ನು ಅವಲಂಬಿಸಿರುತ್ತದೆ' ಎಂದು ತಿಳಿಸಿದ್ದಾರೆ. ನ್ನು ಕೆಲವರು ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸಲಹೆ ನೀಡಿದ್ದಾರೆ.

ಗಮನಿಸಿ: ಲೇಖನವು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿದೆ. ಮೂಲ ಪೋಸ್ಟ್‌ನಲ್ಲಿ ಮಾಡಲಾಗಿರುವ ಆರೋಪಗಳನ್ನು ಏಷ್ಯಾನೆಟ್ ಸ್ವತಂತ್ರ್ಯವಾಗಿ ಪರಿಶೀಲಾಗಿಲ್ಲ.

PREV
Read more Articles on
click me!

Recommended Stories

ಸಮೋಸ ಕರಿಯುತ್ತಿದ್ದ ಹುಡುಗ ಇಂದು ದುಬೈನಲ್ಲಿ AI ಲೀಡ್ ಇಂಜಿನಿಯರ್! ಕೈಹಿಡಿದಿದ್ದು ಯಾವ ಸಬ್ಜೆಕ್ಟ್ ಗೊತ್ತಾ?
ಸರ್ಕಾರಿ ಉದ್ಯೋಗಕ್ಕೆ ಹೊಸ ರೂಲ್ಸ್​: ಅಶಾಂತಿ ಪ್ರಿಯರಿಗೆ ಬಿಗ್​ ಶಾಕ್​- ಏನಿದು ನೂತನ ನಿಯಮ