CRIS Recruitment 2022: ರೈಲ್ವೆ ಮಾಹಿತಿ ಕೇಂದ್ರದಲ್ಲಿ ಇಂಜಿನಿಯರ್ ಉದ್ಯೋಗ

Published : May 13, 2022, 04:44 PM IST
CRIS Recruitment 2022:  ರೈಲ್ವೆ ಮಾಹಿತಿ ಕೇಂದ್ರದಲ್ಲಿ ಇಂಜಿನಿಯರ್ ಉದ್ಯೋಗ

ಸಾರಾಂಶ

ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 150 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಮೇ.24 ಕೊನೆಯ ದಿನವಾಗಿದೆ.

ಬೆಂಗಳೂರು (ಮೇ.13): ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ (Centre for Railway Information Systems -CRIS) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸಹಾಯಕ ಸಾಫ್ಟ್‌ವೇರ್ ಇಂಜಿನಿಯರ್, ಸಹಾಯಕ ಡೇಟಾ ವಿಶ್ಲೇಷಕ ಸೇರಿ ವಿವಿಧ  ಒಟ್ಟು 150 ಹುದ್ದೆಗಳ ಭರ್ತಿಗೆ  ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೇ.24 ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ   ಅಧಿಕೃತ ವೆಬ್‌ಸೈಟ್‌ https://cris.org.in/ ಗೆ ಭೇಟಿ ನೀಡಲು ಕೋರಲಾಗಿದೆ. ಈ ಎಲ್ಲಾ ಹುದ್ದೆಗಳಿಗೆ  ಗೇಟ್‌ 2022 (GATE-2022) ಪರೀಕ್ಷೆಯ ಅಂಕಗಳನ್ನು ಆಧರಿಸಿ (ಕಂಪ್ಯೂಟರ್ ಸೈನ್ಸ್‌, ಮಾಹಿತಿ ತಂತ್ರಜ್ಞಾನ, ಸ್ಟ್ಯಾಟಿಸ್ಟಿಕ್ಸ್‌ ಪೇಪರ್) ನೇಮಕ  ಪ್ರಕ್ರಿಯೆ ನಡೆಯಲಿದೆ.

ಒಟ್ಟು 150 ಹುದ್ದೆಗಳ ಮಾಹಿತಿ ಇಂತಿದೆ
ಅಸಿಸ್ಟಂಟ್ ಸಾಫ್ಟ್‌ವೇರ್ ಇಂಜಿನಿಯರ್ ( Assistant Software Engineers): 144 ಹುದ್ದೆಗಳು
 ಅಸಿಸ್ಟಂಟ್ ಡಾಟಾ ಅನಾಲಿಸ್ಟ್‌ (Assistant Data Analyst ) : 6 ಹುದ್ದೆಗಳು 

MRPL RECRUITMENT 2022: ಎಂಜಿನಿಯರ್ ಓದಿರುವವರಿಗೆ ಸುವರ್ಣಾವಕಾಶ

ಶೈಕ್ಷಣಿಕ ವಿದ್ಯಾರ್ಹತೆ: ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಬಿ.ಇ / ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಕಂಪ್ಯೂಟರ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ಸ್ , MCA,B.Sc. ಪದವಿ (ಕಂಪ್ಯೂಟರ್ ಸೈನ್ಸ್). ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ M.E/ M.Tech ಸಹ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 21 ರಿಂದ 27 ವರ್ಷದ ಒಳಗಿನ ವಯಸ್ಸಿನವರಾಗಿರಬೇಕು. SC / ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

IOCL Recruitment 2022: ವಿವಿಧ ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ

ಅರ್ಜಿ ಶುಲ್ಕ: ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರದಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ₹1000 ಅರ್ಜಿ ಶುಲ್ಕ ಪಾವತಿಸಬೇಕು. SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರದಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. 

ವೇತನ ವಿವರ: ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರದಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗದ ಅನ್ವಯ ₹60,000 ವೇತನ ದೊರೆಯಲಿದೆ.

Uttara Kannada Anganwadi Recruitment 2022: ಒಟ್ಟು 76 ಹುದ್ದೆಗಳಿಗೆ ನೇಮಕಾತಿ 

ವಿವಿಧ ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ: ಕೇಂದ್ರ ಸರ್ಕಾರದ (Central Government) ಸ್ವಾಮ್ಯದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation- IOCL) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಐಒಸಿಎಲ್ (IOCL) ನಲ್ಲಿ ಒಟ್ಟು 19 ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್   ಹುದ್ದೆಗಳು ಖಾಲಿ ಇದ್ದು, ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ.28 ಆಗಿದೆ. ಹೆಚ್ಚಿನ ಮಾಹಿತಿಗಾಗಿ www.icol.com ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ  ಕೆಮಿಕಲ್ / ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ಬಿಎಸ್ಸಿ ಹೊಂದಿರಬೇಕು.  ಕನಿಷ್ಠ 45% ಅಂಕಗಳೊಂದಿಗೆ ಇನ್‌ಸ್ಟ್ರುಮೆಂಟೇಶನ್/ ಇನ್‌ಸ್ಟ್ರುಮೆಂಟೇಶನ್ ಮತ್ತು ಎಲೆಕ್ಟ್ರಾನಿಕ್ಸ್/ ಇನ್‌ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.

PREV
Read more Articles on
click me!

Recommended Stories

ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?