IBPS Recruitment 2022; ಬರೋಬ್ಬರಿ 8106 ಹುದ್ದೆಗಳಿಗೆ ನೇಮಕಾತಿ

By Suvarna News  |  First Published Jun 19, 2022, 5:10 PM IST

ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ ತನ್ನ ಅಧೀನದಲ್ಲಿರುವ ಪ್ರಾದೇಶಿಕ ಬ್ಯಾಂಕ್‌ಗಳ ವಿವಿಧ ಹುದ್ದೆಗಳ ನೇಮಕಾತಿ ಕುರಿತು ತಿಳಿಸಿದೆ. ಒಟ್ಟು 8106 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್‌ 27 ಕೊನೆಯ ದಿನವಾಗಿದೆ.


ನವದೆಹಲಿ (ಜೂನ್ 19): ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್‌ - Institute of Banking Personnel Selection)ಯು 2022ನೇ ಸಾಲಿನ ನೇಮಕಾತಿ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ತನ್ನ ಅಧೀನದಲ್ಲಿರುವ ಪ್ರಾದೇಶಿಕ ಬ್ಯಾಂಕ್‌ಗಳ ವಿವಿಧ ಹುದ್ದೆಗಳ ನೇಮಕಾತಿ ಕುರಿತು ತಿಳಿಸಿದೆ. ದೇಶಾದ್ಯಂತ ಇರುವ ತನ್ನ ಅಧೀನ ಪ್ರಾದೇಶಿಕ ಬ್ಯಾಂಕ್‌ಗಳಲ್ಲಿ ಅಸಿಸ್ಟೆಂಟ್‌, ಆಫೀಸರ್‌ ಸ್ಕೇಲ್‌(ವಿವಿಧ ಹಂತ) ಸಹಿತ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಐಬಿಪಿಎಸ್‌ ಸೂಚನೆ ನೀಡಿದೆ. ಇವುಗಳೆಲ್ಲದರ ಕುರಿತು ಹೆಚ್ಚಿನ ಮಾಹಿತಿಗಳು ಕೆಳಗಡೆ ನೀಡಲಾಗಿದೆ.

ಹುದ್ದೆಗಳ ವಿವರ ಇಲ್ಲಿದೆ: ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ವಿಭಾಗವು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಹುದ್ದೆಗಳ ವಿವರಗಳನ್ನು ಸಂಖ್ಯಾನುಸಾರ ವಿವರಗಳಾಗಿ ನೀಡಿದೆ. ಆಫೀಸ್‌ ಅಸಿಸ್ಟೆಂಟ್‌(ಮಲ್ಟಿಪರ್ಪಸ್‌) 4,483 ಹುದ್ದೆಗಳು, ಆಫೀಸರ್‌ ಸ್ಕೇಲ್‌ 1- 2,676 ಹುದ್ದೆಗಳು, ಆಫೀಸರ್‌ ಸ್ಕೇಲ್‌ 2(ಅಗ್ರಿಕಲ್ಚರ್‌ ಪರ್ಪಸ್‌)-12ಹುದ್ದೆಗಳು, ಆಫೀಸರ್‌ ಸ್ಕೇಲ್‌ 2(ಮಾರ್ಕೆಟಿಂಗ್‌ ಮ್ಯಾನೇಜರ್‌)- 6 ಹುದ್ದೆಗಳು, ಆಫೀಸರ್‌ ಸ್ಕೇಲ್‌ 2(ಟ್ರೆಶರಿ ಮ್ಯಾನೇಜರ್‌)-10 ಹುದ್ದೆಗಳು, ಆಫೀಸರ್‌ ಸ್ಕೇಲ್‌ 2(ಲಾ)-18 ಹುದ್ದೆಗಳು, ಆಫೀಸರ್‌ ಸ್ಕೇಲ್‌2(ಸಿಎ)-19 ಹುದ್ದೆಗಳು, ಆಫೀಸರ್‌ ಸ್ಕೇಲ್‌2(ಐಟಿ)-57 ಹುದ್ದೆಗಳು, ಆಫೀಸರ್‌ ಸ್ಕೇಲ್‌2(ಜನರಲ್‌ ಬ್ಯಾಂಕಿಂಗ್‌ ಆಫೀಸರ್‌)-745 ಹುದ್ದೆಗಳು, ಆಫೀಸರ್‌ ಸ್ಕೇಲ್‌ 3-80 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Tap to resize

Latest Videos

undefined

BRO RECRUITMENT 2022; ವಿವಿಧ 302 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ ಏನು ಇರಬೇಕು?
ಅಧಿಸೂಚನೆಯಲ್ಲಿ ವಿದ್ಯಾರ್ಹತೆಯನ್ನೂ ಕೂಡ ಪ್ರಮುಖವಾಗಿ ತಿಳಿಸಲಾಗಿದೆ. ಐಬಿಪಿಎಸ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಚಾರ್ಟೆಡ್‌ ಅಕೌಂಟೆಂಟ್‌(ಸಿಎ) ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಮಾಸ್ಟರ್‌ ಆಫ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌(ಎಂಬಿಎ), ತೇರ್ಗಡೆಯಾಗಿರಬೇಕು. ಆಫೀಸರ್‌ ಸ್ಕೇಲ್‌ 2 ಹಾಗೂ 3 ಹುದ್ದೆಗಳಿಗೆ ಕಾರ್ಯಾನುಭವಗಳನ್ನು ನೋಟಿಫಿಕೇಶನ್‌ನಲ್ಲಿ ರೆಫರ್‌ ಮಾಡಬಹುದಾಗಿದೆ ಎಂದು ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ ತಿಳಿಸಿದೆ.

ವಯೋಮಿತಿ ಎಷ್ಟುಇರಬೇಕು?: ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷವಾದರೂ ತುಂಬಿರಲೇಬೇಕು. ಇನ್ನು ಗರಿಷ್ಠ ವಯೋಮಾನ 40 ಮೀರಿರಬಾರದು. ಆಫೀಸರ್‌ ಸ್ಕೇಲ್‌1ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಙವೆಂದರೆ 30 ವರ್ಷವಾಗಿರಬೇಕು. ಆಫೀಸರ್‌ ಸ್ಕೇಲ್‌ 2ಕ್ಕೆ ಕನಿಷ್ಙ 21 ವರ್ಷ ಹಾಗೂ ಗರಿಷ್ಠ ಎಂದರೆ 32 ವರ್ಷದೊಳಗಿರಬೇಕು.ಇನ್ನು ಸ್ಕೇಲ್‌ 3ರ ಹುದ್ದೆಗೆ ಕನಿಷ್ಠ 21 ಹಾಗೂ ಗರಿಷ್ಠ 40 ವರ್ಷದೊಳಗಿರಬೇಕು. ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 28 ವರ್ಷದೊಳಗಿರಬೇಕಕು ಎಂದು ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆ ಹೀಗಿದೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗೆಂದೆ ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ವಿಭಾಗವು ನೇಮಕಾತಿ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಿದೆ. ಇದರ ಅನ್ವಯ ಅಭ್ಯರ್ಥಿಗೆ ಆನ್‌ಲೈನ್‌ ಮೂಲಕವೇ ಪರೀಕ್ಷೆ ನಡೆಸಲಾಗುತ್ತದೆ(ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆ). ಬಳಿಕ ಸಂದರ್ಶನವನ್ನು ನಡೆಸಿ ಮೇಲೆ ತಿಳಿಸಿದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆಯ್ಕೆ ವೇಳೆ ನೇಮಕಾತಿ ವಿಭಾಗದ ನಿರ್ಧಾರಗಳೇ ಅಂತಿಮವಾಗಿರುತ್ತವೆ.

Bidar District Court recruitment 2022: ಬೀದರ್‌ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ

ವೇತನ ವಿವರ: ಬ್ಯಾಂಕಿಂಗ್‌ ನೇಮಕಾತಿ ವಿಭಾಗವು ಅಧಿಸೂಚನೆಯಲ್ಲಿ ವೇತನದ ವಿವರಗಳನ್ನು ಬಹಿರಂಗಪಡಿಸಿದೆ. ಇದರ ಅನ್ವಯ ಐಪಿಬಿಎಸ್‌ನ ಆಫಿಸರ್‌ ಸ್ಕೇಲ್‌ 1ಕ್ಕೆ 29,000 ರು.ಇಂದ 33,000 ರು.ವರೆಗೆ ಪಾವತಿಸಲಾಗುತ್ತದೆ. ಅಂತೆಯೆ ಆಫೀಸರ್‌ ಸ್ಕೇಲ್‌2ಕ್ಕೆ 33,000 ರು.ಇಂದ 39,000 ರು.ವರೆಗೆ ನೀಡಲಾಗುತ್ತದೆ. ಆಫೀಸರ್‌ ಸ್ಕೇಲ್‌ 3ಕ್ಕೆ 38,000 ರು.ಇಂದ 44,000 ರು.ವರೆಗೆ ಮಾಸಿಕ ವೇತನ ಪಾವತಿಸಲಾಗುತ್ತದೆ ಎಂದು ನೇಮಕಾತಿ ವಿಭಾಗ ಮಾಹಿತಿ ನೀಡಿದೆ.

ಅರ್ಜಿ ಶುಲ್ಕದ ವಿವರ: ಅಭ್ಯರ್ಥಿಗೆ ಅರ್ಜಿ ಶುಲ್ಕದ ವಿವರಗಳನ್ನೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗೆ ಹಾಗೂ ಒಬಿಸಿ ಅಭ್ಯರ್ಥಿಗೆ ಅರ್ಜಿ ಶುಲ್ಕ 850 ರು. ನಿಗದಿ ಮಾಡಲಾಗಿದೆ. ಅಂತೆಯೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗೆ ಅರ್ಜಿ ಶುಲ್ಕ 175 ರು. ನಿಗದಿ ಮಾಡಲಾಗಿದೆ ಎಂದು ನೇಮಕಾತಿ ವಿಭಾಗ ತಿಳಿಸಿದೆ.

ಅರ್ಜಿ ಹೀಗೆ ಸಲ್ಲಿಸಿ: ಅರ್ಜಿ ಸಲ್ಲಿಸಲು ಜೂನ್‌27 ಕೊನೆಯ ದಿನವಾಗಿದೆ. ಅಭ್ಯರ್ಥಿಯು ಮೊದಲು ಐಬಿಪಿಯ ಅಧಿಕೃತ ವೆಬ್‌ಸೈಟ್‌ಗೆ https://www.ibps.in/ ತೆರಳಿ. ಬಳಿಕ ಕಾಣಸಿಗುವ CRP RRBs-XI ಗೆ ಕ್ಲಿಕ್‌ ಮಾಡಿ. ಬಳಿಕ ಕಾಣಸಿಗುವ ಅರ್ಜಿ ನಮೂನೆಯನ್ನು ಸಂಪೂರ್ಣ ಭರ್ತಿಗೊಳಿಸಿ ಸೂಕ್ತ ದಾಖಲೆಗಳ ಸಹಿತ ಅರ್ಜಿಯನ್ನು ಸೆಂಡ್‌ ಮಾಡಿ. ಇಲ್ಲಿಗೆ ನೇಮಕಾತಿ ಪ್ರಕ್ರಿಯೆ ಮುಗಿಯಿತು.  

click me!