CRPFನಲ್ಲಿ 44 ಸಾವಿರ ಸಂಬಳದ ಉದ್ಯೋಗ, ಎಕ್ಸಾಂ ಇಲ್ಲ, ಸಂದರ್ಶನದ ಮೂಲಕ ಆಯ್ಕೆ

By Mahmad Rafik  |  First Published Dec 11, 2024, 9:41 AM IST

ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ crpf.gov.in ಗೆ ಭೇಟಿ ನೀಡಿ  ಅರ್ಜಿ ಸಲ್ಲಿಸಬಹುದು.


ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಉದ್ಯೋಗ ಹುಡುಕುತ್ತಿರೋ ಯುವಕರಿಗೆ ಗುಡ್‌ನ್ಯೂಸ್ ಬಂದಿದೆ. ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬುವುದು ಯುವ ಸಮುದಾಯದ ಕನಸು ಆಗಿರುತ್ತದೆ. ಅದರಲ್ಲಿಯೂ ಸೇನೆ ಸೇರಬೇಕು ಎಂದು ತಯಾರಿ ನಡೆಸುತ್ತಿರುವ ಯುವ ಸಮುದಾಯಕ್ಕೆ ಸುವರ್ಣವಕಾಶ ಅರಸಿ ಬಂದಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, crpf.gov.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.  ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಡಿಸೆಂಬರ್ 12 ಆಗಿದ್ದು, ಅಭ್ಯರ್ಥಿಗಳಿಗೆ 1 ದಿನದ ಅವಕಾಶವಿದೆ. .

ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂದರ್ಶನದ (ವಾಕ್-ಇನ್-ಇಂಟರ್ವ್ಯೂ) ಮೂಲಕ ನಡೆಯುತ್ತದೆ. ಕಾರ್ಯಕ್ಷಮತೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಯಸ್ಸಿನ ಮಿತಿ ಮತ್ತು ಸಂಬಳದ ಮಾಹಿತಿ ಈ ಕೆಳಗಿನಂತಿದೆ.

Tap to resize

Latest Videos

ವಯಸ್ಸಿನ ಮಿತಿ: ಅರ್ಜಿ ಸಲ್ಲಿಸಲು  ಇಚ್ಛಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ 55 ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ನಿಯಮಿತ ಕ್ಲಿನಿಕಲ್ ಸೈಕಾಲಜಿ ಪದವಿಯನ್ನು ಹೊಂದಿರಬೇಕು. ಅಂಗವಿಕಲ ವ್ಯಕ್ತಿಗಳು ಅಥವಾ ದೈಹಿಕವಾಗಿ ವಿಕಲಾಂಗರ ಜೊತೆ ಕೆಲಸ ಮಾಡಿದ ಅನುಭವವನ್ನು ಹೊಂದಿರುವುದು ಕಡ್ಡಾಯವಾಗಿದೆ. 
ಸಂಬಳ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 44,000 ರೂ. ಸಂಬಳ ಸಿಗುತ್ತದೆ.

ಇದನ್ನೂ ಓದಿ:   ಬೆಂಗಳೂರಿನಲ್ಲಿ ₹50 ಕೋಟಿ ಅಪಾರ್ಟ್‌ಮೆಂಟ್ ಖರೀದಿಸಿ ವ್ಯಾಪಕ ಟೀಕೆಗೆ ಗುರಿಯಾದ ನಾರಾಯಣಮೂರ್ತಿ

undefined

ಆಯ್ಕೆ ನಡೆಯುವುದು ಹೀಗೆ:
ಈ ಸಿಆರ್‌ಪಿಎಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತದೆ.  ಅಭ್ಯರ್ಥಿಗಳು ಈ ಕೆಳಗೆ ಸೂಚಿಸಿದ ದಿನದಂದು ಈ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

ಸಂದರ್ಶನದ ದಿನಾಂಕ:  12 ಡಿಸೆಂಬರ್ 2024
ಸಮಯ: ಬೆಳಗ್ಗೆ 10 ಗಂಟೆ
ಸ್ಥಳ: NCDE, ಗ್ರುಪ್ ಸೆಂಟರ್, CRPFರಂಗಾರೆಡ್ಡಿ, ಹಕೀಂಪೇಟ್, ತೆಲಂಗಾಣ

ಇದನ್ನೂ ಓದಿ: 

click me!