ಬೆಂಗಳೂರಿನಲ್ಲಿ ₹50 ಕೋಟಿ ಅಪಾರ್ಟ್‌ಮೆಂಟ್ ಖರೀದಿಸಿ ವ್ಯಾಪಕ ಟೀಕೆಗೆ ಗುರಿಯಾದ ನಾರಾಯಣಮೂರ್ತಿ

ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಬೆಂಗಳೂರಿನ ಕಿಂಗ್‌ಫಿಶರ್ ಟವರ್‌ನಲ್ಲಿ 50 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ಕೆಲಸದ ಅವಧಿ, ನಟಿ ಕರೀನಾ ಕಪೂರ್ ಕುರಿತ ಹೇಳಿಕೆಗಳಿಂದಲೂ ಚರ್ಚೆಯಲ್ಲಿದ್ದರು.

Infosys Founder Narayana Murthy trolled From Netizens Over Purchase Of Rs 50 Cr Bengaluru Apartment in Kingfisher Towers mrq

ಬೆಂಗಳೂರು: ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಇನ್ಪೋಸಿಸ್  ಸ್ಥಾಪಕ  ನಾರಾಯಣಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದರು. ಈ ಹಿಂದೆ ಕೆಲಸ  ಅವಧಿ, ನಟಿ  ಕರೀನಾ  ಕಪೂರ್  ಕುರಿತ ಹೇಳಿಕೆಯಿಂದಾಗಿ ನಾರಾಯಣಮೂರ್ತಿ ವ್ಯಾಪಕ ಚರ್ಚೆಯಲ್ಲಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿನ  ಕಿಂಗ್‌ಫಿಶರ್  ಟವರ್‌ನಲ್ಲಿ 50 ಕೋಟಿ ರೂಪಾಯಿ  ಮೌಲ್ಯದ  ಅಪಾರ್ಟ್‌ಮೆಂಟ್  ಖರೀದಿಸಿದ್ದರು. ಇದೀಗ ಈ ವಿಷಯವಾಗಿ ನೆಟ್ಟಿಗರು ನಾರಾಯಣಮೂರ್ತಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ  ಇದೇ ಕಿಂಗ್‌ಫಿಶರ್ ಟವರ್‌ನಲ್ಲಿ 29 ಕೋಟಿ ರೂಪಾಯಿ ನೀಡಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು.  ಇದೀಗ ನಾರಾಯಣಮೂರ್ತಿ ಇಲ್ಲಿಯೇ 50 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.  ವಿಜಯ್ ಮಲ್ಯ ಪೂರ್ವಜರು 4.5 ಎಕರೆ ವಿಸ್ತೀರ್ಣದಲ್ಲಿ ಕಿಂಗ್ ಫಿಶರ್ ಟವರ್ ನಿರ್ಮಿಸಿದ್ದರು. ಇಲ್ಲಿಯೇ ಬಯೋಕಾನ್  ಚೇರ್‌ಪರ್ಸನ್ ಕಿರಣ್ ಮಜುಂದರ್ ಷಾ ಸೇರಿದಂತೆ ಭಾರತದ ಪ್ರಮುಖ ಉದ್ಯಮಿಗಳು ಇಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.

ಕಿಂಗ್‌ಫಿಶರ್ ಟವರ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗಾಗಿ ನಾರಾಯಣಮೂರ್ತಿ  50  ಕೋಟಿ ರೂಪಾಯಿ ಪಾವತಿಸಿದ್ದಾರೆ ಎಂಬ ವಿಷಯ ವರದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಒಂದು ಅಪಾರ್ಟ್‌ಮೆಂಟ್‌ ಗಾಗಿ  50 ಕೋಟಿ ರೂಪಾಯಿ  ಖರ್ಚು ಮಾಡಿರೋದಕ್ಕೆ ನೆಟ್ಟಿಗರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಮಾಡಿದ  ಕೆಲವು ಕಮೆಂಟ್‌ಗಳು ಇಲ್ಲಿವೆ.

ಇದನ್ನೂ ಓದಿ: 'ನೀವು ನನ್ನಂತಾಗಬಾರದು, ನನಗಿಂತ ಉತ್ತಮರಾಗಬೇಕು'; ನಾರಾಯಣಮೂರ್ತಿ ಜೀವನ ಪಾಠ

ನಾರಾಯಣಮೂರ್ತಿ  ಈ ಆಸ್ತಿಯನ್ನು ರಿಜಿಸ್ಟರ್  ಮಾಡಿಕೊಳ್ಳಲು  3 ಗಂಟೆ ವ್ಯರ್ಥ ಮಾಡಿದ್ದಾರೆ. ಹಾಗಾಗಿ ಒಂದು ವಾರದಲ್ಲಿ 67 ಗಂಟೆ ಕೆಲಸ ಮಾಡಬೇಕಾಗಿದೆ  ಎಂದು ಹಳೆಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇನ್ಫೋಸಿಸ್ ಉದ್ಯೋಗಿಗಳಿಗೆ ಇನ್ನೂ 10 ಗಂಟೆಗಳ ಕಾಲ ಕೆಲಸ ಮಾಡಲು ಸೂಚಿಸಲಾಗಿದೆ. ಹಾಗಾದ್ರೆ  ಮಾತ್ರ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಕ್ಕಳಿಗಾಗಿ ಕಿಂಗ್ ಫಿಶರ್ ಟವರ್‌ನಲ್ಲಿ ಇನ್ನೂ ಒಂದು ಫ್ಲಾಟ್ ಖರೀದಿಸಬಹುದು" ಎಂದು ನೆಟ್ಟಿಗರೊಬ್ಬರು  ಕಮೆಂಟ್ ಮಾಡಿದ್ದಾರೆ.

ಸರಳತೆ, ಸಹಾನುಭೂತಿಯ ಬಂಡವಾಳಶಾಹಿಯನ್ನು ಬೋಧಿಸುತ್ತಿದ್ದ ಅದೇ ವ್ಯಕ್ತಿ ಇಂದು ಬೆಂಗಳೂರಿನ ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50 ಕೋಟಿ ರೂಪಾಯಿಯ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇಷ್ಟು ಮಾತ್ರವಲ್ಲ ಈ ವ್ಯಕ್ತಿ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಬಯಸುತ್ತಾರೆ ಎಂದು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಮಗಿಂತ ಜೊಮ್ಯಾಟೋ ಮಾಲೀಕ ದೀಪೇಂದ್ರ ಹೇಗೆ ಶ್ರೇಷ್ಠ ಎಂಬುದನ್ನ ಹೇಳಿದ್ರು ನಾರಾಯಣಮೂರ್ತಿ

Latest Videos
Follow Us:
Download App:
  • android
  • ios