ಗಡಿಭಾಗ ರಸ್ತೆ ವಿಭಾಗಗಡಿ ರಸ್ತೆಗಳ ಸಂಘ(ಬಿಆರ್‌ಒ)ಗೆ ಸಂಬಂಧಿಸಿದ ಜನರಲ್ ರಿಸವ್‌ರ್ ಇಂಜಿನಿಯರ್ ಫೋರ್ಸ್(ಜಿಆರ್‌ಇಎಫ್) ಪ್ರಕ್ತ ವರ್ಷದ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆಗೆ ಜೂನ್29ರಂದು ಕೊನೆಯ ದಿನವಾಗಿದೆ.
ಬೆಂಗಳೂರು (ಜೂನ್.19): ಗಡಿಭಾಗ ರಸ್ತೆ ವಿಭಾಗಗಡಿ ರಸ್ತೆಗಳ ಸಂಘ(ಬಿಆರ್‌ಒ)ಗೆ ಸಂಬಂಧಿಸಿದ ಜನರಲ್ ರಿಸರ್ವ ಇಂಜಿನಿಯರ್ ಫೋರ್ಸ್(ಜಿಆರ್‌ಇಎಫ್) ಪ್ರಸಕ್ತ ವರ್ಷದ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು ಹಾಗೂ ಯಾವುದೇ ರಾಜ್ಯ, ಸ್ಥಳಗಳ ಮಿತಿ ಇಲ್ಲ. ಅಧಿಸೂಚನೆ ಪ್ರಕಾರ 302 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ.
ಅಧಿಸೂಚನೆಯಲ್ಲಿ ಹುದ್ದೆಗಳ ವಿವರಗಳನ್ನೂ ನೀಡಲಾಗಿದೆ. ಒಟ್ಟು 302 ಹುದ್ದೆಗಳ ಪೈಕಿ ಮಲ್ಟಿಸ್ಕಿಲ್ಡ್(ಮನ್ಸೂನ್) 147 ಹುದ್ದೆಗಳು, ಮಲ್ಟಿಸ್ಕಿಲ್ಡ್ ವರ್ಕರ್(ನರ್ಸಿಂಗ್ ಅಸಿಸ್ಟೆಂಟ್) 155 ಹುದ್ದೆಗಳು ಖಾಲಿ ಇದ್ದು, ಇವುಗಳಿಗೆ ನೇಮಕಾತಿ ನಡೆಸಲಾಗುವುದು. ಅಭ್ಯರ್ಥಿಗೆ ವಯೋಮಾನದಂಡವನ್ನು ನಿರ್ಧರಿಸಲಾಗಿದ್ದು, ಸಾಮಾನ್ಯ ಅಭ್ಯರ್ಥಿಗೆ ಕನಿಷ್ಠ 18 ವರ್ಷವಾಗಿರಬೇಕು ಹಾಗೂ ಗರಿಷ್ಠ ಎಂದರೆ 40 ವರ್ಷವಾಗಿರಬೇಕು. ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 43 ವರ್ಷದೊಳಗಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ ಎಂದರೆ 45 ವರ್ಷದೊಳಗಿರಬೇಕು ಎಂದು ತಿಳಿಸಲಾಗಿದೆ.
BIDAR DISTRICT COURT RECRUITMENT 2022: ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ
ವಿದ್ಯಾರ್ಹತೆಗಳನ್ನೂ ತಿಳಿಸಲಾಗಿದ್ದು,ಮಲ್ಟಿಸ್ಕಿಲ್ಡ್ ವರ್ಕರ್(ಮಾನ್ಸೂನ್) ವಿಭಾಗದ ಅಭ್ಯರ್ಥಿಗಳಿಗೆ ಕನಿಷ್ಠ 10ನೇ ತರಗತಿಯಾಗಿರಬೇಕು. ಇದರ ಜೊತೆಗೆ ಕಟ್ಟಡ ನಿರ್ಮಾಣ, ರಾಷ್ಟ್ರೀಯ ಅಥವಾ ರಾಜ್ಯ ತರಬೇತಿ ಮಂಡಳಿಯಿಂದ ಪದವಿಯನ್ನು ಪಡೆದಿರಬೇಕು. ನರ್ಸಿಂಗ್ ಸಹಾಯಕ ವಿಭಾಗದ ಮಲ್ಟಿಸ್ಕಿಲ್ಡ್ ವರ್ಕರ್ ಅಭ್ಯರ್ಥಿಗೆ ಕನಿಷ್ಠ ಪಿಯುಸಿ ತೇರ್ಗಡೆಯಾಗಿರಬೇಕಿದ್ದು, ಜೀವಶಾಸ್ತ್ರವನ್ನು ಆಯ್ದುಕೊಂಡಿರಬೇಕು.
ಅಭ್ಯರ್ಥಿಯ ನೇಮಕಾತಿ ವಿಧಾನವನ್ನು ತಿಳಿಸಲಾಗಿದ್ದು, ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಬಳಿಕ ಪ್ರಯೋಗಿಕ ಪರೀಕ್ಷೆಯನ್ನು ನಡೆಸಲಿದ್ದು, ಕೊನೆಯಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
5000 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕ, ಗೌರವ ಧನ ಹೆಚ್ಚಳಕ್ಕೆ ಸರಕಾರ ಆದೇಶ
ಅರ್ಜಿ ಶುಲ್ಕವನ್ನು ತಿಳಿಸಲಾಗಿದ್ದು, ಸಾಮಾನ್ಯ ಅಭ್ಯರ್ಥಿಗೆ(ಇಡಬ್ಲ್ಯುಎಸ್ ಇದ್ದರೂ ಕೂಡ) 50 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಎಸ್ಸಿಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಕೆ ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಅರ್ಜಿಯು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿದೆ.
ಅರ್ಜಿ ಸಲ್ಲಿಕೆಗೆ ಜೂನ್29ರಂದು ಕೊನೆಯ ದಿನವಾಗಿದೆ. ಅಭ್ಯರ್ಥಿ ಆಯ್ಕೆಯಾದ ಬಳಿಕ ಮೇಘಾಲಯ, ಅರುಣಾಚಲಪ್ರದೇಶ, ಅಸ್ಸಾಂ, ಮಣಿಪುರ ದೇಶಾದ್ಯಾಂತ ನೇಮಕ ಮಾಡಲಾಗುತ್ತದೆ. ಅಭ್ಯರ್ಥಿಗಳಿWಗೆ ವೇತನ ಶ್ರೇಣಿಯನ್ನು ತಿಳಿಸಲಾಗಿದೆ. ಅಭ್ಯರ್ಥಿಗಳಿಗೆ ಲೆವೆಲ್ 1ರ ಅನ್ವಯ 18 ಸಾವಿರ ರು. ಇಂದ 56,900 ರು.ವರೆಗೆ ಪಾವತಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ http://bro.gov.in/ಗೆ ಲಾಗಿನ್ ಮಾಡಿಕೊಳ್ಳಬಹುದು.
Karnataka Teachers Recruitment; ಜೂ.24ರಂದು ಶಿಕ್ಷಕರ ನೇಮಕಕ್ಕೆ ಕೌನ್ಸೆಲಿಂಗ್
Western Railwayಯಲ್ಲಿ 3612 ಹುದ್ದೆಗಳ ನೇಮಕಾತಿ: ರೈಲ್ವೆ ಇಲಾಖೆ 2022ನೇ ಸಾಲಿನ ನೇಮಕಾತಿಯನ್ನು ಮುಂದುವರಿಸಿದ್ದು, ಮತ್ತೊಮ್ಮೆ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಕುರಿತು ಅಧಿಸೂಚನೆ ಹೊರಡಿಸಿದೆ. ವೆಸ್ಟರ್ನ್ ರೈಲ್ವೆ ನೇಮಕಾತಿ ವಿಭಾಗವು ಈ ಕುರಿತು ಅಧಿಸೂಚನೆ ಹೊರಡಿಸಿ ಮಾಹಿತಿಯನ್ನೂ ನೀಡಿದೆ. ಅರ್ಜಿ ಸಲ್ಲಿಸಲು ಜೂನ್ 27 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಪೂಣ ವಿವರಗಳೊಳಗೊಂಡ ಅರ್ಜಿಯನ್ನು ಮಾತ್ರವೇ ಕಳುಹಿಸಬೇಕಿದೆ ಎಂದು ವೆಸ್ಟರ್ನ ರೈಲ್ವೇಸ್ ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ rrchubli.in ಗೆ ಭೇಟಿ ನೀಡಲು ಕೋರಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ತೇರ್ಗಡೆಯಾಗಿರಲೇಬೇಕು. ಜೊತೆಗೆ ಐಟಿಐ ವಿದ್ಯಾರ್ಹತೆ ಪ್ರಮಾಣಪತ್ರವನ್ನು ಎನ್‌ಸಿವಿಟಿ/ಎಸ್‌ಸಿವಿಟಿಯಿಂದ ಪಡೆದಿರಬೇಕು. ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಡೆದವರು, ಸದರಿ ಟ್ರೇಡ್‌ಗೆ ಅರ್ಜಿ ಸಲ್ಲಿಸಬೇಕಿದೆ ಎಂದು ವೆಸ್ಟರ್ನ್ ರೈಲ್ವೇಸ್ ಮಾಹಿತಿ ನೀಡಿದೆ.