Railway Recruitment 2022; ಈಶಾನ್ಯ ಗಡಿ ರೈಲ್ವೆಯಲ್ಲಿ 5636 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

Published : Jun 17, 2022, 04:10 PM IST
Railway Recruitment 2022; ಈಶಾನ್ಯ ಗಡಿ ರೈಲ್ವೆಯಲ್ಲಿ 5636 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ಸಾರಾಂಶ

ಈಶಾನ್ಯ ಫ್ರಾಂಟಿಯರ್ ರೈಲ್ವೆ  ಖಾಲಿ ಇರುವ ವಿವಿಧ ಅಂಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ  ಹೊರಡಿಸಿದೆ. ಒಟ್ಟು 5636 ಅಪ್ರೆಂಟಿಸ್ ತರಬೇತಿ ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 30  ಕೊನೆಯ ದಿನವಾಗಿದೆ.

ಬೆಂಗಳೂರು (ಜೂನ್ 17): ಈಶಾನ್ಯ ಫ್ರಾಂಟಿಯರ್ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಂಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ  ಹೊರಡಿಸಲಾಗಿದೆ. ವಿವಿಧ 5636 ಅಪ್ರೆಂಟಿಸ್ ತರಬೇತಿ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 30  ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://nfr.indianrailways.gov.in./ ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಈಶಾನ್ಯ ಗಡಿ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಂಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.  10 ನೇ ತರಗತಿ ಪರೀಕ್ಷೆಯಲ್ಲಿ  ಪಾಸ್ ಆಗಿರಬೇಕು. ಎನ್ಸಿವಿಟಿ / ಎಸ್ಸಿವಿಟಿ  ಯಿಂದ ಐಟಿಐ ವಿದ್ಯಾರ್ಹತೆ ಸರ್ಟಿಫಿಕೇಟ್‌  ಪಡೆದಿರಬೇಕು. ಜೊತೆಗೆ ಶೇ.50 ಅಂಕಗಳನ್ನು ಪಡೆದಿರಬೇಕು. ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಡೆದವರು, ಆಯಾ ಟ್ರೇಡ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

ವಯೋಮಿತಿ: ಈಶಾನ್ಯ ಫ್ರಾಂಟಿಯರ್ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಂಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 15 ರಿಂದ 24 ವರ್ಷದ ಒಳಗಿರಬೇಕು.

ಹಿಂದೂ ಎಂದು ಬರೆದಿದ್ದಕ್ಕೆ ಮೊರಾರ್ಜಿ ಶಾಲೆಯಲ್ಲಿ 71 ವಿದ್ಯಾರ್ಥಿಗಳಿಗಿಲ್ಲ ಪ್ರವೇಶ!

ಅರ್ಜಿ ಶುಲ್ಕ: ಈಶಾನ್ಯ ಫ್ರಾಂಟಿಯರ್ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಂಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಜನರಲ್ ಮತ್ತು OBC ಅಭ್ಯರ್ಥಿಗಳು 100 ರೂ., SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡಬೇಕಿಲ್ಲ. 

ಆಯ್ಕೆ ಪ್ರಕ್ರಿಯೆ: ಈಶಾನ್ಯ ಫ್ರಾಂಟಿಯರ್ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಂಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಎಸ್​ಎಸ್​ಎಲ್​ಸಿ ಮತ್ತು ಐಟಿಐನಲ್ಲಿ ಗಳಿಸಿದ ಅಂಕಗಳ  ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. 

ವೇತನ ವಿವರ: ಈಶಾನ್ಯ ಫ್ರಾಂಟಿಯರ್ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಅಂಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಕಾಯಿದೆ 1961 ಅನ್ವಯ ಮಾಸಿಕ ವೇತನ ದೊರೆಯಲಿದೆ.

BBMP Night School; ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಬಿಎಂಪಿ ತೆರೆಯಲಿದೆ ಸಂಜೆ 

ಗ್ರಾಜುಯೇಟ್ ಮತ್ತು ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ: ಭಾರತದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಸಶಸ್ತ್ರ ವಾಹನ ನಿಗಮ ಲಿಮಿಟೆಡ್‌ನ ಒಂದು ಘಟಕವಾದ ಚೆನ್ನೈ ಮೂಲದ ಹೆವಿ ವೆಹಿಕಲ್ಸ್‌ ಫ್ಯಾಕ್ಟರಿಯಲ್ಲಿ (Heavy Vehicles Factory)  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.  ಗ್ರಾಜುಯೇಟ್ ಮತ್ತು ಟೆಕ್ನಿಕಲ್ ಅಪ್ರೆಂಟಿಸ್ ಸೇರಿ ವಿವಿಧ   214 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 25, 2022 ಕೊನೆಯ ದಿನವಾಗಿದೆ.  ಪದವಿ ಹಾಗೂ ಡಿಪ್ಲೊಮ ಪಾಸ್ ಮಾಡಿದ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು. 

ಒಟ್ಟು 214 ಹುದ್ದೆಗಳ ಮಾಹಿತಿ ವಿವರ ಇಲ್ಲಿದೆ
ಗ್ರಾಜುಯೇಟ್‌ ಅಪ್ರೆಂಟಿಸ್ ಹುದ್ದೆಗಳಲ್ಲಿ 104 ಹುದ್ದೆಗಳಿದ್ದು ವಿವರ ಇಂತಿದೆ
ಮೆಕ್ಯಾನಿಕಲ್ ಎಂಜಿನಿಯರಿಂಗ್ : 50 ಹುದ್ದೆಗಳು  
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ : 10 ಹುದ್ದೆಗಳು  
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ 19 : ಹುದ್ದೆಗಳು  
ಸಿವಿಲ್ ಇಂಜಿನಿಯರಿಂಗ್ 15 : ಹುದ್ದೆಗಳು  
ಆಟೋಮೊಬೈಲ್ ಎಂಜಿನಿಯರಿಂಗ್ : 10 ಹುದ್ದೆಗಳು  

    

PREV
Read more Articles on
click me!

Recommended Stories

ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ