ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಕ: ಸಿಎಂ ಜಗನ್ ಇತಿಹಾಸ!

By Web Desk  |  First Published Oct 2, 2019, 9:22 AM IST

ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಿಸಿ ಇತಿಹಾಸ ಸೃಷ್ಟಿಸಿದ ಜಗನ್‌ ಸರ್ಕಾರ| ಈ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಮೊದಲ ರಾಜ್ಯ


ಅಮರಾವತಿ[ಸೆ.02]: ಸಿಬ್ಬಂದಿ ನೇಮಕಾತಿಯಲ್ಲಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಸೋಮವಾರ ಏಕಕಾಲದಲ್ಲಿ ಬರೋಬ್ಬರಿ 1.26 ಲಕ್ಷ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ. ಈ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಮೊದಲ ರಾಜ್ಯ ಎನಿಸಿಕೊಂಡಿದೆ.

ಮತ್ತೆ ಮದ್ಯ ನಿಷೇಧದತ್ತ ಆಂಧ್ರಪ್ರದೇಶ!

Tap to resize

Latest Videos

undefined

ಗ್ರಾಮಗಳು ಹಾಗೂ ವಾರ್ಡ್‌ ಮಟ್ಟದಲ್ಲಿ ಕಾರ್ಯದರ್ಶಿಗಳ ಹುದ್ದೆಗೆ ಒಟ್ಟು 21 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಸೆ.1-8ರ ಅವಧಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿದ್ದು, 19.50 ಲಕ್ಷ ಮಂದಿ ಪರೀಕ್ಷೆ ಬರೆದಿದ್ದಾರೆ. 1,98,164 ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಅವರಲ್ಲಿ 1,26,728 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮಾಜಿ ಸಿಎಂ ನಾಯ್ಡು ಮನೆ ಧ್ವಂಸಕ್ಕೆ ಆಂಧ್ರ ಸರ್ಕಾರದಿಂದ ಮತ್ತೊಂದು ನೋಟಿಸ್‌!

ಇವರಲ್ಲಿ 31,640 ಅಭ್ಯರ್ಥಿಗಳನ್ನು ನಗರ ಪ್ರದೇಶಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ.

click me!