ಬ್ಯಾಂಕ್ ಉದ್ಯೋಗ ಪಡೆಯಲು ಕನಸು ಕಾಣುವವರಿಗೆ ಐಬಿಪಿಎಸ್‌ನಿಂದ 13,706 ಹುದ್ದೆಗಳ ಬೃಹತ್ ನೇಮಕಾತಿ

Published : Sep 23, 2026, 04:55 PM IST
IBPS

ಸಾರಾಂಶ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ದೇಶಾದ್ಯಂತ 13,706 ಕಚೇರಿ ಸಹಾಯಕ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಮುಗಿಸಿದ 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27, 2026 ಕೊನೆಯ ದಿನಾಂಕವಾಗಿದೆ.

ಬ್ಯಾಂಕ್‌ ಕನಸು ಕಾಣುವ ಕನ್ನಡಿಗರಿಗೆ ಬಂಗಾರದ ಅವಕಾಶ. ಯುವಕ-ಯುವಕರಿಗೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಿಹಿಸುದ್ದಿ ನೀಡಿದೆ. ದೇಶಾದ್ಯಂತ ಒಟ್ಟು 13,706 ಕಚೇರಿ ಸಹಾಯಕ (Office Assistant) ಹಾಗೂ ವಿವಿಧ ಅಧಿಕಾರಿ (Officer) ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ವಿವರಗಳು

ಬ್ಯಾಂಕ್ ಹೆಸರು: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)

ಹುದ್ದೆಗಳ ಹೆಸರು: ಕಚೇರಿ ಸಹಾಯಕ, ಅಧಿಕಾರಿ

ಒಟ್ಟು ಹುದ್ದೆಗಳು: 13706

ಕೆಲಸದ ಸ್ಥಳ: ಅಖಿಲ ಭಾರತ

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಡಿಪ್ಲೊಮಾ, BE/ B.Tech, MBA, LLB, CA ಅನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 18-45 ವರ್ಷ ವಯೋಮಿತಿಯನ್ನು ಹೊಂದಿರಬೇಕು

ವಯೋಮಿತಿ ಸಡಿಲಿಕೆ :

ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷ

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷಗಳು

ಪಿಡಬ್ಲ್ಯೂಬಿಡಿ (PwBD) ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕದ ವಿವರ

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಇಎಸ್‌ಎಂ/ಡಿಇಎಸ್‌ಎಂ ಅಭ್ಯರ್ಥಿಗಳಿಗೆ: 175 ರು.

ಇತರ ಎಲ್ಲಾ ಅಭ್ಯರ್ಥಿಗಳಿಗೆ: 850 ರು.

ಪಾವತಿ ವಿಧಾನ ಆನ್‌ಲೈನ್ (Online)

ಆಯ್ಕೆ ವಿಧಾನ

ಆನ್‌ಲೈನ್ ಪೂರ್ವಭಾವಿ ಪರೀಕ್ಷೆ

ಆನ್‌ಲೈನ್ ಮುಖ್ಯ ಪರೀಕ್ಷೆ

ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT)

ದಾಖಲೆ ಪರಿಶೀಲನೆ

ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು IBPS ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

ಮುಖಪುಟದಲ್ಲಿರುವ RRB ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಕೇಳಲಾದ ವಿವರಗಳನ್ನು ನೀಡಿ ನೋಂದಣಿ (Registration) ಪೂರ್ಣಗೊಳಿಸಿ.

ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ.

ಕೊನೆಯದಾಗಿ ನಿಮ್ಮ ವರ್ಗಕ್ಕೆ ತಕ್ಕಂತೆ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ.

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ಸೆಪ್ಟೆಂಬರ್‌ 1-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್-27-2026

PREV
Read more Articles on
click me!

Recommended Stories

ಐಟಿಬಿಪಿಯಲ್ಲಿ 12ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ: ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
"UP, ಬಿಹಾರದ ಪುರುಷರಿಗೆ 'ನೋ ಎಂಟ್ರಿ': ಬೆಂಗಳೂರು ಸಿಇಒ ತಗೆದುಕೊಂಡ ಈ ವಿಚಿತ್ರ ನಿರ್ಧಾರಕ್ಕೆ ಅಸಲಿ ಕಾರಣವೇನು?"