MRPL Recruitment 2022: ಎಂಜಿನಿಯರ್ ಓದಿರುವವರಿಗೆ ಸುವರ್ಣಾವಕಾಶ

By Suvarna NewsFirst Published May 13, 2022, 11:38 AM IST
Highlights

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ನೇಮಕಾತಿ ಅಧಿಸೂಚನೆ ಹೊರಡಿಸಿದೆ.  65  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನವಾಗಿದೆ.

ನವದೆಹಲಿ (ಮೇ.13): ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (Mangalore Refinery and Petrochemicals Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಸಿಸ್ಟೆಂಟ್ ಎಂಜಿನಿಯರ್ (Assistant Engineer), ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (Assistant Executive) ಸೇರಿ ಒಟ್ಟು 65  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,   ಬಿಇ, ಬಿಟೆಕ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ಮೇ 28 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು  ಅಧಿಕೃತ ವೆಬ್‌ಸೈಟ್ www.mrpl.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.  ನೇರವಾಗಿ ಅರ್ಜಿ ಸಲ್ಲಿಸಲು   mrplgate.recttindia.in ಗೆ ಭೇಟಿ ನೀಡಿ.

ಒಟ್ಟು 65 ಹುದ್ದೆಗಳ ಮಾಹಿತಿ ಇಂತಿದೆ:
ಕೆಮಿಕಲ್ ಎಂಜಿನಿಯರ್ :​ 20 ಹುದ್ದೆಗಳು
ಮೆಕ್ಯಾನಿಕಲ್ ಎಂಜಿನಿಯರ್​ : 20 ಹುದ್ದೆಗಳು
ಸಿವಿಲ್ ಎಂಜಿನಿಯರ್ : 3 ಹುದ್ದೆಗಳು
ಎಲೆಕ್ಟ್ರಿಕಲ್ ಎಂಜಿನಿಯರ್​ : 6 ಹುದ್ದೆಗಳು
ಇನ್ಸ್ಟ್ರುಮೆಂಟೇಶನ್ ಎಂಜಿನಿಯರ್​ : 7 ಹುದ್ದೆಗಳು
ಮೆಟಲರ್ಜಿಕಲ್ ಎಂಜಿನಿಯರ್​ : 1 ಹುದ್ದೆ
ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಅಧಿಕಾರಿ: 6 ಹುದ್ದೆಗಳು
ಕೆಮಿಸ್ಟ್​ : 2 ಹುದ್ದೆಗಳು

IOCL Recruitment 2022: ವಿವಿಧ ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಕೆಮಿಕಲ್ ಎಂಜಿನಿಯರ್ ಹುದ್ದೆಗೆ ಕೆಮಿಕಲ್ ಎಂಜಿನಿಯರಿಂಗ್ ಮಾಡಿರಬೇಕು
ಮೆಕ್ಯಾನಿಕಲ್ ಎಂಜಿನಿಯರ್ ​ಹುದ್ದೆಗೆ ಮೆಕ್ಯಾನಿಕಲ್ ಎಂಜಿನಿಯರ್ ಮಾಡಿರಬೇಕು
ಸಿವಿಲ್ ಎಂಜಿನಿಯರ್ ಹುದ್ದೆಗೆ ಸಿವಿಲ್ ಎಂಜಿನಿಯರ್ ಮಾಡಿರಬೇಕು
ಎಲೆಕ್ಟ್ರಿಕಲ್ ಎಂಜಿನಿಯರ್​ ಹುದ್ದೆಗೆ ಎಲೆಕ್ಟ್ರಿಕಲ್ ಎಂಜಿನಿಯರ್ ಮಾಡಿರಬೇಕು​ 
ಇನ್ಸ್ಟ್ರುಮೆಂಟೇಶನ್ ಎಂಜಿನಿಯರ್​ ಹುದ್ದೆಗೆ ಇನ್ಸ್ಟ್ರುಮೆಂಟೇಶನ್ ಎಂಜಿನಿಯರ್ ಮಾಡಿರಬೇಕು
ಮೆಟಲರ್ಜಿಕಲ್ ಎಂಜಿನಿಯರ್​ ಹುದ್ದೆಗೆ ಮೆಟಲರ್ಜಿಕಲ್ ಎಂಜಿನಿಯರ್​  ಮಾಡಿರಬೇಕು
ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಅಧಿಕಾರಿ ಹುದ್ದೆಗೆ ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಮಾಡಿರಬೇಕು
ಕೆಮಿಸ್ಟ್​ ಹುದ್ದೆಗೆ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು

ಅರ್ಜಿ ಶುಲ್ಕ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ, OBC ಮತ್ತು EWS ವರ್ಗದ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಪಾವತಿಸಬೇಕು. SC / ST / PwBD / ಮಾಜಿ ಸೈನಿಕ  ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಮೇ 21ರಂದು ನಿಗದಿಯಾಗಿರುವ NEET-PG Exam ಮುಂದೂಡುವಂತೆ ಮನವಿ

ವಯೋಮಿತಿ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 27 ಆಗಿರಬೇಕು. ಸರಕಾರದ ನಿಯಮಗಳ ಪ್ರಕಾರ ವರ್ಗಾನುಸಾರ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ:  ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮಾಸಿಕ ವೇತನ ದೊರೆಯಲಿದೆ.
 

click me!