ಇಸ್ರೋ ಸ್ಯಾಲರಿ ನೋಡಿ ಐಐಟಿಯನ್‌ ಔಟ್‌: ನೇಮಕಾತಿಗೆ ಐಐಟಿಗೆ ಹೋದ ಅನುಭವ ಹೇಳಿದ ಸೋಮನಾಥ್‌

By Anusha Kb  |  First Published Oct 13, 2023, 3:49 PM IST

ಇಸ್ರೋದಲ್ಲಿ ಹಲವು ವರ್ಷಗಳ ಅನುಭವಿ ಸಿಬ್ಬಂದಿ ಪಡೆಯುವ ಸ್ಯಾಲರಿಯನ್ನು ಬಹುಶಃ ಈ ಐಐಟಿಯನ್‌ಗಳು ವೃತ್ತಿಯ ಆರಂಭದಲ್ಲೇ ಪಡೆಯುತ್ತಾರೆ ಹೀಗಾಗಿ ಅವರು ಇಸ್ರೋದತ್ತ ಮುಖ ಮಾಡಲು ಹೋಗುವುದಿಲ್ಲ ಎಂದು ಸೋಮನಾಥ್ (S.Somanath) ಹೇಳಿದ್ದಾರೆ.


ಬೆಂಗಳೂರು: ದೇಶದ ಪ್ರತಿಷ್ಠಿತ ಕಾಲೇಜುಗಳೆನಿಸಿರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಾಜಿಗಳಿಂದ ಇಸ್ರೋಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭೆಗಳು ಹರಿದು ಬರುತ್ತಿಲ್ಲ, ವೇತನ ನೋಡಿಯೇ ಬಹುತೇಕ ಐಐಟಿಯನ್‌ಗಳು ನೇಮಕಾತಿ ಪ್ರಕ್ರಿಯೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಅಧ್ಯಕ್ಷ ಎಸ್‌ . ಸೋಮನಾಥ್ ಹೇಳಿದ್ದಾರೆ. ಇಸ್ರೋದಲ್ಲಿ ಹಲವು ವರ್ಷಗಳ ಅನುಭವಿ ಸಿಬ್ಬಂದಿ ಪಡೆಯುವ ಸ್ಯಾಲರಿಯನ್ನು ಬಹುಶಃ ಈ ಐಐಟಿಯನ್‌ಗಳು ವೃತ್ತಿಯ ಆರಂಭದಲ್ಲೇ ಪಡೆಯುತ್ತಾರೆ ಹೀಗಾಗಿ ಅವರು ಇಸ್ರೋದತ್ತ ಮುಖ ಮಾಡಲು ಹೋಗುವುದಿಲ್ಲ ಎಂದು ಸೋಮನಾಥ್ (S.Somanath) ಹೇಳಿದ್ದಾರೆ.

ಏಷ್ಯಾನೆಟ್ (Asianet) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಬೆಸ್ಟ್‌ ಎನಿಸಿದ ಪ್ರತಿಭೆಗಳು ಇಂಜಿನಿಯರುಗಳು ಹಾಗೂ ಅದರಲ್ಲೂ ಐಐಟಿಯನ್‌ಗಳು, ಆದರೆ ಅವರಾರು ಇಸ್ರೋಗೆ  ಬರುತ್ತಿಲ್ಲ, ನಾವು ಐಐಟಿಗೆ (IIT) ಹೋಗಿ ನೇಮಕಾತಿ ಪ್ರಕ್ರಿಯೆ ನಡೆಸಿದರೂ ಅವರು ಇಸ್ರೋಗೆ ಸೇರಲು ಸಿದ್ದರಿರುವುದಿಲ್ಲ, ಬಾಹ್ಯಾಕಾಶ ಕ್ಷೇತ್ರದಲ್ಲೇ ಕೆಲಸ ಮಾಡಬೇಕು ಎಂಬ ಮಹತ್ವಕಾಂಕ್ಷೆ ಹೊಂದಿರುವ ಕೆಲವರು ಮಾತ್ರ  ಇಸ್ರೋಗೆ ಸೇರಲು ಮುಂದಾಗುತ್ತಾರೆ. ಅವರ ಪ್ರಮಾಣ ಶೇಕಡಾ ಒಂದಕ್ಕಿಂತಲೂ ಕಡಿಮೆ ಇದೇ  ಎಂದು ಸೋಮನಾಥ್ ಹೇಳಿದರು. 

Tap to resize

Latest Videos

undefined

ನೇಮಕಾತಿಗೆ ಐಐಟಿಗೆ ಹೋದ ಅನುಭವ ಹೇಳಿದ ಸೋಮನಾಥ್‌

ತಮ್ಮ ಇಸ್ರೋ ವಿಜ್ಞಾನಿಗಳ (ISRO scientist) ತಂಡಕ್ಕೆ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳುವ ಸಲುವಾಗಿ ಐಐಟಿಯೊಂದಕ್ಕೆ ನೇಮಕಾತಿ ಪ್ರಕ್ರಿಯೆಗೆ ಹೋದ ಅನುಭವವನ್ನು ಹಂಚಿಕೊಂಡ ಅವರು, ಐಐಟಿಯೊಂದಕ್ಕೆ ಹೋಗಿದ್ದ ತಾವು ಇಸ್ರೋ ಸಂಸ್ಥೆಯ ಕಾರ್ಯವಿಧಾನ ವೃತ್ತಿ ಅವಕಾಶಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ವಿವರಿಸಿದರು, ಜೊತೆಗೆ ಇಸ್ರೋ ವಿಜ್ಞಾನಿಗಳಿಗೆ ನೀಡುವ ವೇತನದ ಬಗ್ಗೆಯೂ ಹೇಳಿದರು. ಆದರೆ ಯಾವಾಗ ಇವರು ಇಸ್ರೋ ವಿಜ್ಞಾನಿಗಳ ವೇತನವನ್ನು ಅಲ್ಲಿ ಬಹಿರಂಗಪಡಿಸಿದರೋ ಆ ನೇಮಕಾತಿ ಪ್ರಕ್ರಿಯೆಗೆ ಅಲ್ಲಿ ಸೇರಿದ್ದ ಶೇ. 60 ರಷ್ಟು ಜನ  ಅಲ್ಲಿಂದ ಹೊರನಡೆದರು ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಇಸ್ರೋ ಅಧ್ಯಕ್ಷ. 

ಖಾಸಗಿಯಲ್ಲಿದ್ದಿದ್ದರೆ ಕೋಟಿ ಎಣಿಸುತ್ತಿದ್ದರು, ಇಸ್ರೋ ಮುಖ್ಯಸ್ಥರ ಸ್ಯಾಲರಿ ಜಾಸ್ತಿ ಮಾಡಿ: ನೆಟ್ಟಿಗರ ಆಗ್ರಹ

ಐಐಟಿಯನ್ನರು ಬೇರೆ ಸಂಸ್ಥೆಯಲ್ಲಿ ಆರಂಭದಲ್ಲಿ ಪಡೆಯುವ ಸ್ಯಾಲರಿಯೂ ಇಸ್ರೋದಲ್ಲಿ ಅನುಭವಿ ಸಿಬ್ಬಂದಿಗಿರುವ ಅತ್ಯಧಿಕ ವೇತನವಾಗಿದೆ ಎಂದು ಸೋಮನಾಥ್ ಹೇಳಿದರು. ಚಂದ್ರಯಾನ 3 ಯಶಸ್ವಿಯಾದ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷರು ಹಾಗೂ ಸಿಬ್ಬಂದಿಯ ವೇತನದ ಬಗ್ಗೆ ವ್ಯಾಪಕವಾದ ಚರ್ಚೆಯಾಗಿತ್ತು. ಈ ವೇಳೆ ಉದ್ಯಮಿ ಹರ್ಷ ಗೋಯೆಂಕಾ ಅವರು ಇಸ್ರೋ ಅಧ್ಯಕ್ಷರ ವೇತನ ನ್ಯಾಯ ಸಮ್ಮತವೇ ಎಂದು ಪ್ರಶ್ನೆ ಮಾಡಿದ್ದರು.  

ಇಸ್ರೋ ಮುಖ್ಯಸ್ಥರ (ISRO chief) ತಿಂಗಳ ಸಂಬಳ 2.5 ಲಕ್ಷ ರೂಪಾಯಿಯಾಗಿದ್ದು, ಇದು ಸರಿಯೇ ನ್ಯಾಯ ಸಮ್ಮತ್ತವೇ? ಇವರಂತಹ ವ್ಯಕ್ತಿಗಳು ಹಣಕ್ಕಿಂತ ಮುಖ್ಯವಾಗಿ ಕೆಲವು ಬೇರೆ ವಿಚಾರಗಳಿಂದ ಪ್ರೇರಿತರಾಗಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಅವರು ಹಣದ ಮುಖ ನೋಡದೇ ತಮ್ಮ ಆಸಕ್ತಿ, ವಿಜ್ಞಾನ ಹಾಗೂ ಸಂಶೋಧನೆಯ ವಿಷಯದಲ್ಲಿ ಸಮರ್ಪಣೆ ಜೊತೆಗೆ ತಮ್ಮ ದೇಶಕ್ಕೆ ಕೊಡುಗೆ ನೀಡಲು ಅವರು ಹೆಮ್ಮೆ ಪಡುತ್ತಾರೆ. ಈ ಸಾಧನೆಯ ಮೂಲಕ ಅವರು ತಮ್ಮ ವೈಯಕ್ತಿಕ ಆಸಕ್ತಿಯನ್ನು ನೆರವೇರಿಸಿಕೊಳ್ಳುತ್ತಾರೆ. ಅವರಂತಹ ದೇಶಕ್ಕಾಗಿ ಸಮರ್ಪಿತವಾದ ವ್ಯಕ್ತಿಗಳಿಗೆ ನಾನು ತಲೆ ಬಾಗುತ್ತೇನೆ ಎಂದು ಹರ್ಷ ಗೋಯಂಕಾ ಬರೆದುಕೊಂಡಿದ್ದರು. 

ಆಕ್ಸೆಂಚರ್ ಉದ್ಯೋಗಿಗಳಿಗೆ ಬ್ಯಾಡ್ ನ್ಯೂಸ್‌: ವೇತನ ಹೆಚ್ಚಳ ಬಡ್ತಿ ತಡೆ ...

ಹರ್ಷ ಗೋಯೆಂಕಾ ಅವರ ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು,  ಖಂಡಿತವಾಗಿಯೂ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಂತಹ ವ್ಯಕ್ತಿಗಳ ಸಮರ್ಪಣೆ ಮತ್ತು ಉತ್ಸಾಹವನ್ನು ಅಳೆಯಲಾಗದು. ಅವರ ಕೆಲಸವು ಹಣದ ಪ್ರತಿಫಲಗಳನ್ನು ಮೀರಿದೆ, ವಿಜ್ಞಾನ, ಸಂಶೋಧನೆ ಮತ್ತು ರಾಷ್ಟ್ರದ ಸುಧಾರಣೆಗೆ ಆಳವಾದ ಬದ್ಧತೆಯಿಂದ ಅವರ ಕೆಲಸ ನಡೆಸಲ್ಪಡುತ್ತದೆ. ಅವರು ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ನಿಜವಾದ ಪ್ರೇರಣಾಶಕ್ತಿಗಳು ಅದನ್ನು ಹಣದಿಂದ ಅಳತೆ ಮಾಡಲಾಗದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದರು. 

ಮನುಷ್ಯರ ಮಿದುಳು ಬಗೆದು ಸೂಪ್ ಮಾಡ್ತಿದ್ದ ಡೆಡ್ಲಿ ಕಿಲ್ಲರ್‌: ಬೆಚ್ಚಿ ಬೀಳಿಸುವ ಮರ್ಡರ್ ಸ್ಟೋರಿ ಇದು

click me!